ಹುಣಸೂರು: ಈ ಬಾರಿಯ ವಿಧಾನಸಭಾ ಚುನಾವಣೆಯಲ್ಲಿ ವರುಣಾ ಕ್ಷೇತ್ರದಿಂದ ಸ್ಪರ್ಧೆ ಮಾಡುತ್ತೇನೆಂದು ಮಾಜಿ ಎಂ.ಎಲ್.ಸಿ. ರಘು ಆಚಾರ್ ತಿಳಿಸಿದರು.
ಹುಣಸೂರು ತಾಲೂಕು ಅರಸು ಕಲ್ಲಹಳ್ಳಿಯ ಅರಸರ ಸಮಾಧಿಗೆ ಪುಷ್ಪಾರ್ಚನೆ ಗೈದು . ನಗರದ ಅರಸರ ಪುತ್ಥಳಿಗೆ ಮಾಲಾರ್ಪಣೆ ಮಾಡಿದ ನಂತರ ಮಾತನಾಡಿದ ರಘು ಆಚಾರ್ ಕುಮಾರಸ್ವಾಮಿ ಅವಕಾಶ ಕೊಟ್ಟರೆ ವರುಣಾದಲ್ಲಿ ಸ್ಪರ್ಧೆ ಮಾಡ್ತೀನಿ. ಟಿಕೆಟ್ ನೀಡುತ್ತಾರೆಂಬ ನಂಬಿಕೆ ಇದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಚಿತ್ರದುರ್ಗ ಬಿಟ್ಟು ಕೊಡುತ್ತೀರಾ ಎಂಬ ಪ್ರಶ್ನೆಗೆ ಚಿತ್ರದುರ್ಗದಲ್ಲಿ ಪತ್ನಿ ನಿಲ್ಲಿಸಿ ವರುಣಾದಿಂದ ನಾನು ಸ್ಪರ್ಧಿಸುತ್ತೇನೆ. ಸಿದ್ದರಾಮಯ್ಯ ವಿರುದ್ಧ ಸ್ಪರ್ಧೆ ಮಾಡಿ, ಗೆದ್ದು ತೋರಿಸ್ತಿನೆಂದು ವಿಶ್ವಾಸದ ಮಾತುಗಳನ್ನಾಡಿದರು.
ದೇವರಾಜ ಅರಸು ಮುಖ್ಯಮಂತ್ರಿ ಆಗಲ್ಲ ಅಂದಿದ್ರು ಆಗ್ಲಿಲ್ವ. ನಾನು ಮುಂದೊಂದು ದಿನ ಆಗಬಹುದು. ಈ ಬಾರಿಯ ಚುನಾವಣೆಯಲ್ಲಿ 197 ಸಣ್ಣ ಜಾತಿಯವರಿಗೆ ರಾಷ್ಟ್ರೀಯ ಪಕ್ಷವೆಂದು ಹೇಳಿಕೊಳ್ಳುವ ಕಾಂಗ್ರೆಸ್ ಒಂದು ಟಿಕೆಟ್ ಕೊಟ್ಟಿಲ್ಲವೆಂದು ಆರೋಪಿಸಿದರು.
Related Articles
ಮಾಜಿ ಮುಖ್ಯಮಂತ್ರಿ ದೇವರಾಜ ಅರಸು ಧೀಮಂತ ನಾಯಕರು. ಹಿಂದುಳಿದ ವರ್ಗಗಳ ನಿಜವಾದ ನಾಯಕ.
ನಾನು ರಾಜಕೀಯ ಶುರು ಮಾಡುವಾಗಲೂ ಡಿ.ದೇವರಾಜ ಅರಸುಗೆ ಪೂಜೆ ಸಲ್ಲಿಸಿದ್ದೆ. ಜೆಡಿಎಸ್ ಸೇರ್ಪಡೆ ಬಳಿಕವೂ ಆಶೀರ್ವಾದ ಪಡೆಯಲು ಬಂದಿದ್ದೇನೆ.
ಇದನ್ನೂ ಓದಿ:ಸ್ವ ಇಚ್ಛೆಯಿಂದಲೇ ನಿವೃತ್ತಿ ಘೋಷಿಸಿದ್ದೇನೆ: Eshwarappa ಮೊದಲ ಪ್ರತಿಕ್ರಿಯೆ
ಹಿಂದುಳಿದ ವರ್ಗಗಳ ನಾಯಕ ಎನಿಸಿಕೊಂಡ ಹಿಂದುಳಿದ ಸಮುದಾಯಗಳಿಗೆ ಏನೂ ಮಾಡಿಲ್ಲ. ಅಹಿಂದ ಆಟ ಈಬಾರಿಯ ಚುನಾವಣೆಯಲ್ಲಿ ಏನೂ ನಡೆಯಲ್ಲ.
ಮುಂದಿನ ದಿನಗಳಲ್ಲಿ ಕುಮಾರಸ್ವಾಮಿ ಮುಖ್ಯಮಂತ್ರಿ ಆಗಲಿದ್ದಾರೆಂಬ ವಿಶ್ವಾಸ ವ್ಯಕ್ತಪಡಿಸಿದರು. ರಘು ಆಚಾರ್ ರೊಂದಿಗೆ ಚಾಮುಂಡೇಶ್ವರಿ ಕ್ಷೇತ್ರದ ಶಾಸಕ ಜಿ.ಟಿ.ದೇವೇಗೌಡ.
ತಾಲೂಕು ಜೆಡಿಎಸ್ ಅಧ್ಯಕ್ಷ ದೇವರಾಜ ಒಡೆಯರ್, ನಗರಸಭೆ ಮಾಜಿ ಅಧ್ಯಕ್ಷ ಶಿವಕುಮಾರ್,ಪುರಸಭೆ ಮಾಜಿ ಅಧ್ಯಕ್ಷ ಚಂದ್ರಶೇಖರ್, ಯಶೋದಾ ಸೇರಿದಂತೆ ಜೆಡಿಎಸ್ ಮುಖಂಡರು ಕಾರ್ಯಕರ್ತರು ಹಾಜರಿದ್ದರು.