Advertisement

ಕಾಂಗ್ರೆಸ್ ಹಿರಿಯ ನಾಯಕ ಎ. ಕೆ ವಾಲಿಯಾ ಕೋವಿಡ್ ಗೆ ಬಲಿ ..!

10:56 AM Apr 22, 2021 | Team Udayavani |

ನವ ದೆಹಲಿ : ಕೋವಿಡ್ 19 ಸೋಂಕಿಗೆ ಒಳಗಾಗಿದ್ದ ದೆಹಲಿಯ ಮಾಜಿ ಸಚಿವ ಕಾಂಗ್ರೆಸ್ ನ ಹಿರಿಯ ನಾಯಕ ಎ. ಕೆ ವಾಲಿಯಾ, ಚಿಕಿತ್ಸೆ ಫಲಿಸದೆ ಇಂದು ಮೃತಪಟ್ಟಿದ್ದಾರೆ. ಕೋವಿಡ್ ಸೋಂಕು ತಗುಲಿದ ಬಳಿಕ ದೆಹಲಿಯ ಅಪೋಲೋ ಆಸ್ಪತ್ರೆಗೆ ದಾಖಲಾಗಿದ್ದರು.

Advertisement

72 ವರ್ಷದ ವಾಲಿಯಾ ವೃತ್ತಿಯಲ್ಲಿ ವೈದ್ಯರಾಗಿದ್ದರು. ನಂತರದ ದಿನಗಳಲ್ಲಿ ರಾಜಕೀಯ ರಂಗಕ್ಕೆ ಕಾಲಿಟ್ಟ ಅವರು ದೆಹಲಿ ವಿಧಾನ ಸಭೆಗೆ ನಾಲ್ಕು ಬಾರಿ ಆಯ್ಕೆಯಾಗಿದ್ದರು. ಶೀಲಾ ದೀಕ್ಷಿತ್ ಮುಖ್ಯಮಂತ್ರಿಯಾಗಿದ್ದಾಗ ಅವರ ನೇತೃತ್ವದ ಸರ್ಕಾರದಲ್ಲಿ ಆರೋಗ್ಯ ಸಚಿವರಾಗಿ, ನಗರಾಭಿವೃದ್ಧಿ ಸಚಿವರಾಗಿ ಕಾರ್ಯನಿರ್ವಹಿಸಿದ್ದರು.

 ಇದನ್ನೂ ಓದಿ : ಹಳೆಯಂಗಡಿ ಸಿಡಿಲಿನ ಅಘಾತ: ಆಸ್ಪತ್ರೆಯಲ್ಲಿ ಪ್ರಾಣ ಬಿಟ್ಟ ಮತ್ತೋರ್ವ ಬಾಲಕ

1993 ರಲ್ಲಿ ಪ್ರಪ್ರಥಮ ಬಾರಿಗೆ ದೆಹಲಿಯ ಗೀತಾ ಕಾಲೋನಿಯಿಂದ ಚುನಾವಣೆಗೆ ಸ್ಪರ್ಧಿಸಿದ್ದರು. ದೆಹಲಿ ಮುನ್ಸಿಪಲ್ ಕಾರ್ಪೋರೇಷನ್ ಚುನಾವಣೆಯಲ್ಲಿ ಹಣಕೊಟ್ಟವರಿಗೆ ಟಿಕೇಟ್ ನೀಡಲಾಗಿದೆ ಎಂದು ಆರೋಪಿಸಿದ್ದರು. ಆ ನಂತರ ಕಾಂಗ್ರೆಸ್ ನನ್ನು ತೊರೆದು, ಸ್ವಲ್ಪ ಸಮಯದ ನಂತರ ಮತ್ತೆ ಮಾತೃ ಪಕ್ಷ ಕಾಂಗ್ರೆಸ್ ಗೆ ಸೇರ್ಪಡೆಗೊಂಡಿದ್ದ ಅವರು 2020ರಲ್ಲಿ ಕಾಂಗ್ರೆಸ್ ನಿಂದ ಕೃಷ್ಣಾನಗರ ಕ್ಷೇತ್ರದಿಂದ ಸ್ಪರ್ಧಿಸಿದ್ದರು. ಆದರೇ, ಆಮ್ ಆದ್ಮಿ ಪಕ್ಷ ದ ವಿರುದ್ಧ ಅವರು ಸೋಲನುಭವಿಸಬೇಕಾಯಿತು.

ದೇಶದಲ್ಲಿ ಕೋವಿಡ್ ಸೋಂಕು ಹಠಾತ್ ಏರಿಕೆಯಾಗುತ್ತಿರುವ ಕಾರಣದಿಂದಾಗಿ ಹಲವು ಸಾವು ನೋವಾಗಿದ್ದು, ಇಂದು ಬೆಳಗ್ಗೆ ಸಿಪಿಎಂ ಪ್ರಧಾನ ಕಾರ್ಯದರ್ಶಿ ಸೀತಾರಾಮ್ ಯಚೂರಿ ಅವರ ಮಗ ಆಶೀಷ್ ಯಚೂರಿ(35) ಕೂಡ ಮೃತರಾಗಿದ್ದಾರೆ.

Advertisement

 ಇದನ್ನೂ ಓದಿ : ಐಸಿಯುನಲ್ಲಿ ಸೋಂಕು ಗೆದ್ದವರ ಪ್ರಮಾಣ ಹೆಚ್ಚಳ : ಶೇ. 95ರಷ್ಟು ಮಂದಿ ಗುಣಮುಖ

Advertisement

Udayavani is now on Telegram. Click here to join our channel and stay updated with the latest news.

Next