Advertisement

Bidar: ಮಾಜಿ ಉಪ ಸಭಾಪತಿ ಶತಾಯುಷಿ ಕೇಶವರಾವ ನಿಟ್ಟೂರಕರ ಅಸ್ತಂಗತ

05:22 PM Dec 12, 2024 | Team Udayavani |

ಬೀದರ್: ಮಾಜಿ ಎಂಎಲ್ಸಿ, ಉಪ ಸಭಾಪತಿಯಾಗಿ ಸೇವೆ ಸಲ್ಲಿಸಿದ ಶತಾಯುಷಿ ಕೇಶವರಾವ ತಾತ್ಯಾರಾವ ಪಟವಾರಿ (ನಿಟ್ಟೂರಕರ) ಗುರುವಾರ (ಡಿ.12) ಬೆಳಿಗ್ಗೆ ನಿಧನರಾಗಿದ್ದಾರೆ.

Advertisement

ಭಾಲ್ಕಿಯಯಲ್ಲಿ 1922 ರಲ್ಲಿ ನಿಷ್ಟಾವಂತ ಪಟವಾರಿ ಕುಟುಂಬದಲ್ಲಿ ಜನಿಸಿದ ಕೇಶವರಾವ ನಿಟ್ಟೂರಕರ ರವರು 1942ರಲ್ಲಿ ಸ್ವಾತಂತ್ರ ಚಳುವಳಿಯ ಭಾರತ ಜೋಡಿ ಆಂದೋಲನದಲ್ಲಿ ಭಾಗವಹಿಸಿದರು. 1946 ರಲ್ಲಿ ಹೈದರಾಬಾದಿನ ಯುನಿವರ್ಸಿಟಿ ಕಾಲೇಜ್ ಆಫ್ ಲಾ ನಲ್ಲಿ ಎಲ್.ಎಲ್.ಬಿ ಉತ್ತೀರ್ಣರಾಗಿ, 1948 ರಲ್ಲಿ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್ ಸದಸ್ಯರಾಗಿ ರಾಜಕೀಯ ಪ್ರವೇಶ ಮಾಡಿದರು. ರಾಜಕೀಯದ ಜೊತೆಗೆ 1952ರಲ್ಲಿ ಭಾಲ್ಕಿಯ ಕೋರ್ಟನಲ್ಲಿ ವಕೀಲಿ ಹುದ್ದೆ ಪ್ರಾರಂಭಿಸಿದರು. ನಂತರ 1953 ರಲ್ಲಿ ಹೈದರಾಬಾದ್ ಕಾಂಗ್ರೆಸ್ ಕಮಿಟಿ ಸದಸ್ಯರಾಗಿ ನೇಮಕವಾದರು.

1950 ರಂದ 1972ರ ವರೆಗೆ ಎರಡು ಅವಧಿಯಲ್ಲಿ ವಿಧಾನ ಪರಿಷತ್ ಸದಸ್ಯರಾಗಿ, ವಿಧಾನ ಪರಿಷತ್ ಉಪಸಭಾಪತಿಯಾಗಿ ಸೇವೆ ಸಲ್ಲಿಸಿದರು. ನಂತರ 1980 ರಲ್ಲಿ ಭಾಲ್ಕಿಯ ಬಾರ್ ಅಸೋಶಿಯೇಶನ್ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದರು. 1986 ರಲ್ಲಿ ಖಾದಿ ಗ್ರಾಮೋದ್ಯೋಗ ಸಮಿತಿಯ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದರು. ನಂತರ ಇಲ್ಲಿಯವರೆಗೆ ಶಾಂತಿವರ್ಧಕ ಶಿಕ್ಷಣ ಸಂಸ್ಥೆಯ ಉಪಧ್ಯಕ್ಷರಾಗಿ, ಎಮ್.ಜಿ.ಎಸ್.ಎಸ್.ಕೆ ಕಾನೂನು ಸಲಹೆಗಾರರಾಗಿ ಸೇವೆ ಸಲ್ಲಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next