ಹೊಸದಿಲ್ಲಿ : ಮಧ್ಯಪ್ರದೇಶದ ಮಾಜಿ ಸಿಎಂ ಕಮಲ್ ನಾಥ್ ಮತ್ತು ಪುತ್ರ ನಕುಲ್ ಬಿಜೆಪಿ ಸೇರುವ ಸಾಧ್ಯತೆ ಇವೆ ಎಂದು ವರದಿಯಾಗಿದೆ.
ಕಳೆದ ಕೆಲದಿನ ಗಳಿಂದ ಕಮಲ್ ನಾಥ್ ಮತ್ತು ಪುತ್ರ ನಕುಲ್ ಕಾಂಗ್ರೆಸ್ ತೊರೆಯುವ ಬಗ್ಗೆ ವ್ಯಾಪಕ ಚರ್ಚೆಗಳಾಗಿದ್ದು, ಮಧ್ಯ ಪ್ರದೇಶ ಬಿಜೆಪಿ ವಕ್ತಾರ, ಕಮಲ್ ನಾಥ್ ಅವರ ಮಾಜಿ ಮಾಧ್ಯಮ ಸಲಹೆಗಾರರಾಗಿದ್ದ ನರೇಂದ್ರ ಸಲುಜಾ ಅವರು ಜೈಶ್ರೀರಾಮ್ ಎಂದು ಫೋಟೋವೊಂದನ್ನು ಎಕ್ಸ್ ನಲ್ಲಿ ಪೋಸ್ಟ್ ಮಾಡಿದ್ದು, ಈ ಸುದ್ದಿಗೆ ಮತ್ತಷ್ಟು ಪುಷ್ಟಿ ನೀಡಿದೆ. ಆದರೆ ಇದುವರೆಗೆ ಕಮಲ್ ನಾಥ್ ಅವರ ಕಡೆಯಿಂದ ಯಾವುದೇ ಪ್ರಕಟನೆ ಹೊರಬಿದ್ದಿಲ್ಲ.
ಊಹಾಪೋಹಗಳ ನಡುವೆ ಕಮಲ್ ನಾಥ್ ಶನಿವಾರ ಮಧ್ಯಾಹ್ನ ರಾಷ್ಟ್ರ ರಾಜಧಾನಿಗೆ ಆಗಮಿಸಿದ್ದಾರೆ. ಇಂದು ಸಂಜೆಯೇ ಅವರು ಬಿಜೆಪಿ ಸೇರ್ಪಡೆಯಾಗುವ ಸಾಧ್ಯತೆಗಳಿವೆ ಎನ್ನಲಾಗಿದೆ.
2019 ರ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮಧ್ಯಪ್ರದೇಶದಲ್ಲಿ ಬಿಜೆಪಿ 28 ಸ್ಥಾನಗಳನ್ನು ಗೆದ್ದಿತ್ತು. ಛಿಂದವಾಡ ಕ್ಷೇತ್ರದಿಂದ ಪ್ರಬಾವ ಬೀರಿದ್ದ ನಕುಲ್ ಅವರು ಕಾಂಗ್ರೆಸ್ ನಿಂದ ಆಯ್ಕೆಯಾಗಿದ್ದ ಏಕೈಕ ಸಂಸದರಾಗಿದ್ದಾರೆ.
ಕಮಲ ನಾಥ್ ಅವರು ಬಿಜೆಪಿಗೆ ಹೋಗುತ್ತಾರೆ ಎಂಬ ಬಗ್ಗೆ ಕೇಳಲಾದ ಪ್ರಶ್ನೆಗೆ, ಹಿರಿಯ ಕಾಂಗ್ರೆಸ್ ನಾಯಕ ದಿಗ್ವಿಜಯ ಸಿಂಗ್ ಅವರು”ನಾನು ನಿನ್ನೆ ರಾತ್ರಿ 10.30 ಕ್ಕೆ ಕಮಲ್ ನಾಥ್ ಅವರೊಂದಿಗೆ ಮಾತನಾಡಿದ್ದೇನೆ, ಅವರು ಛಿಂದ್ವಾರಾದಲ್ಲಿದ್ದಾರೆ. ಗಾಂಧಿ-ನೆಹರೂ ಕುಟುಂಬಕ್ಕೆ ನಿಷ್ಠೆ ಹೊಂದಿರುವ ಅವರು ಪಕ್ಷ ತೊರೆಯುವುದಿಲ್ಲ ಎಂದು ಹೇಳಿದ್ದಾರೆ.