Advertisement

ಮಾಜಿ ಸಚಿವ ಡಾ. ವೈ. ನಾಗಪ್ಪ ನಿಧನ

10:22 AM Oct 27, 2020 | keerthan |

ದಾವಣಗೆರೆ: ಹಲವು ದಿನಗಳಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಹರಿಹರ ವಿಧಾನಸಭಾ ಕ್ಷೇತ್ರದ ಮಾಜಿ ಶಾಸಕ, ಧರಂ ಸಿಂಗ್ ಸಂಪುಟದಲ್ಲಿ ಸಚಿವರಾಗಿದ್ದ ಡಾ.ವೈ ನಾಗಪ್ಪ (75) ಅವರು ಇಂದು ನಿಧನರಾದರು.

Advertisement

ಹರಿಹರ ವಿಧಾನ ಸಭಾ ಕ್ಷೇತ್ರದಿಂದ 1989, 1999 ಹಾಗೂ 2004 ರಲ್ಲಿ ಶಾಸಕರಾಗಿ ಆಯ್ಕೆಯಾಗಿದ್ದರು. 2004 ರಲ್ಲಿ ಕಾಂಗ್ರೆಸ್ ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ ಸಮಾಜ ಕಲ್ಯಾಣ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

2008 ರಲ್ಲಿ ಮತ್ತೆ ಹರಿಹರ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿದ ಡಾ. ವೈ ನಾಗಪ್ಪನವರು ಪರಾಭವಗೊಂಡರು. ನಂತರ ಬದಲಾದ ರಾಜಕೀಯದಿಂದ ಮತ್ತು ಅನಾರೋಗ್ಯದಿಂದ ರಾಜಕಾರಣದಿಂದ ತೆರೆಮರೆಗೆ ಸರಿದಿದ್ದರು.

ಆಕಸ್ಮಿಕ ರಾಜಕಾರಣ ಪ್ರವೇಶ

ಡಾ. ವೈ ನಾಗಪ್ಪನವರು ಆಕಸ್ಮಿಕವಾಗಿ ರಾಜಕಾರಣಕ್ಕೆ ಕಾಲಿಟ್ಟಿದ್ದರು. 1980 ರಲ್ಲಿ ಹರಿಹರ ತಾಲ್ಲೂಕು ಆಸ್ಪತ್ರೆಯಲ್ಲಿ ವೈದ್ಯರಾಗಿ ಕಾರ್ಯನಿರ್ವಹಿಸುತ್ತಿದ್ದರು. ಆಗ ಶಾಸಕರಾಗಿದ್ದ ಹೆಚ್ ಶಿವಪ್ಪ ಇವರನ್ನು ಪದೇ ಪದೇ ವರ್ಗಾವಣೆ ಮಾಡಿಸಿದಾಗ ಬೇಸತ್ತು ಶಾಸಕರಿಗೆ ಸೆಡ್ಡು ಹೊಡೆದು ನೀನು ಮನಸ್ಸು ಮಾಡಿದರೆ ಡಾಕ್ಟರ್ ಆಗೋದಕ್ಕೆ ಆಗಲ್ಲ. ಆದರೆ ನಾನು ಮನಸ್ಸು ಮಾಡಿದರೆ ಎಂಎಲ್ಎ ಆಗುತ್ತೇನೆ ಎಂದು ಚಾಲೆಂಜ್ ಮಾಡಿದ್ದರು.

Advertisement

ಇದನ್ನೂ ಓದಿ:ಅನುರಾಗ್ ಕಶ್ಯಪ್ ವಿರುದ್ಧ ಅತ್ಯಾಚಾರ ಆರೋಪ ಮಾಡಿದ್ದ ನಟಿ ಪಾಯಲ್ ಘೋಷ್ ಅಠವಳೆ ಪಕ್ಷ ಸೇರ್ಪಡೆ

ಹೀಗೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಧುಮುಕಿದ ನಾಗಪ್ಪ ಹರಿಹರ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ನಂತರ ಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದರು.

ಮೃತರು ಒಬ್ಬ ಪುತ್ರ, ಮೂವರು ಹೆಣ್ಣುಮಕ್ಕಳು, ಮೊಮ್ಮಕ್ಕಳು ಹಾಗೂ ಅಪಾರ ಅಭಿಮಾನಿ ಬಳಗವನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆ ಇಂದು ಸಂಜೆ 5 ಗಂಟೆಗೆ ಹರಿಹರದಲ್ಲಿ ನಡೆಯಲಿದೆ.

Advertisement

Udayavani is now on Telegram. Click here to join our channel and stay updated with the latest news.

Next