Advertisement

ಖ್ಯಾತ ಫುಟ್ಬಾಲಿಗ ಸುಭಾಷ್‌ ಭೌಮಿಕ್‌ ನಿಧನ

10:32 PM Jan 22, 2022 | Team Udayavani |

ಕೋಲ್ಕತಾ: ಎಪ್ಪತ್ತರ ದಶಕದಲ್ಲಿ ಭಾರತ ಕಂಡ ಶ್ರೇಷ್ಠ ಫುಟ್ಬಾಲಿಗ ಹಾಗೂ ಕೋಚ್‌ ಸುಭಾಷ್‌ ಭೌಮಿಕ್‌ ಇನ್ನಿಲ್ಲ.

Advertisement

72 ವರ್ಷದ ಅವರು ಶನಿವಾರ ಕೋಲ್ಕತಾದ ನರ್ಸಿಂಗ್‌ ಹೋಮ್‌ ಒಂದರಲ್ಲಿ ನಿಧನ ಹೊಂದಿದರು.

ಭೌಮಿಕ್‌ ಕಿಡ್ನಿ ಸಮಸ್ಯೆಯಿಂದಾಗಿ ಕಳೆದ ಮೂರೂವರೆ ತಿಂಗಳಿಂದ ಡಯಾಲಿಸಿಸ್‌ ಚಿಕಿತ್ಸೆ ಮಾಡಿಸಿಕೊಳ್ಳುತ್ತಿದ್ದರು. ಕೊರೊನಾ ಪಾಸಿಟಿವ್‌ ಬಂದ ಕಾರಣ ಮನೆ ಸಮೀಪದ ಏಕಬಾಲ್ಪುರ್‌ ನರ್ಸಿಂಗ್‌ ಹೋಮ್‌ಗೆ ದಾಖಲಿಸಲಾಗಿತ್ತು. ಕೆಲವು ವರ್ಷಗಳ ಹಿಂದೆ ಬೈಪಾಸ್‌ ಸರ್ಜರಿಗೂ ಒಳಗಾಗಿದ್ದರು.

ಫುಟ್‌ಬಾಲ್‌ ವಲಯದಲ್ಲಿ “ಬುಲ್ಡೋಜರ್‌’ ಎಂದೇ ಗುರುತಿಸಲ್ಪಡುತ್ತಿದ್ದ, ನಿರ್ಭೀತ ವ್ಯಕ್ತಿತ್ವದ ಭೌಮಿಕ್‌ 1970ರ ಏಶ್ಯನ್‌ ಗೇಮ್ಸ್‌ ಕಂಚಿನ ಪದಕ ವಿಜೇತ ಭಾರತ ತಂಡದ ಸದಸ್ಯರಾಗಿದ್ದರು. ಭಾರತದ ಪರ 24 ಪಂದ್ಯಗಳನ್ನಾಡಿ 9 ಗೋಲು ಬಾರಿಸಿದ್ದರು. “ಮೆರ್ಡೆಕಾ ಕಪ್‌’ನಲ್ಲಿ ಬಾರಿಸಿದ ಹ್ಯಾಟ್ರಿಕ್‌ ಕೂಡ ಇದರಲ್ಲಿ ಸೇರಿದೆ.

ಇದನ್ನೂ ಓದಿ:ಪ್ರೊ ಕಬಡ್ಡಿ: ಬೆಂಗಳೂರು ಬುಲ್ಸ್‌ಗೆ ಹ್ಯಾಟ್ರಿಕ್‌ ಸೋಲು

Advertisement

ಕ್ಲಬ್‌ ತಂಡಗಳ ಹೀರೋ
ಕ್ಲಬ್‌ ಮಟ್ಟದಲ್ಲಿ ಸುಭಾಷ್‌ ಭೌಮಿಕ್‌ ಅವರದು ಅಸಾಮಾನ್ಯ ಪ್ರದರ್ಶನ. ಈಸ್ಟ್‌ ಬೆಂಗಾಲ್‌ ಹಾಗೂ ಮೋಹನ್‌ ಬಗಾನ್‌ ಕ್ಲಬ್‌ಗಳೆರಡರ ಪರವೂ ಆಡಿದ್ದರು. 1969-1977ರ ಅವಧಿಯಲ್ಲಿ ಈ ಎರಡು ತಂಡಗಳ ಪರ 165 ಗೋಲು ಸಿಡಿಸಿದ ಸಾಹಸ ಇವರದಾಗಿದೆ. ಆಗ ಕೋಲ್ಕತಾ ಫ‌ುಟ್‌ಬಾಲ್‌ ಜನಪ್ರಿಯತೆಯ ಉತ್ತುಂಗ ತಲುಪಿತ್ತು. ಮೋಹನ್‌ ಬಗಾನ್‌ ಪರ ಆಡುತ್ತಿದ್ದಾಗ, 1977ರಲ್ಲಿ ಗ್ರೇಟ್‌ ಪೀಲೆಯ ನ್ಯೂಯಾರ್ಕ್‌ ವೊಸ್ಮೋಸ್‌ ವಿರುದ್ಧವೂ ಕಣಕ್ಕಿಳಿಯುವ ಅವಕಾಶ ಲಭಿಸಿತ್ತು. ಅದೇ ವರ್ಷ ಭೌಮಿಕ್‌ ಏಕಾಂಗಿಯಾಗಿ ಹೋರಾಡಿ ಮೋಹನ್‌ ಬಗಾನ್‌ಗೆ “ಡ್ಯುರಾಂಡ್‌ ಕಪ್‌’ ತಂದಿತ್ತಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next