Advertisement

CM residence ತೊರೆದ ಕೇಜ್ರಿವಾಲ್: ಕಣ್ಣೀರಿಟ್ಟು ಬೀಳ್ಕೊಟ್ಟ ಸಿಬಂದಿಗಳು Watch video 

05:26 PM Oct 04, 2024 | Team Udayavani |

ಹೊಸದಿಲ್ಲಿ: ಮಾಜಿ ಸಿಎಂ ಅರವಿಂದ ಕೇಜ್ರಿವಾಲ್ ಅವರು ಶುಕ್ರವಾರ(ಅ4) ದೆಹಲಿ 6, ಫ್ಲಾಗ್‌ಸ್ಟಾಫ್ ರಸ್ತೆಯ ಸಿಎಂ ನಿವಾಸವನ್ನು ಕುಟುಂಬ ಸದಸ್ಯರೊಂದಿಗೆ ತೊರೆದರು. ಈ ವೇಳೆ ನಿವಾಸದ ಸಿಬಂದಿಗಳಿಗೆ ಧನ್ಯವಾದಗಳನ್ನು ಹೇಳಿದರು. ಕೆಲವರು ಭಾವುಕ ಕ್ಷಣಕ್ಕೆ ಸಾಕ್ಷಿ ಎಂಬಂತೆ ಕಣ್ಣೀರಿಟ್ಟರು. ಮಾಜಿ ಸಿಎಂ ಸಾಮಾನ್ಯ ಕೆಲಸಗಾರರೊಬ್ಬರನ್ನು ಅಪ್ಪಿಕೊಂಡು ನಿವಾಸ ತೊರೆದು ಗಮನ ಸೆಳೆದರು.

Advertisement

ಆಮ್ ಆದ್ಮಿ ಪಕ್ಷದ ರಾಷ್ಟ್ರೀಯ ಸಂಚಾಲಕ ಒಂಬತ್ತು ವರ್ಷಗಳಿಂದ ಇದ್ದ ಮನೆಯನ್ನು ಪತ್ನಿ, ಮಗ, ಮಗಳು ಮತ್ತು ತಂದೆ, ತಾಯಿಯೊಂದಿಗೆ ತೊರೆದು ಎರಡು ಕಾರುಗಳಲ್ಲಿ  5, ಫಿರೋಜ್‌ಶಾ ರಸ್ತೆ ಮಂಡಿ ಹೌಸ್ ಗೆ ಹೊರಟರು. ಮಂಡಿ ಹೌಸ್ ಬಂಗಲೆಯನ್ನು ಪಂಜಾಬ್‌ನ ಎಎಪಿಯ ರಾಜ್ಯಸಭಾ ಸಂಸದ ಅಶೋಕ್ ಮಿತ್ತಲ್ ಅವರಿಗೆ ನೀಡಲಾಗಿತ್ತು.

ಕೇಜ್ರಿವಾಲ್ ಅವರ ಪತ್ನಿ ಸುನೀತಾ ಕೇಜ್ರಿವಾಲ್ ಅವರು ಆಸ್ತಿಯ ಕೀಗಳನ್ನು ಸರಕಾರಿ ಅಧಿಕಾರಿಗೆ ಹಸ್ತಾಂತರಿಸಿದರು.6, ಫ್ಲಾಗ್‌ಸ್ಟಾಫ್ ಬಂಗಲೆಯು ದೆಹಲಿ ಸರಕಾರದ ಲೋಕೋಪಯೋಗಿ ಇಲಾಖೆಯ ಅಧೀನದಲ್ಲಿದೆ. ಕೇಜ್ರಿವಾಲ್ ಕುಟುಂಬ ಈ ಮನೆಗೆ ‘ಗೃಹ ಪ್ರವೇಶ’ ಆಚರಣೆ ಮಾಡುವ ಮೂಲಕ ಪ್ರವೇಶಿಸಿದ್ದರು.

Advertisement

ಎರಡು ಮಿನಿ ಟ್ರಕ್‌ಗಳಲ್ಲಿ ಕುಟುಂಬದ ಗೃಹೋಪಯೋಗಿ ವಸ್ತುಗಳನ್ನು 5, ಫಿರೋಜ್‌ಶಾ ರಸ್ತೆ ಬಂಗಲೆಗೆ ಸಾಗಿಸಲಾಗಿದೆ ಎಂದು ಎಎಪಿ ಮುಖಂಡರು ತಿಳಿಸಿದ್ದಾರೆ.

ಫೆಬ್ರವರಿಯಲ್ಲಿ ನಡೆಯಲಿರುವ ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ದೆಹಲಿಯ ಜನರಿಂದ “ಪ್ರಾಮಾಣಿಕತೆಯ ಪ್ರಮಾಣಪತ್ರ” ಪಡೆದ ನಂತರವೇ ಮತ್ತೆ ಹುದ್ದೆಯನ್ನು ಅಲಂಕರಿಸುವುದಾಗಿ ಕೇಜ್ರಿವಾಲ್ ಕಳೆದ ತಿಂಗಳು ಘೋಷಿಸಿ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next