ಇಳಕಲ್ಲ: ಎಸ್.ಆರ್. ಕಂಠಿಯವರು ರಾಜ್ಯ ಕಂಡ ಅಪರೂಪದ ವಿರಳಾತೀತ ರಾಜಕಾರಣಿ ಎಂದು ನಗರಸಭೆ ಅಧ್ಯಕ್ಷ ಮಂಜುನಾಥ ಶೆಟ್ಟರ ಹೇಳಿದರು. ನಗರದ ಎಸ್.ಆರ್ ಕಂಠಿ ವೇದಿಕೆ ವತಿಯಿಂದ ಮಾಜಿ ಮುಖ್ಯಮಂತ್ರಿ ಲಿಂ| ಎಸ್.ಆರ್. ಕಂಠಿ ಜನ್ಮದಿನ ಹಾಗೂ ನಗರದ ವಿವಿಧ ಗಣ್ಯರಿಗೆ ಸತ್ಕಾರ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕಂಠಿಯವರ ಜನಸೇವೆಯ ಮಾದರಿಯಲ್ಲಿಯೇ ನಡೆದುಕೊಳ್ಳುವ ಪ್ರಾಮಾಣಿಕ ಪ್ರಯತ್ನ ಮಾಡುತ್ತೇನೆ.
ನಗರದ ಸರ್ವಾಂಗೀಣ ಪ್ರಗತಿಗೆ ನಗರ ಸ್ವಚ್ಛತೆಗೆ ಆದ್ಯತೆ ನೀಡುತ್ತೇನೆ ಹೇಳಿದರು. ರಾಜ್ಯೋತ್ಸವ ಪ್ರಶಸ್ತಿ ವಿಜೇತ ಶಿಕ್ಷಕ ಮಲ್ಲಿಕಾರ್ಜುನ ಅಂಗಡಿ ಮಾತನಾಡಿ, ಎಸ್. ಆರ್. ಕಂಠಿಯವರು ನಾಡಿನ ಜನರಿಗಾಗಿ ಅರ್ಪಿಸಿ ಜನರ ಸೇವೆಯೇ ಜನಾರ್ದನ ಸೇವೆ ತತ್ವವನ್ನು ಅನುಷ್ಠಾನಕ್ಕೆ ತಂದವರು ಎಂದು ಹೇಳಿದರು.
ಇಳಕಲ್ಲ ಬಣಜಿಗ ಕ್ಷೇಮಾಭಿವೃದ್ಧಿ ಸಂಘದ ನೂತನ ಅಧ್ಯಕ್ಷ ಗಂಗಾಧರ ಶೆಟ್ಟರ, ಉಪಾಧ್ಯಕ್ಷ ವೀರೇಶ ಜೀರಗಿ, ಪ್ರಧಾನಕಾರ್ಯದರ್ಶಿ ವೀರಭದ್ರಪ್ಪ ಅಂಗಡಿ, ಖಜಾಂಚಿ ಮಹಾಬಳೇಶ್ವರ ಮರಟದ ಹಾಗೂ ವಿಜಯಮಹಾಂತೇಶ ವಿದ್ಯಾವರ್ಧಕ ಸಂಘದ ಆಡಳಿತ ಮಂಡಳಿ ನಿರ್ದೇಶಕ ಎಂ.ಜಿ ಪಟ್ಟಣಶೆಟ್ಟಿ, ಪ್ರಶಾಂತ ಪಟ್ಟಣಶೆಟ್ಟಿ, ನಿವೃತ್ತ ಶಿಕ್ಷಕ ಅಮರೇಶ ಐಹೊಳ್ಳಿ, ಎಸ್.ಆರ್. ಕಂಠಿ ವೇದಿಕೆಯ ನಿಕಟಪೂರ್ವ ಅಧ್ಯಕ್ಷ ಅಡಿವೆಪ್ಪ ಅಂಗಡಿ, ನೂತನ ಅಧ್ಯಕ್ಷ ಬಸವರಾಜ ಗುಗ್ಗರಿ ಅವರನ್ನು ಸನ್ಮಾನಿಸಲಾಯಿತು.
ನಗರದ ಗಣ್ಯ ವರ್ತಕ ಆದಪ್ಪ ಮೇರನಾಳ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಹಿರಿಯರಾದ ಮಹಾಂತಪ್ಪ ವಾಲಿ, ವೀರಣ್ಣ ಅಂಗಡಿ, ಮಲ್ಲಣ್ಣ ಹರವಿ, ಮೋಹನ ಅಕ್ಕಿ, ವೀರಪ್ಪ ಗೋನಾಳ, ಪರುತಗೌಡ ಪಟ್ಟಣಶೆಟ್ಟಿ, ಶಿವರಾಜ ಅಕ್ಕಿ, ಮುತ್ತಣ್ಣ ಕಕ್ಕಸಗೇರಿ ಉಪಸ್ಥಿತರಿದ್ದರು. ಮಲ್ಲಪ್ಪ ಅಂಗಡಿ ಸ್ವಾಗತಿಸಿದರು. ಬಸವರಾಜ ಚಳಗೇರಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಚನ್ನಬಸವ ಲೆಕ್ಕಿಹಾಳ ನಿರೂಪಿಸಿದರು. ಸಾವಿತ್ರಿ ಬೆಲ್ಲದ ವಂದಿಸಿದರು.