Advertisement

ಮಾತು ಉಳಿಸಿಕೊಳ್ಳದ ಗೃಹ ಸಚಿವರು!

12:39 PM Apr 25, 2020 | mahesh |

ರಾಮನಗರ: ಪಾದರಾಯನಪುರ ಗಲಭೆ ಪ್ರಕರಣದ ಆರೋಪಿಗಳನ್ನು ಜಿಲ್ಲಾ ಕಾರಾಗೃಹಕ್ಕೆ ಸ್ಥಳಾಂತರಿಸಿದರೆ ಸಮಸ್ಯೆ ಉದ್ಭವಾಗಲಿದೆ ಎಂದು ಸಿಎಂ ಮತ್ತು ಸರ್ಕಾರದ ಹಿರಿಯ ಅಧಿಕಾರಿಗಳ ಗಮನ ಸೆಳೆದಿದ್ದೆ. ಪುನರ್‌ ಪರಿಶೀಲಿಸುವುದಾಗಿ ಹೇಳಿದ ಗೃಹ ಸಚಿವರು, ತಮ್ಮ ಮಾತು ಉಳಿಸಿಕೊಳ್ಳಲಿಲ್ಲ ಎಂದು ಮಾಜಿ ಸಿಎಂ ಎಚ್‌.ಡಿ.ಕುಮಾರಸ್ವಾಮಿ ದೂರಿದರು.

Advertisement

ಶುಕ್ರವಾರ ಮೈಸೂರಿನಿಂದ ಬೆಂಗಳೂರಿಗೆ ತೆರಳುವ ಮಾರ್ಗ ಮಧ್ಯೆ, ಕಾರಾಗೃಹ ಸಿಬ್ಬಂದಿ ಕುಟುಂಬಗಳಿಂದ ಅಹವಾಲು ಸ್ವೀಕರಿಸಿ ಸುದ್ದಿಗಾರರೊಂದಿಗೆ ಮಾತನಾಡಿ, ಜಿಲ್ಲಾ ಉಸ್ತುವಾರಿ ಸಚಿವರು ತಮ್ಮ ಸರ್ಕಾರದಿಂದಾದ ತಪ್ಪಿಗೆ ಪಶ್ಚಾತಾಪ ಪಟ್ಟು ಸರಿಪಡಿಸಿಕೊಳ್ಳಬೇಕು. ಅದನ್ನು ಬಿಟ್ಟು ಲಘುವಾಗಿ ಮಾತನಾಡಬಾರದು. ಕೋವಿಡ್ ಸೋಂಕಿನಂತಹ ಸಂದರ್ಭಗಳಲ್ಲಿ ರಾಜಕೀಯ ಸಲ್ಲದು. ಹುಡುಗಾಟದ ಹೇಳಿಕೆ ಕೊಡಬಾರದು ಎಂದರು.

ಕೆಳ ಹಂತದ ಸಿಬ್ಬಂದಿ ಬಗ್ಗೆ ಕಾಳಜಿ: ಕಾರಾಗೃಹದಲ್ಲಿದ್ದ ಆರೋಪಿಗಳ ಪೈಕಿ ಐವರಿಗೆ ಕೋವಿಡ್ ಪಾಸಿಟಿವ್‌ ಬಂದಿದೆ. ಕಾರಾಗೃಹದ ಕೆಳ ಹಂತದ ಸಿಬ್ಬಂದಿ ಕುಟುಂಬ ಪರಿಸ್ಥಿತಿ
ಏನಾಗಬೇಕು. ಸುಮಾರು 30ರಿಂದ 35 ಮಂದಿಯನ್ನು ಕ್ವಾರಂಟೈನ್‌ನಲ್ಲಿಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಈ ಸಿಬ್ಬಂದಿ ಬಾಡಿಗೆಯಿರುವ ಮನೆ ಮಾಲಿಕರು ಮನೆ ಖಾಲಿ ಮಾಡುವಂತೆ ಒತ್ತಡ ಹೇರುತ್ತಿದ್ದಾರೆ. ಇಂತಹ ಪರಿಸ್ಥಿತಿ ಬರಬಾರದೆಂಬ ಕಾರಣ ದಿಂದಲೇ ಆರೋಪಿಗಳನ್ನು ಬೆಂಗಳೂರಿನಲ್ಲಿಯೇ ಸರ್ಕಾರಿ ವಸತಿ ನಿಲಯಗಳಿಗೆ ಶಿಫ್ಟ್  ಮಾಡುವಂತೆ ಸಲಹೆ ನೀಡಿದ್ದೆ ಎಂದರು. ಜಿಲ್ಲಾಧಿಕಾರಿಗಳು ಹಾಗೂ ಜಿಲ್ಲಾ ಆರೋಗ್ಯಾಧಿಕಾರಿಗಳನ್ನು ದೂರವಾಣಿಯಿಂದ ಸಂಪರ್ಕಿಸಿ ಚರ್ಚೆ ನಡೆಸಿದ್ದೇನೆ. ಜಿಲ್ಲೆಯ ಜನರ ಆರೋಗ್ಯದ ದೃಷ್ಟಿಯಿಂದ ಅಗತ್ಯ ಕ್ರಮಕೈಗೊಳ್ಳುವಂತೆ ತಿಳಿಸಿದ್ದೇನೆ. ಸರ್ಕಾರದಿಂದ ತಪ್ಪಾಗಿದ್ದರೂ ಅಧಿಕಾರಿಗಳು ತಮ್ಮ ಮಿತಿಯಲ್ಲಿ ಮುಂಜಾಗೃತೆ ಕ್ರಮ ಕೈಗೊಂಡು ಪ್ರಾಮಾಣಿಕವಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next