Advertisement

ಕ್ರಿಕೆಟ್‌ ಆಂಕಣಕಾರ ಟೆಡ್‌ ಕಾರ್ಬೆಟ್‌ ನಿಧನ

07:20 AM Aug 13, 2017 | Team Udayavani |

ಲಂಡನ್‌: ಖ್ಯಾತ ಕ್ರಿಕೆಟ್‌ ಬರಹಗಾರ, ಅಂಕಣಕಾರ, “ಡೈಲಿ ಸ್ಟಾರ್‌’ ಪತ್ರಿಕೆಯ ಮಾಜಿ ಕ್ರಿಕೆಟ್‌ ಪ್ರತಿನಿಧಿ, “ದ ಹಿಂದೂ’ ಪತ್ರಿಕೆಯ ಅಂಕಣಕಾರ ಟೆಡ್‌ ಕಾರ್ಬೆಟ್‌ ಶುಕ್ರವಾರ ನಿಧನರಾದರು. ಅವರಿಗೆ 82 ವರ್ಷ ವಯಸ್ಸಾಗಿತ್ತು.

Advertisement

ಯಾರ್ಕಶೈರ್‌ ಈವ್ನಿಂಗ್‌ ಪ್ರಸ್‌ನಲ್ಲಿ ಟೀ-ಬಾಯ್‌ ಆಗುವ ಮೂಲಕ ಪತ್ರಿಕಾ ನಂಟನ್ನು ಬೆಳೆಸಿಕೊಂಡ ಕಾರ್ಬೆಟ್‌ ಅವರ ಬದುಕಿನ ಪಥ ಬದಲಾದದ್ದು 1951ರಲ್ಲಿ. ಅಂದು ರಾಷ್ಟ್ರೀಯ ಸೇವೆಗಾಗಿ ಜಪಾನಿಗೆ ತೆರಳಿದ ಕಾರ್ಬೆಟ್‌ ಟೋಕಿಯೋದಲ್ಲಿ ನೆಲೆ ನಿಂತು ಅಲ್ಲಿನ “ಜಪಾನ್‌ ನ್ಯೂಸ್‌’ ಪತ್ರಿಕೆಯ ಸಂಪಾದಕರಾಗಿ ನೇಮಕಗೊಂಡದ್ದೇ ಒಂದು ಇತಿಹಾಸ.

ಇಂಗ್ಲೆಂಡಿಗೆ ಮರಳಿದ ಬಳಿಕ ಕಾರ್ಬೆಟ್‌ ಅವರ ಪತ್ರಿಕೋದ್ಯಮದ ವ್ಯಾಪ್ತಿ ವಿಸ್ತಾರಗೊಳ್ಳುತ್ತದೆ. ಡೈಲಿ ಹೆರಾಲ್ಡ್‌, ಡೈಲಿ ಮಿರರ್‌, ದ ಡೈಲಿ ಟೆಲಿಗ್ರಾಫ್ ಮತ್ತು ಡೈಲಿ ಎಕ್ಸ್‌ಪ್ರೆಸ್‌ ಪತ್ರಿಕೆಗಳಲ್ಲಿ ದುಡಿದು 1982ರಲ್ಲಿ “ದ ಡೈಲಿ ಸ್ಟಾರ್‌’ ಪತ್ರಿಕೆಯ ಕ್ರಿಕೆಟ್‌ ಪ್ರತಿನಿಧಿಯಾಗಿ ನೇಮಕಗೊಳ್ಳುತ್ತಾರೆ.1989ರಲ್ಲಿ ಕಾರ್ಬೆಟ್‌ ತಮ್ಮದೇ ಆದ “ನ್ಪೋರ್ಟ್ಸ್ ಏಜೆನ್ಸಿ’ಯೊಂದನ್ನು ಆರಂಭಿಸುತ್ತಾರೆ. ಅಲ್ಲಿಂದ ಅವರ ಭಾರತದ ನಂಟು ಮೊದಲ್ಗೊಳ್ಳುತ್ತದೆ. “ದ ಹಿಂದೂ’ ಹಾಗೂ ಸಹ ಪತ್ರಿಕೆಯಾದ “ಸ್ಲೋರ್ಟ್ಸ್ಸ್ಟಾರ್‌’ ಪತ್ರಿಕೆಗೆ ಕ್ರಿಕೆಟ್‌ ಅಂಕಣಗಳನ್ನು ಒದಗಿಸುತ್ತ ಬರುತ್ತಾರೆ.

ಜನಪ್ರಿಯ ಪುಸ್ತಕಗಳು
ಕೇವಲ ಕ್ರಿಕೆಟ್‌ ಮಾತ್ರವಲ್ಲದೆ ರಗಿºà, ಫ‌ುಟ್ಬಾಲ್‌, ಸ್ನೂಕರ್‌, ಗಾಲ್ಫ್ ಮತ್ತು ಆ್ಯತ್ಲೆಟಿಕ್ಸ್‌ ಕೂಟಗಳ ಬಗ್ಗೆಯೂ ವರದಿ ಮಾಡಿದ ಹೆಗ್ಗಳಿಕೆ ಕಾರ್ಬೆಟ್‌ ಅವರದು. ಸಾಕಷ್ಟು ಕ್ರಿಕೆಟ್‌ ಪುಸ್ತಕಗಳನ್ನೂ ಬರೆದಿದ್ದಾರೆ. ಇವುಗಳಲ್ಲಿ “ದ ಗ್ರೇಟ್‌ ಕ್ರಿಕೆಟ್‌ ಬೆಟ್ಟಿಂಗ್‌ ಸ್ಕ್ಯಾಂಡಲ್‌’ (2000) ಭಾರೀ ಜನಪ್ರಿಯತೆ ಗಳಿಸಿದೆ. “ಕ್ರಿಕೆಟ್‌ ಆನ್‌ ದ ರನ್‌: 25 ಇಯರ್ ಆಫ್ ಕಾನ್‌ಫ್ಲಿಕ್ಟ್’, “ವಿಸ್ಡನ್‌ ಬುಕ್‌ ಆಫ್ ಟೆಸ್ಟ್‌ ಕ್ಯಾಪ್ಟನ್ಸ್‌’ (1991) ಇವರ ಮತ್ತೆರಡು ಕೃತಿಗಳು. ಕಾರ್ಬೆಟ್‌ ಸಾಕಷ್ಟು ಐತಿಹಾಸಿಕ ಕ್ರಿಕೆಟ್‌ ಪಂದ್ಯಗಳಿಗೂ ಪ್ರಸ್‌ ಬಾಕ್ಸ್‌ನಲ್ಲಿದ್ದು ಸಾಕ್ಷಿಯಾಗಿದ್ದರು. ಇದಕ್ಕೆ 2 ಅತ್ಯುತ್ತಮ ಉದಾಹರಣೆಯೆಂದರೆ ಇಂಗ್ಲೆಂಡಿನ 300ನೇ ಟೆಸ್ಟ್‌ ಮತ್ತು 500ನೇ ಏಕದಿನ ಪಂದ್ಯ. ಅಂತಿಮವಾಗಿ ಕಳೆದ ವರ್ಷ ತಮ್ಮೆಲ್ಲ ಕ್ರೀಡಾ ನಂಟಿನ ಸುದೀರ್ಘ‌ ಪ್ರಯಾಣಕ್ಕೆ ನಿವೃತ್ತಿ ಘೋಷಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next