Advertisement
ಬೆಂಗಳೂರಿನಿಂದ ಗುರುವಾರ ಅಪರಾಹ್ನ 2 ಗಂಟೆಗೆ ವೋಲ್ವೊ ಬಸ್‌ನಲ್ಲಿ ಹೊರಟಿದ್ದ ಗೋಪಾಲ ಭಂಡಾರಿ ಅವರು ಮಂಗಳೂರು ಬಸ್ ನಿಲ್ದಾಣ ತಲುಪಿದರೂ ಬಸ್‌ನಿಂದ ಇಳಿಯದಿರುವುದನ್ನು ಕಂಡ ನಿರ್ವಾಹಕರು ಅಲ್ಲಿಯೇ ಇದ್ದ ಪೊಲೀಸರಿಗೆ ತಿಳಿಸಿದರು. ಕೂಡಲೇ ಅವರನ್ನು ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಅಲ್ಲಿ ಭಂಡಾರಿ ಮೃತಪಟ್ಟಿರುವುದಾಗಿ ಘೋಷಿಸಲಾಯಿತು.
1952ರ ಜುಲೈ 7ರಂದು ಜನಿಸಿದ್ದ ಭಂಡಾರಿ ಅವರು ಎರಡು ಬಾರಿ ಕಾರ್ಕಳ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಆಯ್ಕೆಯಾಗಿದ್ದರು. 1999ರಲ್ಲಿ ತಮ್ಮ ಪ್ರತಿಸ್ಪರ್ಧಿ ಬಿಜೆಪಿಯ ಕೆ.ಪಿ.ಶೆಣೈ ವಿರುದ್ಧ ಗೆಲುವು ಸಾಧಿಸಿದ ಗೋಪಾಲ್ ಭಂಡಾರಿ ಅವರು ಬಳಿಕ 2004ರ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾಗಿದ್ದ ವಿ. ಸುನಿಲ್ ಕುಮಾರ್ ವಿರುದ್ಧ ಸೋಲನುಭವಿಸಿದ್ದರು. 2008ರಲ್ಲಿ ನಡೆದ ಚುನಾವಣೆಯಲ್ಲಿ ಮತ್ತೊಮ್ಮೆ ಗೋಪಾಲ ಭಂಡಾರಿ ಅವರು ಶಾಸಕರಾಗಿ ಆಯ್ಕೆಯಾಗಿದ್ದರು. ಅವರು ಪತ್ನಿ, ಇಬ್ಬರು ಪುತ್ರರು ಮತ್ತು ಪುತ್ರಿಯನ್ನು ಅಗಲಿದ್ದಾರೆ.