ಹೊಸದಿಲ್ಲಿ: ಭಾರತ ಕ್ರಿಕೆಟ್ ತಂಡದ ಮಾಜಿ ಆಟಗಾರ ಹಾಗೂ ಬರೋಡಾ ಮಹಿಳಾ ಕ್ರಿಕೆಟ್ ತಂಡದ ಮುಖ್ಯ ಕೋಚ್ ಅತುಲ್ ಬೆಡಾಡೆ ವಿವಾದವೊಂದಕ್ಕೆ ಸಿಲುಕಿದ್ದಾರೆ. ಆಟಗಾರ್ತಿಯರ ಮೇಲಿನ ಲೈಂಗಿಕ ಕಿರುಕುಳ ಹಾಗೂ ಸಾರ್ವಜನಿಕವಾಗಿ ನಿಂದಿಸಿದ ಆರೋಪದ ಮೇರೆಗೆ ಅವರನ್ನು ಮುಖ್ಯ ಕೋಚ್ ಸ್ಥಾನದಿಂದ ವಜಾಗೊಳಿಸಲಾಗಿದೆ.
ಕಳೆದ ತಿಂಗಳು ಹಿಮಾಚಲ ಪ್ರದೇಶದಲ್ಲಿ ನಡೆದ ಹಿರಿಯರ ಏಕದಿನ ಟೂರ್ನಿಯ ವೇಳೆ ಮುಖ್ಯ ಕೋಚ್ ಅತುಲ್ ಬೆಡಾಡೆ ತಮ್ಮ ಬಳಿ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಹಿರಿಯ ಆಟಗಾರ್ತಿಯರು ಬರೋಡಾ ಕ್ರಿಕೆಟ್ ಅಸೋಸಿಯೇಶನ್‌ಗೆ
(ಬಿಸಿಎ) ದೂರು ನೀಡಿದ್ದರು. ಬೆಡಾಡೆ ಅವರನ್ನು ಈ ಹುದ್ದೆಯಿಂದ ಕೆಳಗಿಳಿಸಿದೆ.
ಈ ಪ್ರಕರಣದ ತನಿಖೆಯನ್ನು ಬಿಸಿಎ ತಟಸ್ಥ ಸಮಿತಿ ನಡೆಸುತ್ತಿದ್ದು, ಅತುಲ್ ಬೆಡಾಡೆ ಅವರನ್ನು ಕೋಚ್ ಹುದ್ದೆಯಿಂದ ವಜಾಗೊಳಿಸಲಾಗಿದೆ ಎಂದು ಬಿಸಿಎ ಕಾರ್ಯದರ್ಶಿ ಅಜಿತ್ ಲೇಲೆ ತಿಳಿಸಿದ್ದಾರೆ.