Advertisement

ಪಾತಕಿ ದಾವೂದ್‌ ಆಪ್ತ ಸಾವು

11:33 PM Mar 25, 2019 | Team Udayavani |

ಮುಂಬಯಿ: ­­ಭೂಗತ ಪಾತಕಿ ದಾವೂದ್‌ ಇಬ್ರಾಹಿಂ ಸಹಚರ ಶಕೀಲ್‌ ಅಹ್ಮದ್‌ ಅಲಿಯಾಸ್‌ ಲಂಬೂ ಶಕೀಲ ದಕ್ಷಿಣ ಮುಂಬಯಿನ ಜಸ್ಲೋಕ್‌ ಆಸ್ಪತ್ರೆಯಲ್ಲಿ ಸಾವಿಗೀಡಾಗಿದ್ದಾನೆ. ಹೃದ್ರೋಗ ಸಮಸ್ಯೆಯಿಂದ ಬಳಲುತ್ತಿದ್ದ ಆತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ. 1990ರ ದಶಕದಲ್ಲಿ ದಾವೂದ್‌ ತಂಡದ ಜೊತೆ ಸೇರಿ ವಿದೇಶಗಳಿಗೆ ಅಕ್ರಮ ಹಣ ವರ್ಗಾವಣೆ ದಂಧೆ ನಡೆಸುತ್ತಿದ್ದ. ಆನಂತರ ಮತ್ತೂಬ್ಬ ಭೂಗತಲೋಕದ ಪಾತಕಿ ಛೋಟಾ ಶಕೀಲ್‌ ತಂಡವನ್ನು ಸೇರಿ ಅಕ್ರಮ ಶಸ್ತ್ರಾಸ್ತ್ರ ಹಾಗೂ ಸ್ಫೋಟಕ ವಸ್ತುಗಳ ಗುಪ್ತ ಸಾಗಣೆ ಮಾಡುತ್ತಿದ್ದ ಆರೋಪವೂ ಈತನ ಮೇಲಿತ್ತು.

Advertisement
Advertisement

Udayavani is now on Telegram. Click here to join our channel and stay updated with the latest news.

Next