Advertisement

ಕಲಬುರಗಿಗೆ ವೈಜನಾಥ ಪಾಟೀಲರ ಪಾರ್ಥಿವ ಶರೀರ ಆಗಮನ

12:28 PM Nov 03, 2019 | Team Udayavani |

ಕಲಬುರಗಿ: ಮಾಜಿ ಸಚಿವ ವೈಜನಾಥ ಪಾಟೀಲರ ಪಾರ್ಥಿವ ಶರೀರವು ಬೆಂಗಳೂರಿಂದ ನಗರದ ಪೊಲೀಸ್ ಮೈದಾನದ ಹಲಿಪ್ಯಾಡ್ ಗೆ ಶನಿವಾರ ಸಂಜೆ ಆಗಮಿಸಿತು.

Advertisement

ಪಾರ್ಥಿವ ಶರೀರ ಬರುತ್ತಿದ್ದಂತೆ ಅಭಿಮಾನಿಗಳು, ಕುಟುಂಬ ವರ್ಗದವರ ಆಕ್ರಂದನ ಮುಗಿಲು ಮುಟ್ಟಿತು. ಕಣ್ಣೀರು ಸುರಿಸುತ್ತಾ ವೈಜನಾಥ ಪಾಟೀಲ ಅಮರ್ ಹೇ, ಅಮರ್ ಹೇ ಎಂದು ಘೋಷಣೆ ಕೂಗಿದರು.

ಜಿಲ್ಲಾಡಳಿತ ವತಿಯಿಂದ ಮತ್ತು ಗಣ್ಯರು ಗೌರವ ಸಲ್ಲಿಸಿದರು. ಜಿಲ್ಲಾಧಿಕಾರಿ ಶರತ್ ಬಿ.,ನಗರ ಪೊಲೀಸ್ ಆಯುಕ್ತ ಎಂ.ಎನ್.ನಾಗರಾಜ, ಎಸ್ಪಿ ವಿನಾಯಕ ಪಾಟೀಲ
ಜಿಲ್ಲಾಡಳಿತದ ಪರವಾಗಿ ಅಗಲಿದ ನಾಯಕನಿಗೆ ಹೂಗುಚ್ಛ ಅರ್ಪಿಸಿ ನಮನ ಸಲ್ಲಿಸಿದರು.

ಶಾಸಕ ಡಾ.ಅಜಯ ಸಿಂಗ್, ಮಾಜಿ ಶಾಸಕರಾದ ವಿಶ್ವನಾಥ ಹೆಬ್ಬಾಳ, ದೊಡ್ಡಪ್ಪ ಗೌಡ ಪಾಟೀಲರು ಸೇರಿದಂತೆ ಹಲವು ಗಣ್ಯರು ಗೌರವ ಸಲ್ಲಿಸಿದರು.

ಮುಖಂಡರಾದ ಬಸವರಾಜ ಇಂಗಿನ್, ಸುಭಾಷ್ ರಾಠೋಡ, ಶರಣು‌ಮೋದಿ, ರವೀಂದ್ರ ಶಾಬಾದಿ‌, ಜಿಪಂ ಸದಸ್ಯರಾದ ಶಿವಾನಂದ ಪಾಟೀಲ, ಸಂತೋಷ ಪಾಟೀಲ ದಣ್ಣೂರ್, ಉಮಕಾಂತ ನಿಗ್ಗುಡಗಿ ಅನೇಕರು ಗೌರವ ಅರ್ಪಿಸಿದರು.

Advertisement

ಹಲಿಕ್ಯಾಪ್ಟರ್ ನಲ್ಲಿ ವೈಜನಾಥರ ಪತ್ನಿ ಜ್ಞಾನೇಶ್ವರಿ, ಪುತ್ರರಾದ ಡಾ.ವಿಕ್ರಮ ಪಾಟೀಲ, ಜಿಪಂ ಸದಸ್ಯ ಗೌತಮ ಪಾಟೀಲ ಬಂದರು. ಮತ್ತೊಬ್ಬ ಡಾ.ಬಸವೇಶ ಹಾಗೂ ಬಂಧುಗಳು ತಾಯಿಯನ್ನು ಅಪ್ಪಿಕೊಂಡು ಆಳುತ್ತಿದ್ದ ದೃಶ್ಯ ಪ್ರತಿಯೊಬ್ಬರ‌ ಮನ ಕಲಕುತ್ತಿತ್ತು.

ನಂತರ ಹಲಿಪ್ಯಾಡ್ ನಿಂದ ನಂತರ ಶಾಂತಿನಗರದ ಗೃಹಕ್ಕೆ ಪಾರ್ಥಿವ ಶರೀರ ತೆಗೆದುಕೊಂದು ಹೋಗಲಾಯಿತು. ಆ ಮನೆಯು ವೈಜನಾಥ ಪಾಟೀಲರು ‌ಭಾವನಾತ್ಮ ಸಂಬಂಧ ಹೊಂದಿದ್ದರು. ಹೀಗಾಗಿ ಅಲ್ಲಿ ಕೆಲ ಕಾಲ ಇಟ್ಟು ಧಾರ್ಮಿಕ ವಿಧಿ ವಿಧಾನಗಳು ಸಲ್ಲಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next