Advertisement
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತಾನಾಡಿದ ಅವರು, ಕಾಂಗ್ರೆಸ್ ನವರಿಗೆ ಇಡೀ ದೇಶದಲ್ಲಿ ಟೀಕೆ ಮಾಡುವುದು ಬಿಟ್ಟರೆ ಬೇರೆ ಗೊತ್ತಿಲ್ಲ. ಪಕ್ಷ ಇಲ್ಲ, ಸರಕಾರ ಇಲ್ಲ ಎಲ್ಲೂ ಆಡಳಿತ ಇಲ್ಲದಿರುವ ಸಂದರ್ಭದಲ್ಲಿ ಟೀಕೆ ಮಾಡುವುದೇ ಅವರ ಕೆಲಸ. ವಿರೋಧ ಪಕ್ಷದ ಶಾಸಕರು ಅವರ ಹಿಡಿತದಲ್ಲಿ ಇಲ್ಲ ಅಂದಾಗ ಅದೊಂದು ರಾಜಕೀಯ ಪಕ್ಷವೇ ಅಲ್ಲ ಎಂದರು.
Related Articles
Advertisement
ಎಸಿಬಿ ವಿರುದ್ದ ನ್ಯಾಯಾಧೀಶರೊಬ್ಬರು ಅಸಮಾಧಾನ ವ್ಯಕ್ತಪಡಿಸಿದ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ನ್ಯಾಯಾಧೀಶರ ಮೇಲೆ ಗೌರವ ಇದೆ. ಅವರು ಏಕೆ ಈ ರೀತಿ ಹೇಳಿದ್ದರೋ ಗೊತ್ತಿಲ್ಲ. ಎಸಿಬಿ ಅವರ ಕೆಲಸಕ್ಕೆ ಅವರು ಸಹ ಮೆಚ್ಚುಗೆ ವ್ಯಕ್ತಪಡಿಸಬೇಕು. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಅರೆಸ್ಟ್ ಮಾಡಿ ಜೈಲಿಗೆ ಕಳುಹಿಸಿದ್ದಂತಹ ಉದಾಹರಣೆ ಇದೆಯಾ? ಅವರು ಜೈಲಿಗೆ ಹೋಗಿದ್ದು ನನಗೆ ತೃಪ್ತಿ ಇಲ್ಲ. ಅವರು ಇತರರಿಗೆ ಮಾದರಿಯಾಗಿರಬೇಕು. ಉಳಿದಂತಹ ಅಧಿಕಾರಿಗಳು ಎಚ್ಚರಿಕೆಯಿಂದ ಇರಬೇಕು ಎಂದರು.
ಸಿದ್ದರಾಮಯ್ಯ ಅವರ ಹುಟ್ಟು ಹಬ್ಬದ ಹಿನ್ನೆಲೆಯಲ್ಲಿ ಸಿದ್ದರಾಮೋತ್ಸವ ಆಚರಣೆ ಹುಟ್ಟು ಹಬ್ಬ ಆಚರಣೆ ಮಾಡುವುದು ಕುಟುಂಬದವರು ಸೇರಿ ಒಳ್ಳೆಯದು ಆಗಲಿ ಅಂತಾ ಮಾಡುತ್ತಾರೆ. ಸಿದ್ದರಾಮೋತ್ಸವ ಅಂತಾ ಕಾಂಗ್ರೆಸ್ ನವರು ಹೆಸರು ಕೊಟ್ಟಿದ್ದಾರೆ. ಕಾಂಗ್ರೆಸ್ ಪಕ್ಷಕ್ಕು ಅದಕ್ಕೂ ಸಂಬಂಧ ಇಲ್ಲ ಅಂತಾ ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಹೇಳಿದ್ದಾರೆ. ಮನೆಯ ಕುಟುಂಬವೇ ಛಿದ್ರವಾಗಿ ಮನೆಯಲ್ಲಿರುವ ದೊಡ್ಡಣ್ಣನ ಉತ್ಸವ ಸಂಬಂಧ ಇಲ್ಲ ಅಣ್ತಮ್ಮರೇ ಇಲ್ಲ ಅಂದ್ರೆ ಹೇಗೆ? ಮನೆಯವರೇ ಹೀಗೇ ಹೇಳಿದರೇ ಇದನ್ನು ಜನರ ಉತ್ಸವ ಅಂತಾ ಕರೆಯಲು ಆಗುತ್ತದಾ? ಎಂದು ವ್ಯಂಗ್ಯವಾಡಿದರು.
ಇದನ್ನೂ ಓದಿ: ಕುಲ್ಗಾಮ್ : ಎನ್ ಕೌಂಟರ್ ವೇಳೆ ಶರಣಾದ ಇಬ್ಬರು ಸ್ಥಳೀಯ ಉಗ್ರರು
ನಾನು ಮುಖ್ಯಮಂತ್ರಿ ಅಭ್ಯರ್ಥಿ ಅಲ್ಲ ಅನ್ನೋದು, ಅವರೇ ಹಿಂದಿನಿಂದ ತಮ್ಮ ಹಿಂಬಾಲಕರಿಗೆ ಹೇಳಿಕೊಡೋದು ಮುಂದಿನ ಮುಖ್ಯಮಂತ್ರಿ ಸಿದ್ದರಾಮಯ್ಯ, ಮುಂದಿನ ಮುಖ್ಯಮಂತ್ರಿ ಡಿಕೆಶಿ ಅಂತಾ ಕೂಗಿಕೊಳ್ಳುವುದು. ದೇಶದಲ್ಲಿ ಇಂತಹ ದುಸ್ಥಿತಿ ಯಾರಿಗೂ ಬಂದಿಲ್ಲ. ನಮ್ಮ ರಾಜ್ಯದಲ್ಲಿ ಬಂದಿದೆ. ದೀಪ ಆರುವ ಮುನ್ನ ಜೋರಾಗಿ ಕೂಗಾಡುತ್ತದಂತೆ. ಆ ರೀತಿ ಕೂಗಾಡುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು.
ಪಿಎಸ್ಐ ಹಗರಣ ವಿಚಾರದಲ್ಲಿ ಸಿಎಂ ಹಾಗು ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಸಿದ್ದರಾಮಯ್ಯ, ಡಿಕೆಶಿ ಹೇಳಿದ್ದಾರೆ. ನಿಮ್ಮ ಸರಕಾರದ ಅವಧಿಯಲ್ಲಿ ಒಂದಾದರೂ ಈ ರೀತಿ ತನಿಖೆ ಮಾಡಿ ಕ್ರಮ ಕೈಗೊಂಡಿದ್ರಾ? ಎಷ್ಟು ಪ್ರಶ್ನೆ ಪತ್ರಿಕೆ ಬಹಿರಂಗ ಆಯ್ತು. ಸುಮ್ಮನೆ ನಮ್ಮದು ಒಂದು ರಾಜಕೀಯ ಪಕ್ಷ ಅಂತಾ ಟೀಕೆ ಮಾಡ್ತಿದ್ದಾರೆ. ದೀಪ ಯಾವಾಗ ಆರಿ ಹೋಗುತ್ತದೆ ನೋಡೋಣ. ಮುಂದೆ ಅಧಿಕಾರಕ್ಕೆ ಬರುತ್ತೀವಿ ಅಂತಾ ಹೇಳುತ್ತಿದ್ದಾರೆ ದಯವಿಟ್ಟು ಅಂತಹ ಕನಸು ಕಾಣಬೇಡಿ ಎಂದು ಹೇಳಿದರು.