Advertisement

ಇಂಗ್ಲೆಂಡಿನ ಮಾಜಿ ಆಲ್‌ರೌಂಡರ್‌ ಟಿಮ್‌ ಬ್ರೆಸ್ನೆನ್‌ ವಿದಾಯ

10:38 PM Jan 31, 2022 | Team Udayavani |

ಲಂಡನ್‌: ಇಂಗ್ಲೆಂಡಿನ ಮಾಜಿ ಆಲ್‌ರೌಂಡರ್‌ ಟಿಮ್‌ ಬ್ರೆಸ್ನೆನ್‌ ಎಲ್ಲ ಮಾದರಿಯ ಕ್ರಿಕೆಟಿಗೆ ವಿದಾಯ ಘೋಷಿಸಿದ್ದಾರೆ.

Advertisement

ಅವರು ಪ್ರತಿನಿಧಿಸುತ್ತಿರುವ ಕೌಂಟಿ ವಾರ್ವಿಕ್‌ಶೈರ್‌ ಇದನ್ನು ಪ್ರಕಟಿಸಿದೆ.

36 ವರ್ಷದ ಬ್ರೆಸ್ನೆನ್‌ ಇಂಗ್ಲೆಂಡ್‌ ಪರ ಒಟ್ಟು 142 ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಪಾಲ್ಗೊಂಡಿದ್ದಾರೆ.

ಇದರಲ್ಲಿ 23 ಟೆಸ್ಟ್‌ ಕೂಡ ಸೇರಿದೆ. ಟೆಸ್ಟ್‌ ನಲ್ಲಿ 72 ವಿಕೆಟ್‌ ಹಾಗೂ 575 ರನ್‌; ಏಕದಿನದಲ್ಲಿ 109 ವಿಕೆಟ್‌ ಹಾಗೂ 871 ರನ್‌ ಗಳಿಸಿದ ಸಾಧನೆಗೈದಿದ್ದಾರೆ.

2010-11ರ ಆ್ಯಶಸ್‌ ಗೆಲುವಿನಲ್ಲಿ ಬ್ರೆಸ್ನೆನ್‌ ಪಾತ್ರ ಮಹತ್ವದ್ದಾಗಿತ್ತು.

Advertisement

 

 

Advertisement

Udayavani is now on Telegram. Click here to join our channel and stay updated with the latest news.

Next