Advertisement
ನಗರದಲ್ಲಿ ಮಾತನಾಡಿದ ಅವರು,ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಕಲುಷಿತ ನೀರು ಕುಡಿದು ಓರ್ವ ಮೃತಪಟ್ಟಿದ್ದಾನೆ. ನಾಲ್ಕು ಬಾರಿ ಈ ಕ್ಷೇತ್ರ ಪ್ರತಿನಿಧಿಸಿದ್ದ ಸಿದ್ದರಾಮಯ್ಯ ಯಾವ ರೀತಿ ಕೆಲಸ ಮಾಡಿದ್ದಾರೆ ಎಂಬುದು ಇದರಲ್ಲೆ ಗೊತ್ತಾಗುತ್ತಿದೆ. ಮೈಸೂರು ಅಭಿವೃದ್ಧಿಗೆ ಸಿದ್ದರಾಮಯ್ಯ ಕೊಡುಗೆ ಏನಿದೆ ಹೇಳಲಿ. ಸಿಎಂ ರಾಜಕೀಯದ ಕೊನೆ ಹಂತದಲ್ಲಿದ್ದಾರೆ ಈಗಲಾದರೂ ಮೈಸೂರು ಜಿಲ್ಲೆ ಅಭಿವೃದ್ಧಿ ಮಾಡಲಿ. ಅಭಿವೃದ್ಧಿ ವಿಚಾರದಲ್ಲಿ ನಮ್ಮನ್ನು ಟೀಕೆ ಮಾಡುವ ನೈತಿಕತೆ ಸಿಎಂ ಗೆ ಇಲ್ಲ ಎಂದರು.
Related Articles
Advertisement
ಪೆನ್ ಡ್ರೈವ್ ಮೂಲವೇ ಕಾರ್ತಿಕ್: ಕಾರ್ತಿಕ್ ಹಾಸನದ ಕಾಂಗ್ರೆಸ್ ಅಭ್ಯರ್ಥಿ ಇಟ್ಟುಕೊಂಡು ಡಿಕೆ ಸುರೇಶ್ ಬಳಿಗೆ ಮೊದಲು ಹೋಗಿದ್ದ. ನಂತರ ಅದನ್ನು ಸಿಡಿ ಶಿವಕುಮಾರ್ ಕಾಪಿ ಮಾಡಿಕೊಂಡಿದ್ದಾರೆ. ನಾನು ಪ್ರಜ್ವಲ್ ಪರವಾಗಿ ಇಲ್ಲ. ಆತನ ಅಪರಾಧ ಸಾಬೀತಾದರೆ ಶಿಕ್ಷೆ ಕೊಡಿ. ಸಿಎಂ ಅವರೇ ಅಧಿಕಾರ ಶಾಶ್ವತ ಅಲ್ಲ. ನಿಮ್ಮ ಅಧಿಕಾರ ದುರುಪಯೋಗದ ವಿರುದ್ದ ಕಾನೂನು ಹೋರಾಟ ಮಾಡಬೇಕಾಗುತ್ತದೆ. ದೇವರಾಜೇಗೌಡ, ಶಿವರಾಮೇಗೌಡ, ಡಿಕೆ ಶಿವಕುಮಾರ್ ಪೆನ್ ಡ್ರೈವ್ ವಿತರಣೆ ಹಿಂದೆ ಇದ್ದಾರೆ. ಅರ್ಧ ನಿಮಿಷದಲ್ಲೆ ಎಲ್ಲವೂ ತೀರ್ಮಾನ ಆಗಿದೆ. ಈಗ ಎಂಟು ಜನ ಪೊಲೀಸ್ ರ ರಕ್ಷಣೆಯಲ್ಲಿ ಕಾರ್ತಿಕ್ ಇದ್ದಾನೆ? ಯಾವ ಕಾರಣಕ್ಕೆ ಇನ್ನೂ ಕಾರ್ತಿಕ್ ಬಂಧನ ತೋರಿಸಿಲ್ಲ? ಕೋರ್ಟ್‌ಗೆ ಹಾಜರು ಪಡಿಸಿಲ್ಲ ಹೇಳಿ?
ನನ್ನ ಬಳಿ ಇರುವ ಪೆನ್ ಡ್ರೈವ್ ನಿಮ್ಮ ಸರಕಾರದ ವರ್ಗಾವಣೆಯ ಭ್ರಷ್ಟಾಚಾರದ್ದು. ಅದನ್ನು ನಾನು ಈಗ ಬಿಟ್ಟರೆ ಅದು ನನ್ನದೇ ಸೃಷ್ಟಿ ಅಂತಾ ಬೇಕಾದರೆ ನೀವು ಹೇಳ್ತೀರಾ ಎಂದರು.
ಎಸ್ ಐಟ ಗೆ ಇದುವರೆಗೂ ಕೊಟ್ಟ ಯಾವ ಪ್ರಕರಣ ತಾರ್ಕಿಕ ಅಂತ್ಯ ಕಂಡಿದೆ ಹೇಳಿ? ನನ್ನ ಅವಧಿಯಲ್ಲಿ ಯಾವ ಪ್ರಕರಣವನ್ನು ಎಸ್ ಐಟಿಗೆ ಕೊಟ್ಟಿರಲಿಲ್ಲ. ಅವರೇನೂ ಟೆರರಿಸ್ಟಾ ಫೋನ್ ಟ್ಯಾಪ್ ಮಾಡೋಕೆ ಅಂತಾ ಕೆಲವರು ಕೇಳಿದ್ದಾರೆ. ಅವರ ಬಳಿ ಇರೋರೆಲ್ಲಾ ಟೆರರಿಸ್ಟ್ ಗಳೇ. ಬಹಳಷ್ಟು ಟೆರರಿಸ್ಟ್ ಗಳು ಇವರುಗಳ ಸುತ್ತಮುತ್ತವೇ ಇದ್ದಾರೆ. ಈಗ ಸಿಎಂ ಪೆನ್ ಡ್ರೈವ್ ಬಗ್ಗೆ ಯಾರ ಮಾತಾಡಬೇಡಿ ಅಂದಿದ್ದಾರೆ. ಏಕೆಂದರೆ ನಿಮ್ಮ ಬುಡಕ್ಕೆ ಬರ್ತಾ ಇದೆಯಲ್ಲ. ಅದಕ್ಕೆ ಈಗ ಮಾತಾಡಬೇಡಿ ಅಂತಿದ್ದಾರೆ ಎಂದು ಹೇಳಿದರು.
ಬಿಜೆಪಿ – ಜೆಡಿಎಸ್ ಮೈತ್ರಿ ಗೂ ಪೆನ್ ಡ್ರೈಗೂ ಸಂಬಂಧ ಇಲ್ಲ. ಪ್ರಜ್ವಲ್ ಕರ್ನಾಟಕದಲ್ಲಿ ಇದ್ದಾಗಲೇ ನನ್ನ ಸಂಪರ್ಕದಲ್ಲಿ ಇರ್ತಾ ಇರಲಿಲ್ಲ ಇನ್ನೂ ಈಗ ಇರ್ತಾನಾ? ಪೆನ್ ಡ್ರೈವ್ ಪ್ರಕರಣದಿಂದ ದೇವೇಗೌಡರ ಫ್ಯಾಮಿಲಿ ಗೆ ಸ್ವಲ್ಪ ಡ್ಯಾಮೆಜ್ ಆಗಿರೋದು ಸತ್ಯ. ಪ್ರಜ್ವಲ್ ಎಚ್.ಡಿ. ರೇವಣ್ಣನ ಸಂಪರ್ಕದಲ್ಲೂ ಇಲ್ಲ. ನಾನು ಈಗ ಏನಾದರೂ ವಿದೇಶಕ್ಕೆ ಹೋದರೆ, ಪ್ರಜ್ವಲ್ ರಕ್ಷಣೆಗೆ ಹೋಗಿದ್ದಾರೆ ಅಂತಾ ಇವರು ಸುದ್ದಿ ಹಬ್ಬಿಸಿ ಬಿಡುತ್ತಾರೆ. ಯಾವ ಗ್ರಹಚಾರ ನಮಗೆ. ಪ್ರಜ್ವಲ್ ವಿದೇಶಕ್ಕೆ ಹೋಗೋದು ಆವತ್ತೇ ಗೊತ್ತಾಗಿದ್ದರೆ ನಾನು ಆವತ್ತೇ ಅದನ್ನು ನಿಲ್ಲಿಸುತ್ತಿದೆ. ಪ್ರಜ್ವಲ್ ಭಯ ಬಿದ್ದಿರಬಹುದು. ಅದಕ್ಕೆ ಬರ್ತಿಲ್ಲ. ಪ್ರಜ್ವಲ್ ಗೆ ಹೇಳ್ತಿದ್ದಿನಿ. ಈ ವಿಚಾರದಲ್ಲಿ ವಕೀಲರ ಸಲಹೆ ಬೇಡ ನೈತಿಕ ಕತೆ ಉಳಿಸಿಕೊಳ್ಳಲು ದೇಶಕ್ಕೆ ವಾಪಾಸ್ ಬಾ ಎಂದಿದ್ದೇನೆ ಎಂದು ಹೇಳಿದರು.