Advertisement

ನಿರ್ಗತಿಕರ ಸೇವೆಯೇ ದೇವರ ಸೇವೆ: ಪ್ರಮೋದ್‌

06:00 AM Jun 06, 2018 | |

ಮಲ್ಪೆ: ತೀರ ನಿರ್ಗತಿಕ, ಭೂ ದಾಖಲೆಗಳಿಲ್ಲದ ಸರಕಾರದಿಂದ ಪರಿಹಾರವನ್ನು ಒದಗಿಸಲಾಗದ ಪರಿಸ್ಥಿತಿ ಯಲ್ಲಿರುವ ಉಡುಪಿ ವಿಧಾನಸಭಾ ಕ್ಷೇತ್ರದ ಬಡ ಕುಟುಂಬಗಳಿಗೆ ಕಳೆದ 5 ವರ್ಷಗಳಿಂದ 100ಕ್ಕೂ ಅಧಿಕ ಮನೆಗಳನ್ನು ದಾನಿಗಳ ಮೂಲಕ ನಿರ್ಮಿಸಿ ಕೊಡಲಾಗಿದೆ. ಇಂದು  8 ಕುಟುಂಬಗಳಿಗೆ ನಿರ್ಮಿಸಿದ ಮನೆಗಳನ್ನು  ಹಸ್ತಾಂತರ ಮಾಡಲಾಗಿದೆ ಎಂದು ಮಾಜಿ ಸಚಿವ ಪ್ರಮೋದ್‌ ಮಧ್ವರಾಜ್‌ ಹೇಳಿದರು.

Advertisement

ಅವರು ಸೋಮವಾರ ದಾನಿಗಳ ನೆರವಿನಿಂದ ನಿರ್ಮಿಸಲಾದ  ಮನೆಗಳನ್ನು ಫಲಾನುಭವಿಗಳಿಗೆ ಹಸ್ತಾಂತರಿಸಿ ಮಾತನಾಡಿದರು. ಕಲ್ಯಾಣಪುರದ ಗಂಗಾ ಪೂಜಾರಿ, ಗುಜ್ಜರ್‌ಬೆಟ್ಟುವಿನಲ್ಲಿ ಸಂಕಿ, ತೊಟ್ಟಂ ಚರ್ಚ್‌ ಬಳಿಯ ಕೃಷ್ಣಪ್ಪ ಕೋಟ್ಯಾನ್‌, ಫ‌ುರ್ಟಾಡೋ ಗೆಸ್ಟ್‌ಹೌಸ್‌ ಬಳಿಯ  ಸಂಕಿ, ಜಲಜಾ, ಸುಶೀಲಾ ಮತ್ತು ಗಂಗ ಅವರ ಕುಟುಂಬಕ್ಕೆ ಮನೆಯನ್ನು ನೀಡಲಾಯಿತು.

ನಗರಸಭಾ ಅಧ್ಯಕ್ಷೆ ಮೀನಾಕ್ಷಿ ಮಾಧವ ಬನ್ನಂಜೆ, ಉಪಾಧ್ಯಕ್ಷೆ  ಸಂಧ್ಯಾ ತಿಲಕ್‌ರಾಜ್‌, ಜಿ.ಪಂ. ಸದಸ್ಯ ಜನಾರ್ದನ ತೋನ್ಸೆ, ಪ್ರಮುಖರಾದ ವೆರೋನಿಕಾ ಕರ್ನೇಲಿಯೋ, ಸತೀಶ್‌ ಅಮೀನ್‌ ಪಡುಕರೆ, ಶೇಖರ ಜಿ. ಕೋಟ್ಯಾನ್‌, ಮಧುಚೇತನ್‌, ಗುರುದಾಸ್‌ ಕುಂದರ್‌, ರವಿ, ಗಣೇಶ್‌ ನೆರ್ಗಿ, ಮುದ್ದು ಅಮೀನ್‌, ಬಿ. ಪಿ. ರಮೇಶ್‌ ಪೂಜಾರಿ, ತಾರಾನಾಥ್‌  ಜಿ., ಆನಂದ ಸಾಲ್ಯಾನ್‌, ಹರೀಶ್‌ ನೆರ್ಗಿ ಮೊದಲಾದವರು ಈ ಸಂದರ್ಭ ಉಪಸ್ಥಿತರಿದ್ದರು.

ಮನಸ್ಸಿಗೆ ತೃಪ್ತಿ
ನಿರ್ಗತಿಕರ ಸೇವೆ ಮಾಡಿದರೆ ಅದು ದೇವರ ಸೇವೆ ಮಾಡಿದಂತೆ. ಬಡವರ ಕಣ್ಣೊರೆಸುವ ಕಾಯಕದಿಂದ ಸಿಗುವ ತೃಪ್ತಿ ಬೇರೆಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಪ್ರಮೋದ್‌ ಮಧ್ವರಾಜ್‌ ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next