Advertisement

ಚನ್ನಸಾಗರದಲ್ಲಿ ಪಡಿತರ ಕಿಟ್ ವಿತರಿಸಿದ ಮಾಜಿ ಶಾಸಕ ಸುಧಾಕರ ಲಾಲ್

07:31 PM Aug 04, 2022 | Team Udayavani |

ಕೊರಟಗೆರೆ: ಮಳೆ ಆರ್ಭಟದಿಂದ ಚನ್ನಸಾಗರ ಗ್ರಾಮವೇ ಜಯಮಂಗಲಿ ನದಿಯ ನೀರಿನಲ್ಲಿ ಮುಳುಗಿದೆ. 80 ಮನೆಗಳ ಗೊಡೆಗಳು ಬಿರುಕುಬಿಟ್ಟು ಭಯದ ವಾತವರಣ ನಿರ್ಮಾಣವಾಗಿದೆ. ರೈತರು ಮನೆಯಲ್ಲಿ ಶೇಖರಣೆ ಮಾಡಲಾಗಿದ್ದ ಲಕ್ಷಾಂತರ ರೂ. ಮೌಲ್ಯದ ಧವಸದಾನ್ಯ ಮಳೆಯ ನೀರಿನಲ್ಲಿ ಕೊಚ್ಚಿಹೋಗಿದೆ. ಮಧುಗಿರಿ ಆಡಳಿತ ಮತ್ತು ತುಮಕೂರು ಜಿಲ್ಲಾಡಳಿತ ತಕ್ಷಣ ರೈತರ ನೆರವಿಗೆ ದಾವಿಸಬೇಕಾಗಿದೆ.

Advertisement

ಕೊರಟಗೆರೆ ವಿಧಾನಸಭಾ ಕ್ಷೇತ್ರ ಪುರವಾರ ಹೋಬಳಿ ಕೊಡಗದಾಲ ಗ್ರಾಪಂ ವ್ಯಾಪ್ತಿಯ ಚನ್ನಸಾಗರ ಗ್ರಾಮದಲ್ಲಿ ಒಟ್ಟು 80 ಕ್ಕೂ ಅಧಿಕ ಕುಟುಂಬಗಳಿವೆ. ಪುರುಷರು, ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ 400ಕ್ಕೂ ಅಧಿಕ ಜನತೆ ವಾಸವಿದ್ದಾರೆ. ಸ್ಥಳೀಯವಾಗಿ ಸರಕಾರಿ ಶಾಲೆ, ಅಂಗನವಾಡಿ ಕೇಂದ್ರವಿದ್ದು ಮಳೆಯ ನೀರಿನಲ್ಲಿ ಮುಳುಗಡೆ ಆಗಿ ಸಮಸ್ಯೆ ಸೃಷ್ಟಿಯಾಗಿದೆ.

ಚನ್ನಸಾಗರ ಗ್ರಾಮದ 80 ಮನೆಯಲ್ಲಿ ರೈತರು ಶೇಖರಣೆ ಮಾಡಿದ್ದ ರಾಗಿ, ಭತ್ತ ಮತ್ತು ದಿನಸಿ ವಸ್ತುಗಳು ಸಂಪೂರ್ಣ ನಾಶವಾಗಿದೆ. ಜಯಮಂಗಳಿ ನದಿಯ ನೀರು ಮನೆಯೊಳಗೆ ನುಗ್ಗಿರುವ ಪರಿಣಾಮ ಮನೆಯ ಆವರಣ ಕೆಸರು ಗದ್ದೆಯಾಗಿದೆ. ವಿದ್ಯಾರ್ಥಿಗಳ ಪುಸ್ತಕ ಮತ್ತು ರೈತರ ದಾಖಲೆಗಳು ಸಂಪೂರ್ಣ ನೀರಿನಲ್ಲಿ ಕೊಚ್ಚಿಹೋಗಿವೆ. ಜಾನುವಾರುಗಳಿಗೆ ಶೇಖರಣೆ ಮಾಡಿದ್ದ ಮೇವು ಸಹ ನೀರಿನಲ್ಲಿ ಹರಿದುಹೋಗಿದೆ.

ಸುವರ್ಣಮುಖಿ, ಜಯಮಂಗಲಿ ಮತ್ತು ಗರುಡಾಚಲ ನದಿಯ ಸಂಗಮಸ್ಥಳವಾದ ಚನ್ನಸಾಗರ ಗ್ರಾಮವು ಅಪಾಯ ಸ್ಥಿತಿಗೆ ತಲುಪಿದೆ. ೩ನದಿಗಳ ಸಂಗಮ ಸ್ಥಳಕ್ಕೆ ಸರಕಾರ ಹೆಚ್ಚಿನ ಭದ್ರತೆಯ ಜೊತೆಗೆ ಅಭಿವೃದ್ದಿಗೆ ಆಧ್ಯತೆ ನೀಡಬೇಕಾದ ಅನಿವಾರ್ಯತೆ ಇದೆ. ಗೌರಿಬಿದನೂರು-ಮಧುಗಿರಿಯ ನಡುವೆಯ ಸೇತುವೆಯ ಸಮೀಪವೇ ಇರುವ ಗ್ರಾಮಕ್ಕೆ ಹೆಚ್ಚಿನ ಜಾಗೃತಿ ಮತ್ತು ಕಾಳಜಿಯ ಅವಶ್ಯಕತೆ ಇದೆ.

80 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ
ಜಯಮಂಗಲಿ ನದಿಯ ನೀರಿನಿಂದ ಚನ್ನಸಾಗರ ಗ್ರಾಮವು ಜಲಾವೃತವಾದ ಪರಿಣಾಮ ಮಾಜಿ ಶಾಸಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಜನರ ರಕ್ಷಣೆಗೆ ಮುಂದಾಗಿದ್ದಾರೆ. ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ನೇತೃತ್ವದ ತಂಡ ಚನ್ನಸಾಗರ ಗ್ರಾಮಕ್ಕೆ ಭೇಟಿ ನೀಡಿ 80 ಕುಟುಂಬಗಳಿಗೆ ಪಡಿತರ ಕಿಟ್ ವಿತರಣೆ ಮಾಡಿ ಸಂಕಷ್ಟದಲ್ಲಿರುವ ರೈತರಿಗೆ ಧೈರ್ಯ ತುಂಬುವ ಕೆಲಸ ಮಾಡಿದ್ದಾರೆ.

Advertisement

ಚನ್ನಸಾಗರ ಗ್ರಾಮವು ನೀರಿನಿಂದ ಜಲಾವೃತವಾಗಿ ಮನೆಯಲ್ಲಿದ್ದ ದವಸದಾನ್ಯ ನಾಶವಾಗಿವೆ. ಮನೆಗಳ ಗೊಡೆಗಳು ಕುಸಿದು ರೈತರ ಜೀವನ ಬೀದಿಗೆ ಬಂದಿದೆ. ವಿದ್ಯಾರ್ಥಿಗಳ ವ್ಯಾಸಂಗಕ್ಕೆ ಈಗಾಗಲೇ ಸಮಸ್ಯೆ ಎದುರಾಗಿದೆ. ನಾನು ಇಂದು 80 ಕುಟುಂಬಕ್ಕೆ ಆಹಾರದ ಕಿಟ್ ವಿತರಿಸಿದ್ದೇನೆ. ಸರಕಾರ ತಕ್ಷಣ ರೈತರ ನೆರವಿಗೆ ಆಗಮಿಸಬೇಕಿದೆ ಎಂದು ಮಾಜಿ ಶಾಸಕ ಪಿ.ಆರ್.ಸುಧಾಕರಲಾಲ್ ಹೇಳಿದರು.

ಅಂಗನವಾಡಿ ಕೇಂದ್ರದಲ್ಲಿದ್ದ ದಾಖಲೆ ಮತ್ತು ದಿನಸಿ ಸಾಮಾನು ನಾಶವಾಗಿವೆ. ಪ್ರಸ್ತುತವು ಕಟ್ಟಡದೊಳಗೆ ನೀರಿನಿಂದ ಜಲಾವೃತವಾಗಿದೆ. ಮಕ್ಕಳ ಆಡಿಕೆ ಸಾಮಾನು ಮತ್ತು ಟೇಬಲ್ ಹಾಳಾಗಿವೆ. ಅಂಗನವಾಡಿ ಕೇಂದ್ರ ಸ್ಥಳಾಂತರಕ್ಕೆ ಈಗಾಗಲೇ ತಾಲೂಕು ಮಟ್ಟದ ಅಧಿಕಾರಿಗಳ ಗಮನಕ್ಕೆ ತರಲಾಗಿದೆ.
ಸರಸ್ಪತಿ. ಅಂಗನವಾಡಿ ಕಾರ್ಯಕರ್ತೆ

ಚನ್ನಸಾಗರ ಗ್ರಾಮದ ೮೦ಮನೆಗಳಲ್ಲಿ ೩೮೦ಕ್ಕೂ ಅಧಿಕ ಜನ ವಾಸವಿದ್ದಾರೆ. ಮುಂಜಾನೆ ಘಟನೆಯಾದ ಪರಿಣಾಮ ನಾವೇಲ್ಲ ಬದುಕಿದ್ದೇವೆ. ಜಾನುವಾರುಗಳ ರಕ್ಷಣೆ ಮತ್ತು ಬಿತ್ತನೆ ಮಾಡಿದ ಬೆಳೆಯು ಮುಳುಗಿದೆ. ಅಂಗನವಾಡಿ ಮತ್ತು ಶಾಲೆಗೆ ತೆರಳಲು ಮಕ್ಕಳ ವ್ಯಾಸಂಗಕ್ಕೆ ಸಮಸ್ಯೆ ಎದುರಾಗಿದೆ. ನಮಗೆ ಶಾಶ್ವತವಾದ ಪರಿಹಾರವನ್ನು ಸರಕಾರ ಮಾಡಬೇಕಿದೆ.
ಲಕ್ಷ್ಮೀ ನಾರಾಯಣ ಗ್ರಾಮಸ್ಥ, ಚನ್ನಸಾಗರ

 

Advertisement

Udayavani is now on Telegram. Click here to join our channel and stay updated with the latest news.

Next