ಕಟಪಾಡಿ: ಉದ್ಯಾವರ ಗ್ರಾ.ಪಂ. ಆಡಳಿತವು ಕೇವಲ ವ್ಯಾಪಾರಕ್ಕೋಸ್ಕರ ಸೀಮಿತವಾಗಿದೆ. ಜನಸಾಮಾನ್ಯರಿಗೆ ಸೇವೆಯನ್ನು ನೀಡಲು ವಿಫಲವಾಗಿದೆ. ನಡೆಯುತ್ತಿರುವ ಕರ್ಮಕಾಂಡ, ಭೃಷ್ಟಾಚಾರ ನಿಲ್ಲಬೇಕು. 15 ದಿನಗಳೊಳಗಾಗಿ ಗ್ರಾ.ಪಂ. ಆಡಳಿತ ಸುವ್ಯವಸ್ಥೆಗೆ ಕ್ರಮ ಕೈಗೊಳ್ಳದಿದ್ದಲ್ಲಿ ವಾರ್ಡುವಾರು ಪ್ರತಿಭಟನೆ, ನಡೆಸಲಾಗುತ್ತದೆ. ಪಂಚಾಯತ್ ಗೆ ಮುತ್ತಿಗೆ ಹಾಕಲಾಗುತ್ತದೆ. ಜನಸಾಮಾನ್ಯರಿಗಾಗುವ ತೊಂದರೆಗಳ ವಿರುದ್ಧ ಜೈಲಿಗೆ ಹೋಗಲೂ ಸಿದ್ಧ ಎಂದು ಮಾಜಿ ಸಚಿವ ವಿನಯ ಕುಮಾರ್ ಸೊರಕೆ ಹೇಳಿದರು.
ಅವರು ಮಂಗಳವಾರ ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಸಮಿತಿಯ ಆಶ್ರಯದಲ್ಲಿ ಉದ್ಯಾವರ ಗ್ರಾ.ಪಂ.ನಿಷ್ಕ್ರಿಯತೆ ವಿರುದ್ಧ ಮತ್ತು ಖಾಯಂ ಪಿಡಿಒ ನೇಮಕ ಆಗ್ರಹಿಸಿ ಗ್ರಾ.ಪಂ. ಕಚೇರಿಯ ಎದುರು ನಡೆದ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದರು.
ವರ್ಗಾವಣೆಯ ಪ್ರಲಾಪದಿಂದ ಕಾಪುವಿನಲ್ಲಿ 26 ಗ್ರಾ.ಪಂ.ಗಳ ಪೈಕಿ 10 ದೊಡ್ಡ ಪಂಚಾಯತ್ ಗ ಳಲ್ಲಿ ಖಾಯಂ ಪಿಡಿಒ ಇಲ್ಲವಾಗಿದೆ. ಉದ್ಯಾವರ ಗ್ರಾ.ಪಂ.ನಲ್ಲಿಯೂ ನಾಗರೀಕರಿಗೆ ಸೇವೆಯನ್ನು ನೀಡಲು ವಿಫಲವಾಗಿ ಆಡಳಿತ ವ್ಯವಸ್ಥೆಯು ನೆಲಕಚ್ಚಿದೆ. ಗ್ರಾಮದ ಅಭಿವೃದ್ಧಿಗೆ ಹಿನ್ನಡೆಯಾಗಿದೆ. ಕಾಪು ಕ್ಷೇತ್ರದ ಶಾಸಕರು ಜವಾಬ್ದಾರಿ ಅರಿತು ಜನಸಾಮಾನ್ಯರಿಗೆ ಸ್ಪಂದಿಸಲಿ ಎಂದರು
ಈ ಹಿಂದೆ ಕ್ಷೇತ್ರದ ಶಾಸಕನಾಗಿದ್ದ ಅವಧಿ ಯಲ್ಲಿ ಉದ್ಯಾವರ ಗ್ರಾಮಕ್ಕೆ ಸುಮಾರು 100 ಕೋಟಿ ರೂ. ಅನುದಾನವನ್ನು ಹೊಂದಿಸಿಕೊಂಡು ಸಮಗ್ರವಾಗಿ ಅಭಿವೃದ್ಧಿ ಕೆಲಸ ಕಾರ್ಯಗಳನ್ನು ಮಾಡಲಾಗಿದೆ. ಇದೀಗ ಅಧಿ ಕಾರದಲ್ಲಿದ್ದರೂ ಅಭಿವೃದ್ಧಿ ಕೆಲಸ ಕಾರ್ಯಗಳಿಗೆ ಅಡ್ಡಿಪಡಿಸುವ ಬಿಜೆಪಿಗೆ ಆಡಳಿತ ಪಕ್ಷ ಎಂಬುದು ಮರೆತಂತಿದೆ. ಪ್ರಕೃತಿ ವಿಕೋಪಕ್ಕೂ ಲಕ್ಷಕ್ಕೂ ಅಧಿ ಕ ಪರಿಹಾರ ನೀಡಲಾಗಿದ್ದು, ಅನಂತರದ ಪ್ರಕೃತಿ ವಿಕೋಪದ ಸಮರ್ಪಕ ಹಣ ಬಿಡುಗಡೆಯಾಗಿಲ್ಲ ಎಂದು ತಿಳಿಸಿದರು
ಉದ್ಯಾವರ ಗ್ರಾ.ಪಂ.ನಲ್ಲಿ ಬಿಲ್ ಪಾವತಿಸದೆ ಇಂಟರ್ನೆಟ್ ಸ್ಥಗಿತಗೊಂಡಿದೆ. ಕಡತಗಳು ಕಾಣೆಯಾಗುತ್ತಿದೆ. ಉದ್ಯಾವರದಲ್ಲಿ ಬಿಜೆಪಿ ಒಡೆದು ಹೋಳಾಗಿದೆ. ಪಕ್ಷದೊಳಗಿನ ಬೆಂಬಲ ಇಲ್ಲದೆ ಆಡಳಿತ ವಿಫಲವಾಗಿದೆ. ಗ್ರಾಮದ ಅಭಿವೃದ್ಧಿಯ ಕ್ರಿಯಾಯೋಜನೆಯೇ ನಡೆದಿಲ್ಲ. ಪಂಚಾಯತ್ ಕಸದ ತೊಟ್ಟಿಯಂತಾಗಿದೆ. ಗ್ರಾ.ಪಂ. ಆಡಳಿತ ನಿಷ್ಕ್ರಿಯಗೊಳ್ಳುವ ಮೂಲಕ ಜನತೆಯ ಮೂಲಾಧಾರದ ವ್ಯವಸ್ಥೆಗೆ ಕೊಳ್ಳಿ ಇರಿಸಿದಂತಾಗಿದೆ ಎಂದು ಪ್ರಮುಖರಾದ ಉದ್ಯಾವರ ನಾಗೇಶ್ ಕುಮಾರ್, ಲಾರೆನ್ಸ್ ಡೇಸಾ, ಮಾಜಿತಾ.ಪಂ. ಅಧ್ಯಕ್ಷೆ ಶ್ಯಾಮಲಾಸುಧಾಕರ್ ಆರೋಪಿಸಿದರು.
ಪಕ್ಷದ ಕಚೇರಿಯ ಆವರಣದಿಂದ ಪ್ರತಿಭಟನಾ ಸ್ಥಳಕ್ಕೆ ಕಾರ್ಯಕರ್ತರ ಕಾಲ್ನಡಿಗೆ ಜಾಥ ನಡೆಯಿತು.
ಈ ಸಂದರ್ಭ ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರುಗಳಾದ ಪ್ರವೀಣ್ ಶೆಟ್ಟಿ ಕೊರಂಗ್ರಪಾಡಿ, ನವೀನ್ ಚಂದ್ರ ಸುವರ್ಣ, ಉದ್ಯಾವರ ಗ್ರಾಮೀಣ ಕಾಂಗ್ರೆಸ್ ಅಧ್ಯಕ್ಷ ಗಿರೀಶ್ ಕುಮಾರ್, ಪ್ರ|ಕಾರ್ಯದರ್ಶಿ ರೋಯ್ಸ್ ಮರ್ವಿನ್ ಫೆರ್ನಾಂಡಿಸ್, ಪ್ರಮುಖರಾದ ದಿವಾಕರಬೊಳ್ಜೆ, ಮಿಥೇಶ್ ಸು ವರ್ಣ, ಗಿರೀಶ್ ಗುಡ್ಡೆಯಂಗಡಿ, ಹೆಲೆನ್ ಫೆರ್ನಾಂಡಿಸ್, ಉದ್ಯಾವರ ಗ್ರಾ.ಪಂ.ಮಾಜಿ ಅಧ್ಯಕ್ಷರುಗಳಾದ ಚಂದ್ರಾವತಿಭಂಡಾರಿ, ಸರಳಾಕೋಟ್ಯಾನ್, ಸುಗಂಧಿ ಶೇಖರ್, ಮಹಿಳಾ ಕಾಂಗ್ರೆಸ್ ಗೀತಾವಾಗ್ಳೆ, ಪ್ರಭಾ ಬಿ.ಶೆಟ್ಟಿ, ಮೇರಿ ಡಿಸೋಜ, ಜ್ಯೋತಿ ಮೆನನ್, ಶಾಂತಲ ತಾ ಶೆಟ್ಟಿ, ಅಶ್ವಿನಿ ಪಕ್ಷದ ಪ್ರಮುಖರಾದ ರಿಯಾಜ್ ಪಳ್ಳಿ, ಆಬಿದ್ ಆಲಿ, ಅಶೋಕ್ ನಾಯರಿ, ಜಿತೇಂದ್ರ ಫುಟಾರ್ದೋ, ದೀಪಕ್ ಎರ್ಮಾ ಳು, ಶಿವಾಜಿ ಸುವರ್ಣ ಬೆಳ್ಳೆ, ಕೇಶವ ಸಾಲ್ಯಾನ್, ಸುಧಿ ರ್, ಸತೀಶ್ ದೇಜಾಡಿ,ಕರುಣಾಕರ ಪೂಜಾರಿ ರತನ್ ಶೆಟ್ಟಿ ಸಾಧಿಕ್ ದಿನಾರ್ ಇಮ್ರಾನ್ ಪ್ರಭಾಕರ ಆಚಾರ್ಯ, ಶರ್ಫು ದ್ದಿನ್, , ಶ್ರೀಕರ್ ಅಂಚನ್, ವಿವಿಧ ಗ್ರಾ.ಪಂ. ಅಧ್ಯಕ್ಷರುಗಳು, ಮಾಜಿ ತಾ.ಪಂ. ಸದಸ್ಯರುಗಳು, ಗ್ರಾ.ಪಂ. ಹಾಲಿ/ಮಾಜಿ ಸದಸ್ಯರುಗಳು, ಕಾಂಗ್ರೆಸ್ನ ಪಕ್ಷದ ವಿವಿಧ ಪದಾಕಾರಿಗಳು, ಕಾರ್ಯಕರ್ತರು, ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು