Advertisement
ಮರದ ವ್ಯವಹಾರ ನಡೆಸುತ್ತಿದ್ದ ಅವರು ಸ್ಥಳೀಯವಾಗಿ ಕ್ರಿಕೆಟ್ ಪಂದ್ಯಾಟ ಸಂಘಟಿಸು ವುದು ಹಾಗೂ ರಾಜಕೀಯದಲ್ಲಿ ಸಕ್ರಿಯ ರಾಗಿದ್ದರು. ಆರ್ಥಿಕ ಮುಗ್ಗಟ್ಟಿ ನಿಂದ ಆತ್ಮಹತ್ಯೆ ಮಾಡಿಕೊಂಡಿರ ಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಮೂಲ್ಕಿ ಸರಕಾರಿ ಆಸ್ಪತ್ರೆಯಲ್ಲಿ ಮರಣೋತ್ತರಪರೀಕ್ಷೆ ನಡೆಸಲಾಗಿದೆ.ಸಹೋದರ ಉದಯಕುಮಾರ್ ಜೈನ್ ನೀಡಿದ ದೂರಿನಂತೆ ಮೂಲ್ಕಿ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಸಂಪತ್ ಅವರು ಬೆಳಗ್ಗೆ ಪಡುಪಣಂಬೂರು ಗ್ರಾಮ ಪಂಚಾಯತ್ ಬಳಿ ಆಪ್ತರೊಂದಿಗೆ ಮಾತುಕತೆ ನಡೆ ಸಿದ್ದು, ಮಧ್ಯಾಹ್ನ ಊಟಕ್ಕೆಂದು ಮನೆಗೆ ತೆರಳಿದವರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.ಅವರ ಶರ್ಟ್‌ನ ಜೇಬಿ ನಲ್ಲಿ ಡೆತ್ ನೋಟ್ ಬರೆದಿಟ್ಟಿದ್ದು, ಅದರಲ್ಲಿ “ನನ್ನ ಸಾವಿಗೆ ನಾನೇ ಕಾರಣ’ ಎಂದು ಬರೆಯಲಾಗಿತ್ತು ಎಂದು ಪೊಲೀಸರು ತಿಳಿಸಿ ದ್ದಾರೆ.