Advertisement
ಸಚಿವ ಕೋಟ ಶ್ರೀನಿವಾಸ ಪೂಜಾರಿ, ಶಾಸಕರಾದ ಉಮಾನಾಥ ಕೋಟ್ಯಾನ್, ವಿ. ಸುನಿಲ್ ಕುಮಾರ್, ರಾಜೇಶ್ ನಾಯಕ್, ಹಾಲಾಡಿ ಶ್ರೀನಿವಾಸ ಶೆಟ್ಟಿ, ಸುಕುಮಾರ ಶೆಟ್ಟಿ, ರಘುಪತಿ ಭಟ್, ವಿಧಾನ ಪರಿಷತ್ ಸಭಾಪತಿ ಪ್ರತಾಪ್ ಚಂದ್ರಶೆಟ್ಟಿ, ಸದಸ್ಯರಾದ ಐವನ್ ಡಿ’ಸೋಜಾ, ಎಸ್.ಎಲ್. ಬೋಜೇಗೌಡ, ಮಾಜಿ ಸಚಿವರಾದ ಬಿ. ರಮಾನಾಥ ರೈ, ಬಿ. ನಾಗರಾಜ ಶೆಟ್ಟಿ, ಸಂಸದೆ ಶೋಭಾ ಕರಂದ್ಲಾಜೆ, ರಾಜೀವ್ ಗಾಂಧಿ ವಿ.ವಿ. ಮಾಜಿ ಕುಲಪತಿ ಡಾ| ರಮಾನಂದ ಶೆಟ್ಟಿ, ಗಣ್ಯರಾದ ಬಲಿಪ ನಾರಾಯಣ ಭಾಗವತ, ಮಾಲಾಡಿ ಅಜಿತ್ ಕುಮಾರ್ ರೈ, ಡಾ| ಎಂ.ಎನ್. ರಾಜೇಂದ್ರ ಕುಮಾರ್, ಜಯಪ್ರಕಾಶ್ ಹೆಗ್ಡೆ, ಕೆ. ಅಭಯಚಂದ್ರ, ವಿನಯ ಕುಮಾರ್ ಸೊರಕೆ, ಬಿ.ಬಿ. ನಿಂಗಯ್ಯ ಮೂಡಿಗೆರೆ, ಜೆ.ಆರ್. ಲೋಬೋ, ವಸಂತ ಬಂಗೇರ, ಮಲ್ಲಿಕಾ ಪ್ರಸಾದ್, ಡಾ| ಎಂ. ಮೋಹನ ಆಳ್ವ, ಯಶ್‌ಪಾಲ್ ಸುವರ್ಣ ಮೊದಲಾದವರು ಅಂತಿಮ ನಮನ ಸಲ್ಲಿಸಿದರು.
Related Articles
Advertisement
ಆದರ್ಶ ಅಮರವಾಗಲಿಧರ್ಮಸ್ಥಳ ಕ್ಷೇತ್ರಕ್ಕೆ ಆತ್ಮೀಯರಾಗಿದ್ದ ಅಮರನಾಥ ಶೆಟ್ಟಿ ಅವರು ನೇರ ನಡೆ-ನುಡಿ ಹಾಗೂ ಸತ್ಯ, ನ್ಯಾಯಕ್ಕಾಗಿ ಶಿಸ್ತು ಪಾಲನೆಯ ಅಪೂರ್ವ ವ್ಯಕ್ತಿತ್ವವನ್ನು ಹೊಂದಿದವರು. ಅವರ ನಿಧನದಿಂದ ಆತ್ಮೀಯರೊಬ್ಬರನ್ನು ಕಳೆದುಕೊಂಡಂತಾಗಿದೆ. ರಾಜಕೀಯ ಅಧಿಕಾರವಿದ್ದರೂ ಇಲ್ಲದಿದ್ದರೂ ಅವರು ಸದಾ ಜನಪರ ಕಾರ್ಯಗಳಲ್ಲಿ ನಿರತರಾಗಿರುತ್ತಿದ್ದರು. ಅವರ ಆದರ್ಶ ಸದಾಜಾಗೃತವಾಗಿರಲಿ ಎಂದು ಆಶಿಸುತ್ತಾ, ಅವರ ಆತ್ಮಕ್ಕೆ ಚಿರಶಾಂತಿಯನ್ನು ಕೋರುತ್ತೇನೆ. ಅಗಲುವಿಕೆಯಿಂದ ಕುಟುಂಬದವರಿಗೆ ಉಂಟಾದ ದುಃಖವನ್ನು ಸಹಿಸುವ ಶಕ್ತಿ-ತಾಳ್ಮೆಯನ್ನಿತ್ತು ಶ್ರೀ ಮಂಜುನಾಥ ಸ್ವಾಮಿ ಹರಸಲೆಂದು ಪ್ರಾರ್ಥಿಸುತ್ತೇನೆ.
– ಡಾ| ಡಿ. ವೀರೇಂದ್ರ ಹೆಗ್ಗಡೆ,
ಧರ್ಮಾಧಿಕಾರಿಗಳು, ಶ್ರೀ ಕ್ಷೇತ್ರ ಧರ್ಮಸ್ಥಳ ಸಹಕಾರಿ ರಂಗದ ಆದರ್ಶ
ಸಹಕಾರ ರಂಗದ ಹಿರಿಯ ಮುತ್ಸದ್ಧಿಯಾಗಿ ಆದರ್ಶ ಸೇವೆ ಸಲ್ಲಿಸಿರುವ ಅಮರನಾಥ ಶೆಟ್ಟಿ ಅವರು ಸರಳ ಸಜ್ಜನ ವ್ಯಕ್ತಿ. ಎಲ್ಲರಿಗೂ ಆತ್ಮೀಯರಾಗಿರುವ ಅವರು ಅಜಾತಶತ್ರು. ಸಹಕಾರ ಕ್ಷೇತ್ರದಲ್ಲಿ ಅವಿರತ ಸೇವೆ ಗೈದಿರುವ ಅವರು ಮೂಡುಬಿದಿರೆ ಸೇವಾ ಸಹಕಾರಿ ಬ್ಯಾಂಕನ್ನು ಸದೃಢವಾಗಿ ಬೆಳೆಸಿದ್ದು ಮಾತ್ರವಲ್ಲ, ಸಹಕಾರ ರಂಗಕ್ಕೆ ಆದರ್ಶವಾಗಿದ್ದರು. ಅವರ ನಿಧನ ಸಹಕಾರ ಕ್ಷೇತ್ರಕ್ಕೆ ತುಂಬಲಾರದ ನಷ್ಟ.
– ಡಾ| ಎಂ.ಎನ್. ರಾಜೇಂದ್ರ ಕುಮಾರ್,
ಎಸ್‌ಸಿಡಿಸಿಸಿ ಬ್ಯಾಂಕ್ ಅಧ್ಯಕ್ಷ