Advertisement

ಕಮಲ, ತೆನೆಯಲ್ಲಿರುವಷ್ಟು ಕಿತ್ತಾಟ ಕೈನಲ್ಲಿಲ್ಲ

02:58 PM Mar 01, 2023 | Team Udayavani |

ನಾಗಮಂಗಲ: ಬಿಜೆಪಿ ಮತ್ತು ಜೆಡಿಎಸ್‌ ಪಕ್ಷದಲ್ಲಿ ಕಿತ್ತಾಟ ಅಸಮಾಧಾನಗಳಿವೆಯೇ ಹೊರತು, ಕಾಂಗ್ರೆಸ್‌ ನಲ್ಲಿ ಯಾವುದೇ ಭಿನ್ನಾಭಿಪ್ರಾಯ ಅಥವಾ ಕಿತ್ತಾಟಗಳಿಲ್ಲ. ಸಿದ್ದರಾಮಯ್ಯ ಮತ್ತು ಡಿ.ಕೆ.ಶಿವಕುವಾರ್‌ ಅವರು ಒಡ ಹುಟ್ಟಿದವರಂತೆ ಪಕ್ಷವನ್ನು ಮುನ್ನಡೆಸುತ್ತಿದ್ದಾರೆ ಎಂದು ಮಾಜಿ ಸಚಿವ ಎನ್‌.ಚಲುವರಾಯ ಸ್ವಾಮಿ ಹೇಳಿದರು.

Advertisement

ಪಟ್ಟಣದಲ್ಲಿ ಬ್ಲಾಕ್‌ ಕಾಂಗ್ರೆಸ್‌ ವತಿಯಿಂದ ಮಾ.5 ರಂದು ಬೆಂಗಳೂರಿನಲ್ಲಿ ನಡೆಯುವ ನಾಗಮಂಗಲ ಅನಿವಾಸಿ ಮತದಾರರ ಬೃಹತ್‌ ಸಮಾವೇಶ ಮತ್ತು ಮಾ.13ರಂದು ನಾಗಮಂಗಲ ತಾಲೂಕಿನಲ್ಲಿ ನಡೆಯುವ ಪ್ರಜಾಧ್ವನಿ ಯಾತ್ರೆಯ ಪೂರ್ವಭಾವಿ ಸಭೆಯಲ್ಲಿ ಮಾತನಾಡಿ, ಕಾಂಗ್ರೆಸ್‌ನಲ್ಲಿ ಅಧಿಕಾರಕ್ಕಾಗಿ ಯಾವುದೇ ಕಿತ್ತಾಟವಿಲ್ಲ. ಬಿಜೆಪಿಯಲ್ಲಿ ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. 40 ವರ್ಷ ಪಕ್ಷಕ್ಕಾಗಿ ಹೋರಾಟ ಮಾಡಿದ ಯಡಿಯೂರಪ್ಪ ಅವ ನರು ಬಿಜೆಪಿ ಸರ್ಕಾರ ಅಧಿಕಾಕ್ಕೆ ಬರಲು ಕಾರಣರಾದರು. ಅದರೆ, ಅವರ ರಾಜಕೀಯ ಕೊನೆ ಕ್ಷಣದಲ್ಲಿ ಅಧಿಕಾರದಿಂದ ಕಿತ್ತು ಹಾಕಿದರು. ಬಸವರಾಜು ಬೊಮ್ಮಾಯಿ ಮತ್ತು ಜಗದೀಶ್‌ ಶೆಟ್ಟರ್‌ ನಡುವೆ ಅಸಮಾಧಾನವಿದೆ. ಅಶೋಕ್‌, ಅಶ್ವತ್ಥನಾರಾಯಣ್‌ ನಡುವೆ ಹೊಂದಾಣಿಕೆ ಇಲ್ಲ. ಇವರ ಪಕ್ಷದಲ್ಲಿರುವ ಸಮಸ್ಯೆಯನ್ನು ಸರಿಮಾಡಿಕೊಳ್ಳಲಾಗದವರು ಕಾಂಗ್ರೆಸ್‌ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ ಎಂದು ಟೀಕಿಸಿದರು.

ದೇವೇಗೌಡರಿಗೆ ಮಕ್ಕಳಿಂದ ತೊಂದರೆ: ದೇವೇಗೌಡರು ಪ್ರಧಾನಿಯಾಗಿ, ಮುಖ್ಯಮಂತ್ರಿಯಾಗಿ ದೇಶ, ರಾಜ್ಯಕ್ಕೆ ತಮ್ಮದೇ ಅದ ಕೊಡುಗೆ ನೀಡಿದ್ದಾರೆ. ಅವರ ಮೇಲೆ ನನಗೆ ಅಪಾರ ಗೌರವವಿದೆ. ಆದರೆ, ಅವರ ರಾಜಕೀಯ ಕೊನೆ ಘಟ್ಟದಲ್ಲಿ ಕುಟುಂಬದವರು ಅವರನ್ನು ಸರಿಯಾಗಿ ನಡೆಸಿಕೊಳ್ಳಲಿಲ್ಲ. ಹಾಸನದಲ್ಲಿ ಸ್ಪರ್ಧಿಸಲು ಅವಕಾಶ ನೀಡಲಿಲ್ಲ. ಮಂಡ್ಯದಲ್ಲಾದರೂ ಅವಕಾಶ ಕಲ್ಪಿಸಿದ್ದರೆ ಗೆಲ್ಲುತ್ತಿದ್ದರು. ತುಮಕೂರಿಗೆ ಕಳುಹಿಸಿ ಸೋಲಿಸಿ ಅವರ ಮನಸ್ಸಿಗೆ ನೋವು ಕೊಟ್ಟರು. ಕುಮಾರಸ್ವಾಮಿ ಅಥವಾ ರೇವಣ್ಣ ಅವರಾಗಲಿ ತಮ್ಮ ಕುಟುಂಬ ಸದಸ್ಯರಿಗೆ ನೀಡಿದ ಮಹತ್ವವನ್ನು ಜನ್ಮ ನೀಡಿದ ದೇವೇಗೌಡರಿಗೆ ನೀಡಲಿಲ್ಲ. ಇವರು ಕಾಂಗ್ರೆಸ್‌ ಬಗ್ಗೆ ಮಾತನಾಡುವ ಯಾವ ನೈತಿಕತೆಯನ್ನು ಉಳಿಸಿಕೊಂಡಿದ್ದಾರೆ ಎಂದು ಲೇವಡಿ ಮಾಡಿದರು.

ಬೆಂಗಳೂರು ಸಭೆ ಯಶಸ್ವಿಗೆ ಮನವಿ: ಚುನಾವಣೆಯ ದೃಷ್ಟಿಯಿಂದ ನಾಗಮಂಗಲ ಅನಿವಾಸಿ ಮತದಾರರ ಸಭೆ ಯನ್ನು ಬೆಂಗಳೂರಿನ ನಾಯಂಡಹಳ್ಳಿ ಬಳಿ ನಂದಿಲಿಂಕ್‌ ಗ್ರೌಂಡ್‌ನ‌ಲ್ಲಿ ಮಾ.5ರಂದು ನಡೆಯಲಿದೆ. ಹಿಂದೆ ನಾನು ಅಧಿಕಾರದಲ್ಲಿದ್ದಾಗ ಮಾಡಿದ ಅಭಿವೃದ್ಧಿ ಕೆಲಸಗಳನ್ನು ಮತದಾರರಿಗೆ ಮನದಟ್ಟು ಮಾಡಿಮ ಮತದಾರರನ್ನು ಮನವೊಲಿಸಿ ಸಭೆಗೆ ಕರೆತರಬೇಕು ಎಂದರು.

ಮಾ.13ಕ್ಕೆ ಪ್ರಜಾಧ್ವನಿಯಾತ್ರೆ: ಮಾ.13ರಂದು ಡಿ.ಕೆ. ಶಿವಕುಮಾರ್‌ ನೇತೃತ್ವದಲ್ಲಿ ಪ್ರಜಾಧ್ವನಿ ಯಾತ್ರೆ ತಾಲೂಕಿನಲ್ಲಿ ನಡೆಯಲಿದೆ. ಅಂದು 3 ಗಂಟೆಗೆ ತಾಲೂಕಿನ ಬೋಗಾದಿ ಗ್ರಾಮಕ್ಕೆ ಆಗಮಿಸುವ ಯಾತ್ರೆ ಯನ್ನು ಅದ್ದೂರಿಯಾಗಿ ಸ್ವಾಗತಿಸಬೇಕು. ಕಾರ್ಯಕ್ರಮದ ನಿಮಿತ್ತ ಎಲ್ಲಾ ಗ್ರಾಮಗಳಲ್ಲೂ ಮತದಾರರನ್ನು ಭೇಟಿ ಮಾಡಿ, ಮನವೊಲಿಸಿ ಸಭೆಗೆ ಕರೆತರಬೇಕು. ಬೋಗಾದಿಯಿಂದ ಯಾತ್ರೆ ಸಾಗಿ ನಾಗಮಂಗಲ ಪಟ್ಟಣ ಪ್ರವೇಶಿಸಲಿದ್ದು, ಸಂಜೆ ಟಿ.ಬಿ.ಬಡಾವಣೆಯಲ್ಲಿರುವ ಬಡಗೂಡಮ್ಮ ದೇವಸ್ಥಾನದ ಬಳಿ ಬಹಿರಂಗ ಸಭೆ ನಡೆಯಲಿದೆ. ಅಂದು ಯಾರೊಬ್ಬರೂ ಸಭೆಯಿಂದ ಎದ್ದು ಹೋಗಬಾರದು. ಸಭೆಯಲ್ಲಿ ಶಿಸ್ತು ಕಾಪಾಡಿಕೊಳ್ಳಬೇಕು, ನಿಮ್ಮ ಮನೆ ಕೆಲಸಗಳಿಗೆ ಪರ್ಯಾಯ ವ್ಯವಸ್ಥೆ ಮಾಡಿ ಸಭೆಗೆ ಬರಬೇಕು ಎಂದರು.

Advertisement

ಮುಖಂಡ ಎಚ್‌.ಟಿ.ಕೃಷ್ಣೇಗೌಡ, ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ರಾಜೇಶ್‌, ಜಿಪಂ ಮಾಜಿ ಅಧ್ಯಕ್ಷ ಎಂ.ಪ್ರಸನ್ನ, ಕೊಪ್ಪ ಜೋಗೀಗೌಡ, ಮುಖಂಡರಾದ ಲಕ್ಷ್ಮೀಕಾಂತ್‌, ತಾಪಂ ಮಾಜಿ ಅಧ್ಯಕ್ಷ ಕೃಷ್ಣೇಗೌಡ, ಜಿಪಂ ಮಾಜಿ ಸದಸ್ಯ ಬಾಲು, ತಾಪಂ ಮಾಜಿ ಸದಸ್ಯ ಹನುಮಂತು, ಪಪಂ ಮಾಜಿ ಸದಸ್ಯೆ ಗೀತಾದಾಸೇಗೌಡ, ಪೀಕಾರ್ಡ್‌ ಮಾಜಿ ಅಧ್ಯಕ್ಷ ನರಸಿಂಮೂರ್ತಿ, ಮಹೇಶ್‌, ಗ್ರಾಮಾಂತರ ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷ ದಿವಾಕರ್‌, ಯಶೋಧಮ್ಮ, ಸಾವಿತ್ರಮ್ಮ, ಶ್ರೀನಿವಾಸ್‌, ಎಸ್‌.ಬಿ.ರಮೇಶ್‌, ದಂಡಿಗನಹಳ್ಳಿ ಶಿವಣ್ಣ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next