Advertisement

ಮಾಜಿ ಮೇಯರ್‌ ಮೇಸ್ತ್ರಿ ಬಂಧನ

09:44 AM Jun 16, 2019 | Team Udayavani |

ಹುಬ್ಬಳ್ಳಿ: ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ಕುಟುಂಬವೊಂದರ ಮೇಲೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಕಮರಿಪೇಟೆ ಪೊಲೀಸರು ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ ಸೇರಿದಂತೆ ಮೂವರನ್ನು ಬಂಧಿಸಿದ್ದಾರೆ.

Advertisement

ಜಾಗೆಯ ವಿಷಯವಾಗಿ ಮಾಜಿ ಮಹಾಪೌರ ವೆಂಕಟೇಶ ಮೇಸ್ತ್ರಿ ಹಾಗೂ ಸಹಚರರು ಶುಕ್ರವಾರ ದೇವೇಂದ್ರಪ್ಪ ಆಲಕುಂಟೆ ಕುಟುಂಬದವರ ಮೇಲೆ ಲಾಂಗು, ಮಚ್ಚು, ತಲ್ವಾರ್‌, ಕ್ರಿಕೆಟ್ ಬ್ಯಾಟ್‌ಗಳಿಂದ ಹಲ್ಲೆ ಮಾಡಿದ್ದರು. ಈ ಸಂದರ್ಭದಲ್ಲಿ ನಾಲ್ವರು ತೀವ್ರ ಗಾಯಗೊಂಡಿದ್ದರು. ಮನೆ ಮುಂದೆ ನಿಲ್ಲಿಸಿದ್ದ ಬೈಕ್‌ಗಳಿಗೆ ಹಾನಿಗೊಳಿಸಿದ್ದರು. ಈ ಕೃತ್ಯಗಳು ಸಿಸಿಟಿವಿಯಲ್ಲಿ ಸೆರೆಯಾಗಿದ್ದವು. ಘಟನೆಗೆ ಸಂಬಂಧಿಸಿ ನಿಂಗರಾಜ ಇಂಗಳಹಳ್ಳಿ ಅವರು ವೆಂಕಟೇಶ ಮೇಸ್ತ್ರಿ ಸೇರಿದಂತೆ ಎಂಟು ಜನರ ವಿರುದ್ಧ ಕಮರಿಪೇಟೆ ಠಾಣೆಯಲ್ಲಿ ದೂರು ಸಲ್ಲಿಸಿದ್ದರು. ಪೊಲೀಸರು ವೆಂಕಟೇಶ ಮೇಸ್ತ್ರಿ, ದೇವರಾಜ ಬಿ. ಬಿಸನಳ್ಳಿ, ವಿನಾಯಕ ಬಿಸನಳ್ಳಿ ಎಂಬುವರನ್ನು ಬಂಧಿಸಿ, ನಂತರ ಜಾಮೀನಿನ ಮೇಲೆ ಬಿಡುಗಡೆಗೊಳಿಸಿದ್ದಾರೆ ಎಂದು ತಿಳಿದುಬಂದಿದೆ.

ಚಿಕಿತ್ಸೆ ಫಲಿಸದೆ ಇಬ್ಬರ ಸಾವು:

ರೈಲ್ವೆ ನಿಲ್ದಾಣದಲ್ಲಿ ಹಾಗೂ ರೈಲಿನ ಬೋಗಿಯಲ್ಲಿ ಪ್ರತ್ಯೇಕವಾಗಿ ಪ್ರಜ್ಞಾಹೀನವಾಗಿ ಬಿದ್ದಿದ್ದ ವ್ಯಕ್ತಿಗಳಿಬ್ಬರು ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಇಲ್ಲಿನ ರೈಲ್ವೆ ನಿಲ್ದಾಣದ ಪ್ಲಾಟ್ಫಾರ್‌ಂನಲ್ಲಿ ಗುರುವಾರ ಪ್ರಜ್ಞಾಹೀನವಾಗಿದ್ದ ಬಿದ್ದಿದ್ದ ಸುಮಾರು 45 ವರ್ಷದ ಸುರೇಶ ಎಂಬುವರನ್ನು ರೈಲ್ವೆ ಪೊಲೀಸರು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆ ಫಲಿಸದೆ ಶುಕ್ರವಾರ ಮೃತಪಟ್ಟಿದ್ದಾರೆ. ಮೃತರು 5ಅಡಿ 6 ಅಂಗುಲ ಎತ್ತರ, ಗೋಧಿಗೆಂಪು ಮೈಬಣ್ಣ, ಸಾಧಾರಣ ಶರೀರ, ಕೋಲು ಮುಖ, ನೇರ ಮೂಗು ಹೊಂದಿದ್ದಾರೆ. ಅದೇರೀತಿ ಧಾರವಾಡ ರೈಲ್ವೆ ನಿಲ್ದಾಣಕ್ಕೆ ಶುಕ್ರವಾರ ಬಂದಿದ್ದ ರಾಣಿ ಚನ್ನಮ್ಮ ರೈಲಿನ ಎಸ್‌2 ಬೋಗಿಯಲ್ಲಿ ಸುಮಾರು 50 ವರ್ಷದವರು ಪ್ರಜ್ಞಾಹೀನ ಸ್ಥಿತಿಯಲ್ಲಿ ಬಿದ್ದಿದ್ದರು. ಅವರನ್ನು ಕಿಮ್ಸ್‌ ಆಸ್ಪತ್ರೆಗೆ ದಾಖಲಿಸಿದ್ದಾಗ ಚಿಕಿತ್ಸೆ ಫಲಕಾರಿಯಾಗದೆ ಶನಿವಾರ ಮೃತಪಟ್ಟಿದ್ದಾರೆ. 5ಅಡಿ 3 ಅಂಗುಲ ಎತ್ತರ, ಗೋಧಿಗೆಂಪು ಮೈಬಣ್ಣ, ಸಾಧಾರಣ ಶರೀರ, ಗುಂಡು ಮುಖ, ದಪ್ಪ ಮೂಗು ಹೊಂದಿದ್ದಾರೆ. ಶವಗಳನ್ನು ಕಿಮ್ಸ್‌ ಆಸ್ಪತ್ರೆ ಶವಾಗಾರದಲ್ಲಿ ಕಾಯ್ದಿರಿಸಲಾಗಿದೆ. ವಾರಸುದಾರರು ಹುಬ್ಬಳ್ಳಿ ರೈಲ್ವೆ ಪೊಲೀಸ್‌ ಠಾಣೆ ದೂ: 2364751 ಸಂಪರ್ಕಿಸಬಹುದೆಂದು ಪೊಲೀಸರು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next