Advertisement

ಜೆಎಂಎಂ ಮಾಜಿ ಶಾಸಕ ಅಮೂಲ್ಯ ಸರ್ದಾರ್‌ ನಿಧನ

03:00 PM Mar 02, 2017 | udayavani editorial |

ಜಮ್‌ಶೇದ್‌ಪುರ : ಜಾರ್ಖಂಡ್‌ ಮುಕ್ತಿ ಮೋರ್ಚಾ ಪಕ್ಷದ ಮಾಜಿ ಶಾಸಕ ಅಮೂಲ್ಯ ಸರ್ದಾರ್‌ (56) ಅವರು ಪೂರ್ವ ಸಿಂಘಭೂಮ್‌ ಜಿಲ್ಲೆಯ ಪೋಟ್‌ಕಾ ಬ್ಲಾಕ್‌ನಲ್ಲಿನ ತಮ್ಮ ನಿವಾಸದಲ್ಲಿ ನಿನ್ನೆ ಬುಧವಾರ ತಡರಾತ್ರಿ ಹೃತ್‌ಕ್ರಿಯೆ ನಿಂತು ನಿಧನಹೊಂದಿದರು.

Advertisement

ಸರ್ದಾರ್‌ ಅವರು 2005ರಿಂದ 2010ರ ವರೆಗಿನ ಅವಧಿಯಲ್ಲಿ ಪೋಟ್‌ಕಾ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸಿದ್ದರು. ಜೆಎಂಎಂ ಹಿರಿಯ ಉಪಾಧ್ಯಕ್ಷ ಚಂಪೈ ಸೊರೇನ್‌ ಅವರು ಸರ್ದಾರ್‌ ಅವರ ನಿವಾಸಕ್ಕೆ ಭೇಟಿ ನೀಡಿ, “ಜಾರ್ಖಂಡ್‌ಗೆ ರಾಜ್ಯ ಸ್ಥಾನಮಾನ ದೊರಕಿಸುವ ಚಳವಳಿಯಲ್ಲಿ ಸರ್ದಾರ್‌ ಅವರು ಮುಖ್ಯ ಪಾತ್ರವನ್ನು ವಹಿಸಿದ್ದರು; ಪೂರ್ವ ಸಿಂಘಭೂಮ್‌ ಜಿಲ್ಲೆಯಲ್ಲಿ ಜೆಎಂಎಂ ನೆಲೆಗಟ್ಟನ್ನು ಭದ್ರಪಡಿಸುವಲ್ಲಿ ಕಾರಣಕರ್ತರಾಗಿದ್ದ ಸರ್ದಾರ್‌ ಅವರ ನಿಧನದಿಂದ ಪಕ್ಷಕ್ಕೆ ತುಂಬಲಾರದ ನಷ್ಟ ಉಂಟಾಗಿದೆ’ ಎಂದು ನೆನೆದರು. 

Advertisement

Udayavani is now on Telegram. Click here to join our channel and stay updated with the latest news.

Next