Advertisement

ಮಾಜಿ ಸಚಿವ ರಾಚಯ್ಯ ಸಂಸ್ಮರಣೆ

04:29 PM Feb 15, 2021 | Team Udayavani |

ಚಾಮರಾಜನಗರ: ಮಾಜಿ ರಾಜ್ಯಪಾಲ ಬಿ. ರಾಚಯ್ಯ ಅವರ 21ನೇ ವರ್ಷದ ಸಂಸ್ಮರಣಾ ಕಾರ್ಯಕ್ರಮ ತಾಲೂಕಿನಆಲೂರಿನ ರಾಚಯ್ಯ ಪುಣ್ಯಭೂಮಿಯಲ್ಲಿಭಾನುವಾರ ನಡೆಯಿತು.

Advertisement

ಮಾಜಿ ಶಾಸಕ ಎಸ್‌. ಜಯಣ್ಣ ಸೇರಿದಂತೆ ಅನೇಕ ಗಣ್ಯರು ರಾಚಯ್ಯನವರ ಸ್ಮಾರಕಕ್ಕೆ ಪುಷ್ಪನಮನ ಸಲ್ಲಿಸಿದರು.

ಬಿ. ರಾಚಯ್ಯನವರ ಪುತ್ರ ಮಾಜಿ ಶಾಸಕ ಎ.ಆರ್‌.ಕೃಷ್ಣಮೂರ್ತಿ, ಜಿಪಂಸದಸ್ಯ ಆರ್‌. ಬಾಲರಾಜು ಹಾಗೂಕುಟುಂಬದವರು ರಾಚಯ್ಯನವರ ಭಾವಚಿತ್ರಕ ವಿಶೇಷ ಪೂಜೆ ಸಲ್ಲಿಸಿದರು.

ಬಳಿಕ ನಡೆದ ಸಂಸ್ಮರಣೋತ್ಸವ  ಕಾರ್ಯಕ್ರಮದಲ್ಲಿ ಮಾತನಾಡಿದ ಮಾಜಿ ಶಾಸಕ ಎಸ್‌. ಜಯಣ್ಣ, ಅವರು ವಹಿಸಿಕೊಂಡ ಖಾತೆಗಳನ್ನು ಸಮರ್ಥವಾಗಿ ನಿರ್ವಹಿಸಿ ಎಲ್ಲ ವರ್ಗದವರ ಬಡವರಿಗೆ ನ್ಯಾಯ ದೊರಕಿಸಿಕೊಟ್ಟಿದ್ದಾರೆ ಎಂದು ಸ್ಮರಿಸಿದರು.

ಪ್ರಾಧ್ಯಾಪಕ ಡಾ. ಹೊಂಗನೂರು ನಂಜಯ್ಯ ಮಾತನಾಡಿ, ಬಿ. ರಾಚಯ್ಯ ಕಡುಬಡ ಕುಟುಂಬದಲ್ಲಿ ಹುಟ್ಟಿ, ಕಷ್ಟಪಟ್ಟು ವ್ಯಾಸಂಗ ಮಾಡಿ ಉನ್ನತಪದವಿಗಳನ್ನು ಪಡೆದು ರಾಜಕಾರಣಕ್ಕೆಬಂದವರು. ಸರಳ ಮತ್ತು ಸಜ್ಜನಿಕೆಯಲ್ಲಿ ರಾಜ್ಯ ಹಾಗೂ ರಾಷ್ಟ್ರೀಯರಾಜಕಾರಣದಲ್ಲಿ ಛಾಪು ಮೂಡಿಸುವಂತೆ ಮಾಡಿದರು. ಅವರ ಜೀವನ ಚರಿತ್ರೆ ಪುಸ್ತಕವನ್ನು ಬರೆದ ನಾನು ಪುಣ್ಯವಂತ. ಅವರು ಹೆಸರಿನಲ್ಲಿರುವ ರಾಚಯ್ಯ ಜೀವನ ಚರಿತ್ರೆವುಳ್ಳ ರಾಚಯ್ಯ ಮತ್ತು ರಾಜನೀತಿ ಪುಸ್ತಕದ ಜೊತೆಗೆ ನನ್ನ ಹೆಸರು ಸಹ ಶಾಶ್ವತವಾಗಿ ಉಳಿಯುತ್ತದೆ. 2023ಕ್ಕೆ ರಾಚಯ್ಯನವರ 100ನೇ ವರ್ಷದ ಜನ್ಮ ದಿನವನ್ನು ಅದ್ಧೂರಿಯಾಗಿ ಆಚರಿಸಲಾಗುವುದು. ಈಗಾಗಲೇ ಸ್ಮರಣೆ ಸಂಚಿಕೆಗಾಗಿ ಸಿದ್ಧತೆ ನಡೆದಿದ್ದು, ಹಬ್ಬ ಹಾಗೂ ಜಾತ್ರೆಯ ಮಾದರಿಯಲ್ಲಿ ರಾಚಯ್ಯನವರ ಶತಮಾನೋತ್ಸವದ ಜಯಂತಿ ಆಚರಿಸೋಣ ಎಂದರು.

Advertisement

ಜಿಪಂ ಮಾಜಿ ಉಪಾಧ್ಯಕ್ಷ ಜೆ. ಯೋಗೇಶ್‌, ಚಾಮುಲ್‌ ನಿರ್ದೇಶಕ ನಂಜುಂಡಸ್ವಾಮಿ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಾದ ಬಿ. ತೋಟೇಶ್‌, ಹೊಂಗನೂರು ಚಂದ್ರು, ಯಳಂದೂರು ತಾಪಂ ಅಧ್ಯಕ್ಷ ಸಿ ದ್ದರಾಜು, ಕೊಪ್ಪಳಿ ಮಹದೇವನಾಯಕ, ಕೊಳ್ಳೇಗಾಲದ ನಾಗರಾಜು, ಎಸ್‌. ಸೋಮನಾಯಕ, ತಾಪಂ ಮಾಜಿ ಸದಸ್ಯ ಉಮ್ಮತ್ತೂರು ನಾಗೇಶ್‌, ಆಲ್ದೂರು ರಾಜಶೇಖರ್‌, ಎಸ್‌. ಸೋಮನಾಯಕ ಇತರರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next