Advertisement

ಮಾಜಿ ಶಾಸಕ ಡಾ|ವಿಶ್ವನಾಥ್‌ ನಿಧನ 

07:50 AM May 21, 2018 | |

ಕಡೂರು: ಖ್ಯಾತ ಪ್ರಸೂತಿ ತಜ್ಞ, ಮಾಜಿ ಶಾಸಕ ಡಾ| ವೈ.ಸಿ.ವಿಶ್ವನಾಥ್‌ (68) ಬೆಂಗಳೂರಿನ ಖಾಸಗಿ
ಆಸ್ಪತ್ರೆಯಲ್ಲಿ ಭಾನುವಾರ ಬೆಳಗ್ಗೆ ನಿಧನರಾದರು.

Advertisement

ಹೃದಯ ಹಾಗೂ ಶ್ವಾಸಕೋಶ ಸಂಬಂಧಿ ಸಮಸ್ಯೆಯಿಂದ ಬಳಲುತ್ತಿದ್ದ ಇವರು ಮೇ 16 ರ ಸಂಜೆ ಅನಾರೋಗ್ಯಕ್ಕೀಡಾಗಿದ್ದಾರೆ. ತಕ್ಷಣ ಅವರದ್ದೇ ಆದ ಮಾರುತಿ ನರ್ಸಿಂಗ್‌ ಹೋಂನಲ್ಲಿ ಚಿಕಿತ್ಸೆ ನೀಡಲಾಗಿದೆ.
ಹೆಚ್ಚಿನ ಚಿಕಿತ್ಸೆಗಾಗಿ 17ರ ಬೆಳಗ್ಗೆ ಬೆಂಗಳೂರಿಗೆ ಕರೆದೊಯ್ಯಲಾಗಿತ್ತು. ಆದರೆ ಚಿಕಿತ್ಸೆ ಫಲಿಸದೆ ಭಾನುವಾರ ಮೃತಪಟ್ಟಿದ್ದಾರೆ.

ವಿಶ್ವನಾಥ್‌ ಅವರು ಪ್ರದೀಪ್‌ ಮತ್ತು ಪವನ್‌ ಹಾಗೂ ದಿವ್ಯ ಎಂಬ ಮೂವರು ಮಕ್ಕಳನ್ನು ಅಗಲಿದ್ದಾರೆ. 6 ತಿಂಗಳ ಹಿಂದಷ್ಟೆ ಇವರ ಪತ್ನಿ ಸುವರ್ಣಮ್ಮ ನಿಧನರಾಗಿದ್ದರು.

ಕಡೂರು ತಾಲೂಕಿನ ಯಳ್ಳಂಬಳಸೆಯ ವೈ.ಎನ್‌. ಚಂದ್ರಶೇಖರಯ್ಯ ಮತ್ತು ನೀಲಮ್ಮ ದಂಪತಿ ಪುತ್ರರಾದ ವಿಶ್ವನಾಥ್‌, ಎಂ.ಬಿ.ಬಿ.ಎಸ್‌ ಮತ್ತು ಡಿಜಿಒ ಪದವಿ  ಪಡೆದಿದ್ದರು. ಸರ್ಕಾರಿ ವೈದ್ಯರಾಗಿ ತಾಲೂಕಿನ ಸಿಂಗಟಗೆರೆ, ಯಳ್ಳಂಬಳಸೆ, ಪಂಚನಹಳ್ಳಿ, ಹಿರೇನಲ್ಲೂರು,ಯಗಟಿ, ಬಾಸೂರಿನಲ್ಲಿ ಸೇವೆ ಸಲ್ಲಿಸಿ ನಂತರ ಕಡೂರು ತಾಲೂಕು ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಸೂತಿ ತಜ್ಞರಾಗಿ ಕಾರ್ಯನಿರ್ವಹಿಸಿದರು. ಸುಮಾರು 70 ಸಾವಿರಕ್ಕೂ ಹೆಚ್ಚಿನ ಆಪರೇಷನ್‌ ನಡೆಸಿದ ಕೀರ್ತಿ ಇವರದ್ದು.

1998-99 ರಲ್ಲಿ ಸ್ವಯಂ ನಿವೃತ್ತಿ ಘೋಷಿಸಿ ಬಿಜೆಪಿ ಸೇರಿದರು. 2001 ರಿಂದ 2018 ರವರೆಗೆ ಕಡೂರು ಪಟ್ಟಣದ
ನಿವೃತ್ತ ವೈದ್ಯ ಡಾ| ಉಮೇಶ್‌ ರಾವ್‌ ಜೊತೆಗೂಡಿ ಮಾರುತಿ ನರ್ಸಿಂಗ್‌ ಹೋಂ ತೆರೆದು ರಾಜಕೀಯದ ಜೊತೆಯಲ್ಲಿಯೇ ವೈದ್ಯ ವೃತ್ತಿ ನಡೆಸುತ್ತಿದ್ದರು.

Advertisement

1998 ಹಾಗೂ 2008ರಲ್ಲಿ ಬಿಜೆಪಿಯಿಂದ ವಿಧಾನಸಭಾ ಚುನಾವಣೆಗೆ ಸ್ಪರ್ಧಿಸಿ ಪರಾಭ ವಗೊಂಡರು. 2010ರಲ್ಲಿ ಕಡೂರು ಶಾಸಕ ರಾಗಿದ್ದ ಕೆ.ಎಂ. ಕೃಷ್ಣಮೂರ್ತಿಯವರ ಅಕಾಲಿಕ ಮರಣದಿಂದ ತೆರವಾಗಿದ್ದ ಸ್ಥಾನಕ್ಕೆ ನಡೆದ ಉಪ ಚುನಾವಣೆಯಲ್ಲಿ ಸ್ಪರ್ಧಿಸಿ ಭಾರೀ ಗೆಲುವು ಸಾಧಿಸಿದರು. ಅಲ್ಲಿಂದ 3 ವರ್ಷಗಳ ಕಾಲ ಶಾಸಕರಾಗಿ ಕ್ಷೇತ್ರದ ಅಭಿವೃದಿಟಛಿಗೆ ದುಡಿದ ಅವರು 2013ರ ಚುನಾವಣೆಯಲ್ಲಿ ಸ್ಪರ್ಧೆಯಿಂದ ಹಿಂದೆ ಸರಿದು ಪಕ್ಷದ ಪರವಾಗಿ ದುಡಿದಿ
ದ್ದರು. ಈ ಬಾರಿಯ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿ ಬೆಳ್ಳಿಪ್ರಕಾಶ್‌ರವರ ಪರ ಹಳ್ಳಿಹಳ್ಳಿ ಗಳಿಗೆ ತೆರಳಿ ಪ್ರಚಾರ ಮಾಡಿದ ವಿಶ್ವನಾಥ್‌ ಬೆಳ್ಳಿ ಪ್ರಕಾಶ್‌ ಅವರ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next