Advertisement
ಐಎಂಎ ಮುಖ್ಯಸ್ಥ ಮನ್ಸೂರ್ ಖಾನ್ ರೋಶನ್ ಬೇಗ್ ವಿರುದ್ಧ ಗಂಭೀರ ಆರೋಪ ಮಾಡಿದ್ದರು. ಇದೇ ಆರೋಪದಲ್ಲಿ ರೋಶನ್ ಬೇಗ್ ಬಂಧನವಾಗಿದೆ ಎಂದು ಹೇಳಲಾಗುತ್ತಿದೆ. ಈ ಬೆನ್ನಲ್ಲೇ, ಮನ್ಸೂರ್ ಖಾನ್ ಆರೋಪಿಸಿದ್ದ ಇನ್ನೂ ಹಲವು ರಾಜಕಾರಣಿಗಳಿಗೆ ಸಿಬಿಐ ತನಿಖೆ ಬಿಸಿಯಾಗುವ ಸಾಧ್ಯತೆಗಳು ದಟ್ಟವಾಗಿವೆ.
Related Articles
Advertisement
ಐಎಂಎ ಮುಖ್ಯಸ್ಥ ಮನ್ಸೂರ್ ಅಲಿಖಾನ್, ಸಂಸ್ಥೆಯ ವಿರುದ್ಧ ಪ್ರಕರಣ ದಾಖಲಾಗುತ್ತಿದ್ದಂತೆ ತಲೆಮರೆಸಿಕೊಂಡಿದ್ದರು. ಬಳಿಕ ಅಜ್ಞಾತ ಸ್ಥಳದಿಂದ ಆಡಿಯೋ ಮಾಡಿ ಹರಿಬಿಟ್ಟಿದ್ದ ಮನ್ಸೂರ್ ಖಾನ್ ತಮ್ಮ ಬಳಿಯಿಂದ ರೋಶನ್ ಬೇಗ್ 400 ಕೋಟಿ ರೂ. ಪಡೆದು ಹಿಂತಿರುಗಿಸಿಲ್ಲ. ಅವರು ನನಗೆ ವಂಚನೆ ಮಾಡಿದ್ದಾರೆ ಜನರಿಂದ ಸಂಗ್ರಹಿಸಿದ್ದ ಹಣ ಅವರಿಗೆ ನೀಡಲಾಗಿತ್ತು ಎಂಬ ಗಂಭೀರ ಆರೋಪ ಮಾಡಿದ್ದರು. ಈ ಆರೋಪವನ್ನು ರೋಶನ್‌ಬೇಗ್ ತಳ್ಳಿ ಹಾಕಿದ್ದರು.
ಇದನ್ನೂ ಓದಿ :ಉದ್ಯೋಗಕ್ಕಾಗಿ ತಂದೆಯನ್ನೆ ಭೀಕರವಾಗಿ ಹತ್ಯೆಗೈದ ನಿರುದ್ಯೋಗಿ ಮಗ !
ಅಷ್ಟೇ ಅಲ್ಲದೆ ಮನ್ಸೂರ್ ಖಾನ್ ತನ್ನ ಆಡಿಯೋದಲ್ಲಿ ರೋಶನ್ ಬೇಗ್ ಮಾತ್ರವಲ್ಲದೆ ಹಲವು ರಾಜಕೀಯ ನಾಯಕರ ಹೆಸರುಗಳು ಹಾಗೂ ಅಧಿಕಾರಿಗಳಿಗೆ ಹಣ ನೀಡಿದ್ದಾಗಿ ಉಲ್ಲೇಖೀಸಿದ್ದರು.
ಎಸ್‌ಐಟಿ ವಿಚಾರಣೆ ಎದುರಿಸಿದ್ದ ಬೇಗ್! ಐಎಂಎ ವಂಚನೆ ಕೇಸ್ ಬಗ್ಗೆ ಮೊದಲು ತನಿಖೆ ನಡೆಸಿದ್ದ ವಿಶೇಷ ತನಿಖಾ ತಂಡ (ಎಸ್‌ಐಟಿ) ಪ್ರಕರಣದ ವಿಚಾರಣೆಗೆ ಹಾಜರಾಗುವಂತೆ ರೋಶನ್ ಬೇಗ್‌ಗೆ ನೋಟಿಸ್ ನೀಡಿತ್ತು. ಆದರೆ ವಿಚಾರಣೆಗೆ ಗೈರಾಗಿದ್ದರು ಕಳೆದ ವರ್ಷ ಜುಲೈ 19ರಂದು ರೋಶನ್ ಬೇಗ್ ನೆರೆರಾಜ್ಯಕ್ಕೆ ತೆರಳಲು ಬೆಂಗಳೂರು ಏರ್‌ಪೋರ್ಟ್‌ಗೆ ತೆರಳಿದ್ದರು. ಈ ವೇಳೆ ಎಸ್‌ಐಟಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟು ಕಳುಹಿಸಿತ್ತು. ಮುಂದೆ ಯಾರು ಟಾರ್ಗೆಟ್!
ಐಎಂಎ ವಂಚನೆ ಪ್ರಕರಣದ ತನಿಖೆ ಕೈಗೆತ್ತಿಕೊಂಡ ಬಳಿಕ ಸಿಬಿಐ ಹಂತ ಹಂತವಾಗಿ ತನಿಖೆ ನಡೆಸಿ ಆರೋಪಿಗಳನ್ನು ಬಂಧಿಸಿದೆ. ಮೊದಲಿಗೆ ಮನ್ಸೂರ್ ಖಾನ್, ಬೆಂಗಳೂರು ನಗರದ ಜಿಲ್ಲಾಧಿಕಾರಿ ಆಗಿದ್ದ ಬಿ.ಎಂ ವಿಜಯ್ ಶಂಕರ್, ಉಪವಿಭಾಗಾಧಿಕಾರಿ ಎಲ್.ಸಿ ನಾಗರಾಜ್ ಸೇರಿ ಹಲವರ ವಿರುದ್ಧ ದೋಷಾರೋಪ ಪಟ್ಟಿ ಸಲ್ಲಿಸಿತ್ತು. ಎರಡನೇ ಹಂತದಲ್ಲಿ ಐಪಿಎಸ್ ಅಧಿಕಾರಿಗಳಾದ ಹೇಮಂತ್ ನಿಂಬಾಳ್ಕರ್, ಅಜಯ್ ಹಿಲೋರಿ ಹಾಗೂ ಮೂವರು ಪೊಲೀಸ್ ಅಧಿಕಾರಿಗಳ ವಿರುದ್ದ ತನಿಖೆ ನಡೆಸಲು ಸರ್ಕಾರದಿಂದ ಅನುಮತಿ ಸಿಕ್ಕ ಬಳಿಕ ಇತ್ತೀಚೆಗೆ ಆರೋಪಿ ಅಧಿಕಾರಿಗಳ ವಿರುದ್ಧ ದೋಷಾರೋಪಪಟ್ಟಿ ಸಲ್ಲಿಸಿದ್ದು ತನಿಖೆ ಮುಂದುವರಿಸಿದೆ.