Advertisement

ಭಾರತದ ಮಾಜಿ ವಾಲಿಬಾಲ್‌ ಆಟಗಾರ ಅಚ್ಯುತ್‌ ಕುರುಪ್‌ ನಿಧನ

08:11 AM Nov 15, 2017 | Team Udayavani |

ಬೆಂಗಳೂರು: ಭಾರತ ವಾಲಿಬಾಲ್‌ ತಂಡದ ಮಾಜಿ ಆಟಗಾರ ಅಚ್ಯುತ್‌ ಕುರುಪ್‌ ನಿಧನರಾಗಿದ್ದಾರೆ. ಅವರಿಗೆ 73 ವರ್ಷವಾಗಿತ್ತು. ಕೆಲ ದಿನಗಳಿಂದ ಅವರು ತೀವ್ರ ಅನಾರೋಗ್ಯಕ್ಕೆ ತುತ್ತಾಗಿದ್ದರು. ಮಂಗಳವಾರ ಅವರು ಬೆಂಗಳೂರಿನಲ್ಲಿ ಚಿಕಿತ್ಸೆ ಫ‌ಲಕಾರಿಯಾಗದೆ ನಿಧನರಾದರು ಎಂದು ಕುಟುಂಬದ ಮೂಲಗಳು ತಿಳಿಸಿವೆ. 

Advertisement

ರಾಷ್ಟ್ರೀಯ ತಂಡದ ಕೋಚ್‌
ಅಚ್ಯುತ್‌ ಕುರುಪ್‌ ರಾಷ್ಟ್ರೀಯ ತಂಡದ ಕೋಚ್‌ ಆಗಿ ಕೆಲಸ ನಿರ್ವಹಿಸುತ್ತಿದ್ದರು. ಅಚ್ಯುತ್‌ ಅವರಿಂದ ತರಬೇತಿ ಪಡೆದಿದ್ದ ಬಾಸ್ಕೆಟ್‌ಬಾಲ್‌ ತಂಡ 1986ರಲ್ಲಿ ಏಶ್ಯನ್‌ ಗೇಮ್ಸ್‌ನಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು. ತರಬೇತುದಾರರಾಗಿಯೇ ಕುರುಪ್‌ ಸುದೀರ್ಘಾವಧಿಯಿಂದ ಅಚ್ಯುತ್‌ ಭಾರತೀಯ ಕ್ರೀಡಾ  ಪ್ರಾಧಿಕಾರದಲ್ಲಿ ಕೆಲಸ ನಿರ್ವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next