Advertisement

ಮಾಜಿ ಶಾಸಕ, ಅಪ್ಪಟ ಗಾಂಧಿವಾದಿ ಸದಾಶಿವರಾವ್ ಭೋಸಲೆ ಇನ್ನಿಲ್ಲ

10:57 AM Apr 15, 2021 | Team Udayavani |

ಬೆಳಗಾವಿ: ಸ್ವಾತಂತ್ರ್ಯ ಹೋರಾಟಗಾರ, ಗಾಂಧಿವಾದಿ ಹಾಗೂ ಮಾಜಿ ಶಾಸಕ ಸದಾಶಿವರಾವ್ ಬಾಪುಸಾಹೇಬ ಭೋಸಲೆ (101) ಗುರುವಾರ ಬೆಳಗ್ಗೆ ತಾಲೂಕಿನ ಕಡೋಲಿ ಗ್ರಾಮದ ತಮ್ಮ ನಿವಾಸದಲ್ಲಿ ನಿಧನ ಹೊಂದಿದರು.

Advertisement

ಕೆಲವು ದಿನಗಳಿಂದ ಸದಾಶಿವರಾವ್ ಅವರು ವಯೋಸಹಜ ಅನಾರೋಗ್ಯದಿಂದಾಗಿ ಬಳಲುತ್ತಿದ್ದರು. ಇತ್ತೀಚೆಗೆ ಸಾರ್ವಜನಿಕ ಕಾರ್ಯಕ್ರಮಗಳನಲ್ಲಿಯೂ ಪಾಲ್ಗೊಳ್ಳುತ್ತಿರಲಿಲ್ಲ. ಸದಾಶಿವ ರಾವ್ ಭೋಸಲೆ ಅವರು ಪುತ್ರ, ಪುತ್ರಿ ಸೇರಿದಂತೆ ಬಂಧು ಬಳಗವನ್ನು ಅಗಲಿದ್ದಾರೆ.‌ ಗುರುವಾರ ಮಧ್ಯಾಹ್ನ ಗ್ರಾಮದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ.

ಅಪ್ಪಟ ಗಾಂಧಿವಾದಿ ಆಗಿದ್ದ ಮಾಜಿ ಸದಾಶಿವರಾವ್ ಭೋಸಲೆ ಸ್ವಾತಂತ್ರ್ಯ ಹೋರಾಟಗಾರರಾಗಿದ್ದರು. ಗಾಂಧೀಜಿ ಹಾಗೂ ವಿನೋಬಾ ಭಾವೆ ಅವರ ವಿಚಾರಧಾರೆ, ಆದರ್ಶಗಳನ್ನು ಅಳವಡಿಸಿಕೊಂಡಿದ್ದರು. ಜೀವನದ ಕೊನೆಯ ದಿನಗಳವರೆಗೂ ಆ ವಿಚಾರಧಾರೆಗಳಿಗೆ ಕಟಿಬದ್ಧರಾಗಿದ್ದರು.

ಇದನ್ನೂ ಓದಿ:10 ದಿನಗಳಲ್ಲಿ ಮತ್ತಷ್ಟು ಹೆಚ್ಚಳ; ಭಾರತದಲ್ಲಿ 24 ಗಂಟೆಯಲ್ಲಿ 2 ಲಕ್ಷ ಕೋವಿಡ್ ಪ್ರಕರಣ ಪತ್ತೆ

ಬ್ರಿಟಿಷ್ ಸರ್ಕಾರ 1946ರಲ್ಲಿ ಚುನಾವಣೆ ನಡೆಸಿದಾಗ ಬೆಳಗಾವಿಯು ಮುಂಬೈ ಪ್ರಾಂತ್ಯಕ್ಕೆ ಒಳಪಟ್ಟಿತ್ತು. ಬೆಳಗಾವಿ ದಕ್ಷಿಣ ಕ್ಷೇತ್ರದಿಂದ ಸ್ಪರ್ಧಿಸಿ ಶಾಸಕರಾಗಿದ್ದರು. 1952ರಲ್ಲಿ ಹಿರೇಬಾಗೇವಾಡಿ ಕ್ಷೇತ್ರದಿಂದ ಶಾಸಕರಾಗಿದ್ದರು. ಸರ್ಕಾರ ಬಡವರ ಪರವಾಗಿ ಕೆಲಸ ಮಾಡುತ್ತಿಲ್ಲ‌ ಎಂದು ಅಸಮಾಧಾನ ಹೊರ ಹಾಕಿ 1954ರಲ್ಲಿ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ಭೂ ದಾನ ಚಳವಳಿಯಲ್ಲಿ ಪಾಲ್ಗೊಂಡಿದ್ದರು.

Advertisement

ಇದನ್ನೂ ಓದಿ: ಸೋಂಕು ನಿಯಂತ್ರಣಕ್ಕೆ ರಾತ್ರಿ ಕರ್ಫ್ಯೂ ಇನ್ನಷ್ಟು ನಗರಗಳಿಗೆ ವಿಸ್ತರಣೆ: ಗೃಹ ಸಚಿವ ಬೊಮ್ಮಾಯಿ

ತಮಗೆ ಹಾಗೂ ಪತ್ನಿಗೆ ಬೇಕಾದ ಖಾದಿ ಬಟ್ಟೆಗಳನ್ನು ಚರಕದಲ್ಲಿ ಸ್ವತಃ ಅವರೇ ಸಿದ್ಧಪಡಿಸಿಕೊಳ್ಳುತ್ತಿದ್ದರು. ಗ್ರಾಮದಲ್ಲಿ ಸಾವಯವ ಕೃಷಿ ನಡೆಸುತ್ತಿದ್ದರು. ಸರಳ ಜೀವನ ನಡೆಸುತ್ತಿದ್ದರು. ಕಡೋಲಿ ಸಮೀಪದ ದೇವಗಿರಿಯಲ್ಲಿ ಕಟ್ಟಡ ಕಟ್ಟಿಸಿ ಅದಕ್ಕೆ ‘ಗಾಂಧಿ ಘರ್‌’ಎಂದು ಹೆಸರಿಟ್ಟಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next