Advertisement

ಬಿಜೆಪಿಯಿಂದ ಸ್ಪರ್ಧೆ ಖಚಿತ

12:25 PM Mar 28, 2023 | Team Udayavani |

ದೇವನಹಳ್ಳಿ: ಕಾಂಗ್ರೆಸ್‌ ಮತ್ತು ಜನತಾದಳದ ಕೆಲವು ಮುಖಂಡರು ನನ್ನ ಮೇಲೆ ಇಲ್ಲಸಲ್ಲದ ಆರೋಪಗಳನ್ನು ಮಾಡಿಕೊಂಡು, ಬಹಳ ಸುಲಭವಾಗಿ ಅಧಿಕಾರವನ್ನು ಪಡೆಯುವ ಆಸೆಯಿಂದ ಕಾಂಗ್ರೆಸ್‌ನಿಂದ ಮಾಜಿ ಕೇಂದ್ರ ಸಚಿವ ಕೆ.ಎಚ್‌.ಮುನಿಯಪ್ಪ ಅವರನ್ನು ಅಧಿಕೃತ ಅಭ್ಯರ್ಥಿಯಾಗಿ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವುದರಿಂದ ಒಂದೇ ಜಾತಿಯ ವರಾಗಿರುವ ಬಿಜೆಪಿಯಿಂದ ನಾನು ಹಿಂದೆ ಸರಿಯುತ್ತಾರೆಂಬ ವದಂತಿಗೆ ಯಾರು ಕಿವಿ ಗೊಡಬೇಡಿ ಎಂದು ಬಿಜೆಪಿ ಸ್ಪರ್ಧಾ ಆಕಾಂಕ್ಷಿ ಅಭ್ಯರ್ಥಿ ಹಾಗೂ ಮಾಜಿ ಶಾಸಕ ಪಿಳ್ಳಮುನಿ ಶಾಮಪ್ಪ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ಪಟ್ಟಣದ ಬಿಜೆಪಿ ಕಚೇರಿಯಲ್ಲಿ ಪತ್ರಿಕಾ ಗೋಷ್ಠಿ ನಡೆಸಿ ಮಾತನಾಡಿದರು. ಅಧಿಕಾರ ದಾಸೆಗೆ ಕಾಂಗ್ರೆಸ್‌ನಲ್ಲಿ ಲೋಕಸಭಾ ಮಾಜಿ ಸದಸ್ಯ ಕೋಲಾರದ ಕೆ.ಎಚ್‌.ಮುನಿಯಪ್ಪ ಅಧಿಕೃತ ಅಭ್ಯರ್ಥಿಯಾಗಿ ಘೋಷಿಸಿದ್ದಾರೆ. ಜೆಡಿಎಸ್‌ನಿಂದ ಅಧಿಕೃತವಾಗಿ ಎಲ್‌.ಎನ್‌. ನಾರಾಯಣ ಸ್ವಾಮಿ ಅಭ್ಯರ್ಥಿಯಾಗಿ ಸ್ಪರ್ಧಿ ಸುತ್ತಿದ್ದಾರೆ ಎಂದು ಹೇಳಿದರು.

ಬಿಜೆಪಿಯಿಂದ ಅಧಿಕೃತವಾಗಿ ಅಭ್ಯರ್ಥಿ ಘೋಷಣೆಯಾಗಿಲ್ಲ: ಈಗಾಗಲೇ ಹೈಕಮಾಂಡ್‌ ಸಮೀಕ್ಷೆ ನಡೆಸಿದ್ದು, ಇನ್ನೆರಡು ಮೂರು ದಿನಗಳಲ್ಲಿ ಅಭ್ಯರ್ಥಿಯನ್ನು ಅಧಿ ಕೃತವಾಗಿ ಘೋಷಿಸುವ ನಿರೀಕ್ಷೆ ಇದ್ದು, ನನಗೆ ಟಿಕೆಟ್‌ ಸಿಗುವ ಬಹಳಷ್ಟು ವಿಶ್ವಾಸವಿದೆ. ನಮ್ಮ ಪಕ್ಷದಲ್ಲಿಯೂ ಸಹ ಎರಡೂ ಮೂರು ಆಕಾಂಕ್ಷಿ ಅಭ್ಯರ್ಥಿಗಳಿದ್ದಾರೆ. ಈ ಹಿಂದೆ ಪಕ್ಷಕ್ಕೆ ಸೇರ್ಪಡೆಗೊಳ್ಳುವ ಮೊದಲೇ ಕ್ಷೇತ್ರದ ಉಸ್ತುವಾರಿಗಳು ಹಾಗೂ ಹೈಕಮಾಂಡ್‌ ನವರು ಅಭ್ಯರ್ಥಿ ಎಂದು ಸೂಚಿಸಿರುತ್ತಾರೆ.

ಅಭಿವೃದ್ಧಿ ಕೆಲಸಗಳೇ ನನಗೆ ಶ್ರೀರಕ್ಷೆ: ನನಗೆ ಟಿಕೆಟ್‌ ಶೇ.100ರಷ್ಟು ಸಿಗಲಿದೆ ಎಂಬ ನಿರೀಕ್ಷೆ ಇದೆ. ಇಂದಿನಿಂದಲೇ ಪ್ರತಿ ಗ್ರಾಮಗಳಿಗೆ ತೆರಳಿ ಮನೆಮನೆಗೆ ಭೇಟಿ ಮಾಡಿ, ಮತದಾರರನ್ನು ಸಂಪರ್ಕಿಸುತ್ತೇನೆ. ಈ ಹಿಂದೆ ಶಾಸಕನಾಗಿ ಹಲವಾರು ಅಭಿವೃದ್ಧಿ ಕೆಲಸಗಳು ಮಾಡಿರುವುದು ನನಗೆ ಶ್ರೀರಕ್ಷೆಯಾಗಲಿದೆ ಎಂದು ಭಾವಿಸುತ್ತೇನೆ. ಬೇರೆ ಪಕ್ಷದವರು ಪಿಳ್ಳಮುನಿಶಾಮಪ್ಪ ಅವರು ಬಿಜೆಪಿಯಿಂದ ಹಿಂದೆ ಸರಿಯು ತ್ತಿದ್ದಾರೆಂಬ ವದಂತಿಗಳು ಹರಿದಾ ಡುತ್ತಿದ್ದು, ಆದರೆ, ಯಾವುದೇ ಕಾರಣಕ್ಕೂ ಬಿಜೆಪಿ ಪಕ್ಷದ ಲ್ಲಿಯೇ ಪಕ್ಷದ ಹೈಕಮಾಂಡ್‌ ಟಿಕೆಟ್‌ ನೀಡು ತ್ತಾರೆಂಬ ಆಶಾ ಭಾವನೆಯಲ್ಲಿದ್ದು, ಯಾವುದೇ ಕಾರಣಕ್ಕೂ ಹಿಂದೆ ಸರಿಯುವ ಪ್ರಶ್ನೆಯೇ ಬರುವುದಿಲ್ಲ ಎಂದು ಸ್ಪಷ್ಟೀಕರಿಸಿದರು.

ಈ ಸಂದರ್ಭದಲ್ಲಿ ತಾಲೂಕು ಪಂಚಾಯಿತಿ ಮಾಜಿ ಉಪಾಧ್ಯಕ್ಷ ಎಸ್‌. ಎಂ.ನಾರಾಯಣ ಸ್ವಾಮಿ, ಪುರಸಭಾ ಸದಸ್ಯ ಬಾಂಬೆ ನಾರಾಯಣಸ್ವಾಮಿ, ರಾಜ್ಯ ಪರಿಷತ್‌ ಸದಸ್ಯ ದೇ.ಸು.ನಾಗ ರಾಜ್‌, ಟೌನ್‌ ಬಿಜೆಪಿ ಅಧ್ಯಕ್ಷ ಸಂದೀಪ್‌, ಮುಖಂಡರಾದ ಮಂಜುನಾಥ್‌, ಕದಿರಪ್ಪ, ಶ್ಯಾನಪ್ಪನಹಳ್ಳಿ ರವಿ, ಅಣ್ಣೇಶ್ವರ ಮೋಹನ್‌, ಕಾರ್ಯಕರ್ತರು ಸೇರಿ ದಂತೆ ಮತ್ತಿತರರಿದ್ದರು.

Advertisement

ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧ : ಬಯಪ್ಪ ಮಾಜಿ ಅಧ್ಯಕ್ಷ ಎಸ್‌ಎಲ್‌ಎನ್‌ ಅಶ್ವತ್‌ನಾರಾಯಣ್‌ ಮಾತನಾಡಿ, ಪಕ್ಷದಲ್ಲಿ ವರಿಷ್ಠರ ತೀರ್ಮಾನಕ್ಕೆ ನಾವೆಲ್ಲರೂ ಬದ್ಧರಾಗಿದ್ದೇವೆ. ಈ ಹಿಂದೆ ಸ್ಥಳೀಯರೇ ಆಗಿರುವ ಪಿಳ್ಳಮುನಿಶಾಮಪ್ಪ ಅವರು ತಾಲೂಕಿನ ಜನರ ನಾಡಿ ಮಿಡಿತವನ್ನು ಅರಿತಿದ್ದಾರೆ. ಯಾವ ಗ್ರಾಮ ಎಲ್ಲಿ ಬರುತ್ತದೆ. ಏನೇಲ್ಲಾ ಸಮಸ್ಯೆಗಳು ಇವೆ ಎಂಬುವುದರ ಬಗ್ಗೆ ಅರಿತಿರುವ ವ್ಯಕ್ತಿಯಾಗಿರುತ್ತಾರೆ. ಅದ್ದರಿಂದ ಈ ಬಾರಿ ವಿಧಾನಸಭಾ ಚುನಾವಣೆಗೆ ಇವರಿಗೆ ಟಿಕೆಟ್‌ ಸಿಕ್ಕಿದರೆ, ಮತ್ತಷ್ಟು ದೇವನಹಳ್ಳಿಯನ್ನು ಬಿಜೆಪಿಯಿಂದಲೇ ಅಭಿವೃದ್ಧಿಗೊಳಿಸುವ ಎಲ್ಲಾ ಯೋಜನೆ ಗಳು ಮಾಡಿಕೊಳ್ಳಲಾಗುತ್ತದೆ. ಇವರು ಶಾಸಕರಾಗಿದ್ದ ಸಂದರ್ಭದಲ್ಲಿ ಯಾವುದೇ ಒಂದು ಕಪ್ಪುಚುಕ್ಕೆ ಇಲ್ಲದೆ ಜನರ ಪ್ರೀತಿಯನ್ನು ಗಳಿಸಿರುವ ಮಾದರಿ ಶಾಸಕರಾಗಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next