Advertisement

ಮಾಜಿ ಶಾಸಕ ಬಾಕಿಲ ಹುಕ್ರಪ್ಪ  ನಿಧನ

07:59 AM Nov 21, 2017 | Team Udayavani |

ಸುಬ್ರಹ್ಮಣ್ಯ: ಮಾಜಿ ಶಾಸಕ ಬಾಕಿಲ ಹುಕ್ರಪ್ಪ (65) ಅವರು ನ. 20ರಂದು ನಾಲ್ಕೂರು ಗ್ರಾಮದ ಕೋಣೆಕಾನ ಗುಂಡಡ್ಕದಲ್ಲಿರುವ ಸ್ವಗೃಹದಲ್ಲಿ ಅಸೌಖ್ಯದಿಂದ ನಿಧನ ಹೊಂದಿದರು. ಅವರು ಪತ್ನಿ, ಓರ್ವ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ.

Advertisement

ಕೆಲವು ಸಮಯಗಳಿಂದ ಅಸ್ವಸ್ಥ ರಾಗಿದ್ದ ಅವರು ಇತ್ತೀಚೆಗೆ ಪಾರ್ಶ್ವ ವಾಯು ಕಾಯಿಲೆಗೆ ತುತ್ತಾಗಿ ಹಾಸಿಗೆ ಹಿಡಿದಿದ್ದರು. ಚಿಕಿತ್ಸೆ ಫ‌ಲಕಾರಿಯಾಗದೆ ಸೋಮವಾರ ಮುಂಜಾನೆ ಮೃತಪಟ್ಟರು. 1983ರಲ್ಲಿ ರಾಮಕೃಷ್ಣ ಹೆಗಡೆ ಮುಖ್ಯಮಂತ್ರಿ ಆಗಿದ್ದ ಅವಧಿಯಲ್ಲಿ ಬಿಜೆಪಿಯಿಂದ ಸುಳ್ಯ ವಿಧಾನ ಸಭಾ ಕ್ಷೇತ್ರದ ಚುನಾವಣೆಯಲ್ಲಿ ಸ್ಪರ್ಧಿಸಿ ಶಾಸಕರಾಗಿ ಆಯ್ಕೆಯಾಗಿದ್ದರು. 1983ರಿಂದ 1985ರ ತನಕ ಶಾಸಕ ರಾಗಿದ್ದ ಅವರು ತಾಲೂಕಿನ ಪ್ರಥಮ ಶಾಸಕ ಎಂಬ ಹೆಗ್ಗಳಿಕೆ ಹೊಂದಿದ್ದರು.

ಶಾಸಕನ ಅವಧಿಯಲ್ಲಿ ಅಮೆ ರಿಕದ ಲಾಸ್‌ಏಂಜಲೀಸ್‌, ಪ್ಯಾರಿಸ್‌ ಮುಂತಾದ ವಿದೇಶಗಳಿಗೆ ಒಲಿಂಪಿಕ್ಸ್‌ ಕ್ರೀಡೆ ವೀಕ್ಷಿಸಲು ಪ್ರವಾಸ ತೆರಳಿ ದ್ದರು. ಜನಸಂಘ ಮತ್ತು ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಕಾರ್ಯ ಕರ್ತ ರಾಗಿದ್ದ ಅವರು ತನ್ನ ಸುದೀರ್ಘ‌ ರಾಜಕೀಯ ಜೀವನದಲ್ಲಿ ಬಹುತೇಕ ಎಲ್ಲ ರಾಜಕೀಯ ಪಕ್ಷಗಳಲ್ಲಿ ಗುರುತಿಸಿ ಕೊಂಡಿದ್ದರು.

ಗುತ್ತಿಗಾರು ಗ್ರಾ.ಪಂ. ಅಧ್ಯಕ್ಷರಾಗಿಯೂ ಸೇವೆ ಸಲ್ಲಿ ಸಿರುವ ಅವರು ಯಕ್ಷಗಾನ ಕಲಾವಿದರಾಗಿ, ಅತ್ಯುತ್ತಮ ಕ್ರೀಡಾಪಟುವಾಗಿ ಹಲವಾರು ಪ್ರಶಸ್ತಿಗಳನ್ನು ಪಡೆದು ಸಮ್ಮಾನಿತರಾಗಿದ್ದರು. ಶಾಸಕನಾಗಿದ್ದ ಅವಧಿಯಲ್ಲಿ ಉತ್ತಮ ಕಾರ್ಯನಿರ್ವಹಿಸಿದ್ದ ಅವರ ನಿಧನದ ಸುದ್ದಿ ತಿಳಿದು ಅವರ ನಿವಾಸಕ್ಕೆ ಅಪಾರ ಸಂಖ್ಯೆಯ ಒಡನಾಡಿಗಳು, ವಿವಿಧ ಪಕ್ಷಗಳ ಗಣ್ಯರು ಭೇಟಿ ನೀಡಿ ಅಂತಿಮ ದರ್ಶನ ಪಡೆದು ಸಂತಾಪ ಸೂಚಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next