Advertisement

ಶ್ರೀರಾಮುಲು ನಡೆಗೆ ಮಾಜಿ ಶಾಸಕ ಗೋವಿಂದಪ್ಪ ಅಸಮಾಧಾನ

09:42 AM Oct 26, 2019 | Sriram |

ಚಿತ್ರದುರ್ಗ: ಮಳೆ ಹಾನಿ ಪ್ರದೇಶಗಳಿಗೆ‌ ಭೇಟಿ‌‌ ನೀಡಲು ಬಂದಿದ್ದ ಜಿಲ್ಲಾ ಉಸ್ತುವಾರಿ ಸಚಿವ ಶ್ರೀರಾಮುಲು ವಿರುದ್ಧ ಹೊಸದುರ್ಗ ಮಾಜಿ ಶಾಸಕ ಬಿ.ಜಿ. ಗೋವಿಂದಪ್ಪ ಆಕ್ರೋಶ ವ್ಯಕ್ತಪಡಿಸಿದ್ದಾರೆ.

Advertisement

ತಮ್ಮ ಪ್ರವಾಸದ ಪಟ್ಟಿಯಂತೆ ಮಳೆಯಿಂದ ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ‌ ನೀಡದೇ ಅರ್ಧದಿಂದ ವಾಪಾಸು ತೆರಳಿದ ರಾಮುಲು ನಡೆಯನ್ನು ಖಂಡಿಸಿದ್ದಾರೆ.

ತಾಲೂಕಿನ ಜನ ಸಚಿವರಿಂದ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಆದರೆ, ಸಂತ್ರಸ್ತರ ನೋವು ಆಲಿಸದೆ ಅರ್ಧಕ್ಕೆ ಬಂದು ಹೋಗಿರುವುದು ಅವರಿಗಿರುವ ಜವಾಬ್ದಾರಿ ತೋರಿಸುತ್ತದೆ ಎಂದಿದ್ದಾರೆ.

ಮನೆ ಹಾನಿ , ಬೆಳೆ ಹಾನಿ ಪ್ರದೇಶಗಳಿಗೆ ಭೇಟಿ ನೀಡದೆ ತೆರಳಿದ್ದು ದುರಂತ.ನೊಂದ ಗ್ರಾಮೀಣ ಜನರಿಗೆ ಪರಿಹಾರದ ಭರವಸೆಯೂ ನೀಡಿಲ್ಲ ಎಂದು ಗೋವಿಂದಪ್ಪ ಅಸಮಾಧಾನ ವ್ಯಕ್ತಪಡಿಸಿದರು.

ಸಿಎಂ ಸಭೆ ನಡೆಸಿ ಸೂಚಿಸಿದರೂ ಈವರೆಗೆ ನೊಂದವರಿಗೆ ಪರಿಹಾರ ಸಿಕ್ಕಿಲ್ಲ. ಶಾಸಕರು, ಸಂಸದರೂ ನಮ್ಮ ತಾಲೂಕಿನ ಜನರ ಸಮಸ್ಯೆಗೆ ಸ್ಪಂದಿಸಿಲ್ಲ.

Advertisement

ಪ್ರವಾಹ ಪೀಡಿತ ಜನರ ಸಮಸ್ಯೆ ಬಗ್ಗೆ ಸಚಿವರಿಗೆ ತಿಳಿಸಲು ಬಂದಿದ್ದೆ. ಆದರೆ, ಶ್ರೀರಾಮುಲು ಅರ್ಧಕ್ಕೆ ಪ್ರವಾಹ ಪೀಡಿತ ಪ್ರದೇಶ ಭೇಟಿ ಮೊಟಕುಗೊಳಿಸಿ ತೆರಳಿದ್ದಾರೆ ಎಂದರು.

ನಿನ್ನೆ ಶ್ರೀರಾಮುಲು ಆಪ್ತ ಕಾರ್ಯದರ್ಶಿಗಳು ಕಳಿಸಿದ್ದ ಪ್ರವಾಸದ ಪಟ್ಟಿಯ ಪ್ರಕಾರ ರಾಮಗಿರಿ ಬಳಿ ಇರುವ ಸುಡುಗಾಡು ಸಿದ್ದರ ಕಾಲೋನಿ ಹಾಗೂ ಕೆಲ್ಲೋಡು ಬಳಿ ಭೇಟಿ‌ ನೀಡಬೇಕಾಗಿತ್ತು. ಆದರೆ, ಲೋಕದೊಳಲು, ನೀರಗುಂದ ಭೇಟಿ ನಂತರ ಸಾಣೇಹಳ್ಳಿ ಮಠಕ್ಕೆ ಭೇಟಿ ನೀಡಿ ಶ್ರೀ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಆಶೀರ್ವಾದ ಪಡೆದು ವಾಪಾಸಾಗಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next