Advertisement

Indian ಮಾಜಿ ಕ್ರಿಕೆಟಿಗ ಲಾಲ್‌ಚಂದ್‌ ರಜಪೂತ್‌ ಯುಎಇ ತಂಡದ ಕೋಚ್‌

11:04 PM Feb 21, 2024 | Team Udayavani |

ಮುಂಬಯಿ: ಭಾರತದ ಮಾಜಿ ಕ್ರಿಕೆಟಿಗ ಲಾಲ್‌ಚಂದ್‌ ರಜಪೂತ್‌ ಯುಎಇ ಪುರುಷರ ತಂಡದ ಪ್ರಧಾನ ಕೋಚ್‌ ಆಗಿ ನೇಮಕಗೊಂಡಿದ್ದಾರೆ.

Advertisement

ಮುದಸ್ಸರ್‌ ನಜರ್‌ ಅವರ ಮಧ್ಯಾಂತರ ಕೋಚಿಂಗ್‌ ಅವಧಿ ಮುಕ್ತಾಯಗೊಂಡ ಬೆನ್ನಲ್ಲೇ ಯುಎಇ ರಜಪೂತ್‌ ಅವರನ್ನು ಆಯ್ಕೆ ಮಾಡಿತು.

ಲಾಲ್‌ಚಂದ್‌ ರಜಪೂತ್‌ ಭಾರತದ ಯಶಸ್ವಿ ಕೋಚ್‌ಗಳಲ್ಲಿ ಒಬ್ಬರು. ಟೀಮ್‌ ಇಂಡಿಯಾದ 2007ರ ಚೊಚ್ಚಲ ಟಿ20 ವಿಶ್ವಕಪ್‌ ಗೆಲುವಿನ ವೇಳೆ ರಜಪೂತ್‌ ಅವರೇ ಕೋಚ್‌ ಆಗಿದ್ದರು. ಅನಂತರ ಅಫ್ಘಾನಿಸ್ಥಾನ ತಂಡದ ಕೋಚ್‌ ಆಗಿ ಕರ್ತವ್ಯ ನಿಭಾಯಿಸಿದರು. ಇವರ ಕಾರ್ಯಾವಧಿಯಲ್ಲೇ, 2017ರಲ್ಲಿ ಅಫ್ಘಾನಿಸ್ಥಾನಕ್ಕೆ ಟೆಸ್ಟ್‌ ಮಾನ್ಯತೆ ಲಭಿಸಿದ್ದನ್ನು ಮರೆಯುವಂತಿಲ್ಲ. ಬಳಿಕ 2018-2022ರ ಅವಧಿಯಲ್ಲಿ ಜಿಂಬಾಬ್ವೆ ತರಬೇತುದಾರರಾಗಿಯೂ ದುಡಿದಿದ್ದರು.

ಕೆನಡಾ ಮತ್ತು ಸ್ಕಾಟ್ಲೆಂಡ್‌ ತಂಡಗಳನ್ನು ಒಳಗೊಂಡ ಐಸಿಸಿ ಲೀಗ್‌-2 ತ್ರಿಕೋನ ಸರಣಿ ಮೂಲಕ ರಜಪೂತ್‌ ಅವರ ಯುಎಇ ಕೋಚಿಂಗ್‌ ಅವಧಿ ಮೊದಲ್ಗೊಳ್ಳಲಿದೆ. 2027ರ ವಿಶ್ವಕಪ್‌ ಅರ್ಹತೆಯ ಹಿನ್ನೆಲೆ ಇದೊಂದು ಮಹತ್ವದ ಸರಣಿಯಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next