Advertisement

ಹಾಂಕಾಂಗ್‌ ಮಾಜಿ ನಾಯಕನಿಗೆ ರಣಜಿ ಕ್ರಿಕೆಟ್‌ ಆಡುವ ಬಯಕೆ!

11:52 PM Sep 13, 2019 | Team Udayavani |

ಹೊಸದಿಲ್ಲಿ: ಇಂಗ್ಲೆಂಡಿನ ಮಾಜಿ ಸ್ಪಿನ್ನರ್‌ ಮಾಂಟಿ ಪನೆಸರ್‌ ಭಾರತಕ್ಕೆ ಬಂದು ರಣಜಿ ಕ್ರಿಕೆಟ್‌ ಆಡುವ ಬಯಕೆ ವ್ಯಕ್ತಪಡಿಸಿದ್ದು ಇತ್ತೀಚೆಗೆ ಸುದ್ದಿಯಾಗಿತ್ತು. ಈಗ ಹಾಂಕಾಂಗ್‌ ಕ್ರಿಕೆಟ್‌ ತಂಡದ ಮಾಜಿ ನಾಯಕ, ಭಾರತೀಯ ಮೂಲದ ಅಂಶುಮಾನ್‌ ರಥ್‌ ಸರದಿ. ಇವರು ಕೂಡ ರಣಜಿಯಲ್ಲಿ ಆಡುವ ಅಭಿಲಾಷೆ ವ್ಯಕ್ತಪಡಿಸಿದ್ದಾರೆ.

Advertisement

ಹಾಂಕಾಂಗ್‌ ತಂಡದ ನಾಯಕನೂ ಆಗಿದ್ದ ಅಂಶುಮಾನ್‌, ಭಾರತದಲ್ಲಿ ಇನ್ನುಳಿದ ಕ್ರಿಕೆಟ್‌ ಬಾಳ್ವೆ ಯನ್ನು ಮುಂದುವರಿಸಬೇಕೆಂಬ ಕಾರಣಕ್ಕಾಗಿ ಹಾಂಕಾಂಗ್‌ ಕ್ರಿಕೆಟಿಗೆ ಗುಡ್‌ಬೈ ಹೇಳಿದ್ದರು. ಪ್ರಸ್ತುತ ವಿದರ್ಭ ಕ್ರಿಕೆಟ್‌ ಮಂಡಳಿಯ ಉಪಾಧ್ಯಕ್ಷ ಪ್ರಶಾಂತ್‌ ವೈದ್ಯ ಜತೆ ಮಾತುಕತೆ ನಡೆಸುತ್ತಿದ್ದಾರೆ. ಅಂಶುಮಾನ್‌ ಕೋರಿಕೆಗೆ ಸಕಾರಾತ್ಮಕ ಪ್ರತಿಕ್ರಿಯೆ ನೀಡಿದೆ.

“ರಣಜಿ ಬಾಗಿಲು ತೆರೆಯುವ ನಂಬಿಕೆ ಇದೆ. ಕ್ಲಬ್‌ ಮತ್ತು ಲೀಗ್‌ ಪಂದ್ಯಗಳಲ್ಲಿ ನನ್ನ ಸಾಮರ್ಥ್ಯವನ್ನು ಪ್ರದರ್ಶಿಸಬೇಕಿದೆ’ ಎಂದಿದ್ದಾರೆ ಅಂಶುಮಾನ್‌ವ ರಥ್‌.
“ಕ್ಲಬ್‌ ಮತ್ತು ಲೀಗ್‌ ಕ್ರಿಕೆಟ್‌ ಪಂದ್ಯಗಳಲ್ಲಿ ಉತ್ತಮ ಪ್ರದರ್ಶನ ನೀಡಿದರೆ ಅವರನ್ನು ಆಯ್ಕೆಗೆ ಪರಿ ಗಣಿಸಬಹುದು. ಆದರೆ ಇಲ್ಲಿ ತೀವ್ರ ಪೈಪೋಟಿ ಇದೆ. ಅಂಡರ್‌-23, ಅಂಡರ್‌-19 ಸಾಧಕರನೇಕರು ಬಾಗಿಲು ಬಡಿಯುತ್ತಿದ್ದಾರೆ’ ಎಂಬುದು ಪ್ರಶಾಂತ್‌ ವೈದ್ಯ ಅವರ ಹೇಳಿಕೆ.

21ರ ಹರೆಯದ ಪ್ರತಿಭಾನ್ವಿತ
ಮೂಲತಃ ಒಡಿಶಾದವರಾದ ಅಂಶುಮಾನ್‌ ರಥ್‌ ಅವರಿಗೆ 21 ವರ್ಷ ಮಾತ್ರ. ಎಡಗೈ ಬ್ಯಾಟ್ಸ್‌ ಮನ್‌, ವಿಕೆಟ್‌ ಕೀಪರ್‌, ಎಡಗೈ ಸ್ಪಿನ್‌ ಬೌಲಿಂಗ್‌ ಮೂಲಕ ಯಶಸ್ಸು ಕಂಡಿದ್ದಾರೆ. 18 ಏಕದಿನ ಪಂದ್ಯ ಗಳಿಂದ 828 ರನ್‌ ಬಾರಿಸಿದ್ದು, ಇದರಲ್ಲಿ ಒಂದು ಶತಕ ಹಾಗೂ 7 ಅರ್ಧ ಶತಕ ಸೇರಿದೆ. ಅಜೇಯ 143 ರನ್‌ ಸರ್ವಾಧಿಕ ಗಳಿಕೆ.

Advertisement

Udayavani is now on Telegram. Click here to join our channel and stay updated with the latest news.

Next