Advertisement

1983 ವಿಶ್ವಕಪ್ ಹೀರೋ ಯಶಪಾಲ್ ಶರ್ಮಾ ನಿಧನ

01:15 PM Jul 13, 2021 | Team Udayavani |

ಹೊಸದಿಲ್ಲಿ: ಟೀಂ ಇಂಡಿಯಾ ಮಾಜಿ ಆಟಗಾರ, 1983 ವಿಶ್ವಕಪ್ ವಿಜೇತ ತಂಡದ ಸದಸ್ಯ ಯಶಪಾಲ್ ಶರ್ಮಾ ಇಂದು ಹೃದಯಾಘಾತದಿಂದ ನಿಧನರಾದರು.

Advertisement

66 ವರ್ಷದ ಯಶಪಾಲ್ ಶರ್ಮಾ ಅವರು ನೋಯ್ಡಾದಲ್ಲಿ ವಾಸವಿದ್ದರು. ಮಂಗಳವಾರ ಬೆಳಗ್ಗೆ ತೀವ್ರ ಹೃದಯಾಘಾತದಿಂದ ಮನೆಯಲ್ಲಿಯೇ ಶರ್ಮಾ ನಿಧನರಾದರು ಎಂದು ಮೂಲಗಳು ತಿಳಿಸಿದೆ.

ಯಶಪಾಲ್ ಶರ್ಮಾ 1978ರಿಂದ 1983ರವರೆಗೆ ಭಾರತದ ತಂಡದ ಮಧ್ಯಮ ಕ್ರಮಾಂಕದಲ್ಲಿ ಬ್ಯಾಟ್ ಬೀಸುತ್ತಿದ್ದರು. 37 ಟೆಸ್ಟ್‌ ಪಂದ್ಯಗಳನ್ನು ಆಡಿರುವ ಶರ್ಮಾ 1,606 ರನ್‌ಗಳನ್ನು ಗಳಿಸಿದ್ದಾರೆ. 42 ಏಕದಿನ ಅಂತರರಾಷ್ಟ್ರೀಯ ಪಂದ್ಯಗಳಲ್ಲಿ 883 ರನ್‌ ಕಲೆಹಾಕಿದ್ದಾರೆ.

ಇದನ್ನೂ ಓದಿ:ಗೇಲ್ ಸ್ಫೋಟಕ ಆಟಕ್ಕೆ ಮಂಕಾದ ಆಸೀಸ್: ಸತತ ಮೂರು ಪಂದ್ಯ ಗೆದ್ದ ಪೂರನ್ ಪಡೆ

1979ರ ವಿಶ್ವಕಪ್ ತಂಡದಲ್ಲಿದ್ದರೂ ಆ ವಿಶ್ವಕಪ್ ನಲ್ಲಿ ಯಶಪಾಲ್ ಶರ್ಮಾಗೆ ಆಡುವ ಅವಕಾಶ ದೊರೆತಿರಲಿಲ್ಲ. ಆದರೆ ನಂತರ ನಡೆದ ಟೆಸ್ಟ್ ಸರಣಿಯಲ್ಲಿ ಅವಕಾಶ ಪಡೆದ ಯಶಪಾಲ್ ಶರ್ಮಾ, ಆ ಸರಣಿಯಲ್ಲಿ 58.93ರ ಸರಾಸರಿಯಲ್ಲಿ 884 ರನ್ ಗಳಿಸಿದ್ದರು.

Advertisement

1983ರ ವಿಶ್ವಕಪ್ ನಲ್ಲಿ ಯಶಪಾಲ್ ಭಾರತ ತಂಡದ ಪ್ರಮುಖ ಆಟಗಾರನಾಗಿದ್ದರು. ಕೂಟದಲ್ಲಿ 34.28ರ ಸರಾಸರಿಯಲ್ಲಿ 240 ರನ್ ಗಳಿಸಿದ್ದ ಯಶಪಾಲ್ ಭಾರತದ ಪರ ಅತೀ ಹೆಚ್ಚು ರನ್ ಗಳಿಸಿದವರ ಪೈಕಿ ಎರಡನೇ ಸ್ಥಾನದಲ್ಲಿದದ್ದರು.

1983ರ ವಿಶ್ವಕಪ್ ನಲ್ಲಿ ವೆಸ್ಟ್ ಇಂಡೀಸ್ ವಿರುದ್ಧ ನಡೆದ ಮೊದಲ ಪಂದ್ಯದಲ್ಲಿ ಯಶಪಾಲ್ 89 ರನ್ ಗಳಿಸಿ ಭಾರತದ ವಿಜಯಕ್ಕೆ ನೆರವಾಗಿದ್ದರು. ಸೆಮಿಫೈನಲ್ ಪಂದ್ಯದಲ್ಲೂ ಇಂಗ್ಲೆಂಡ್ ವಿರುದ್ಧ 61 ರನ್ ಗಳಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next