ಗಂಗಾವತಿ: ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಚಂದ್ರಬಾಬು ನಾಯ್ಡು ಬಂಧನ ಖಂಡಿಸಿ ಗಂಗಾವತಿ, ಕಾರಟಗಿ ಮತ್ತು ಕನಕಗಿರಿ ತಾಲೂಕು ವ್ಯಾಪ್ತಿಯ ತೆಲುಗು ಭಾಷಿಕರು ಹಾಗೂ ಎನ್.ಚಂದ್ರಬಾಬು ನಾಯ್ಡು ಅಭಿಮಾನಿಗಳು ಕಾರಟಗಿಯಿಂದ ಬೈಕ್ ರ‍್ಯಾಲಿ ಹಾಗೂ ಗಂಗಾವತಿ ನಗರದ ಪ್ರಮುಖ ರಸ್ತೆಗಳಲ್ಲಿ ಪ್ರತಿಭಟನಾ ಮೆರವಣಿಗೆ ನಡೆಸಿ ಶ್ರೀಕೃಷ್ಣದೇವರಾಯ ವೃತ್ತದಲ್ಲಿ ತಹಸೀಲ್ದಾರ್ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾಜಿ ಸಂಸದ ಶಿವರಾಮಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಬಿಜೆಪಿ ಮಾಜಿ ಶಾಸಕ ದಡೇಸೂಗೂರು ಬಸವರಾಜ ಮಾತನಾಡಿ, ಮಾಜಿ ಸಿಎಂ ಎನ್.ಚಂದ್ರ ಬಾಬು ನಾಯ್ಡು ಅಖಂಡ ಆಂಧ್ರಪ್ರದೇಶ ಅಭಿವೃದ್ಧಿಗಾಗಿ ಕಳೆದ 40 ವರ್ಷಗಳಿಂದ ಶ್ರಮಿಸಿದ್ದಾರೆ. ಪ್ರಸ್ತುತ ಸಿಎಂ ಜಗಮೋಹನ ರೆಡ್ಡಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಸೋಲುವ ಭೀತಿಯಿಂದ ಎನ್.ಚಂದ್ರ ಬಾಬು ನಾಯ್ಡು ಸೇರಿ ವಿಪಕ್ಷದವರ ವಿರುದ್ಧ ಸೇಡಿನ ರಾಜಕೀಯ ಮಾಡುತ್ತಿದ್ದಾರೆ. ಕೌಶಾಲ್ಯಾಭಿವೃದ್ದಿ ಯೋಜನೆ ಅನುಷ್ಠಾನದ ಮೂಲಕ ಸಾವಿರಾರು ಆಂಧ್ರ ಯುವಕರಿಗೆ ನಾಯ್ಡು ಅವಧಿಯಲ್ಲಿ ಉದ್ಯೋಗಗಳು ಲಭಿಸಿದ್ದು ಐಟಿ, ಬಿಟಿ ಕ್ಷೇತ್ರದಲ್ಲಿ ದೇಶ ವಿದೇಶಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಇಂತಹ ಸನ್ನಿವೇಶದಲ್ಲಿ ಕೌಶಲ್ಯಾಭಿವೃದ್ಧಿ ಯೋಜನೆಯಲ್ಲಿ ನಾಯ್ಡು ಅವರು 350 ಕೋಟಿ ರೂ.ಗಳ ಅಕ್ರಮವೆಸಗಿದ್ದಾರೆಂದು ಸಿಐಟಿ ಪೋಲಿಸರ ಮೂಲಕ ಕೇಸ್ ದಾಖಲಿಸಿ ಮುನ್ಸೂಚನೆಯನ್ನು ನೀಡದೇ ಬಂಧಿಸಲಾಗಿದೆ. ಝೇಡ್ ಸುರಕ್ಷತೆ ಇರುವ 73 ವರ್ಷದ ನಾಯ್ಡು ಅವರಿಗೆ ಆರೋಗ್ಯ ಸಮಸ್ಯೆಗಳಿದ್ದರೂ ರಸ್ತೆ ಮೂಲಕ ಸುತ್ತಾಡಿಸಿ ಅವಮಾನ ಮಾಡಲಾಗಿದೆ.
ಆಂಧ್ರಪ್ರದೇಶದ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಮತದಾರರು ಜಗನ್‌ಮೋಹನ್ ರೆಡ್ಡಿ ಅವರ ಪಕ್ಷಕ್ಕೆ ಸರ್ಕಾರ ನಡೆಸಲು ಅಧಿಕಾರ ನೀಡಿದ್ದಾರೆ ಇದನ್ನು ಸ್ವತಹ ಎನ್ ಚಂದ್ರ ಬಾಬು ನಾಯ್ಡು ಅವರು ಸ್ವಾಗತಿಸಿದ್ದಾರೆ. ಪ್ರಜೆಗಳ ಹೇಳಿಕೆಗಾಗಿ ರಾಜ್ಯದ ಸರ್ವಾಂಗೀಣ ಅಭಿವೃದ್ಧಿಗಾಗಿ ಯೋಜನೆಗಳನ್ನು ರೂಪಿಸಿ ಅನುಷ್ಠಾನ ಮಾಡದೆ ಚಂದ್ರಬಾಬು ನಾಯ್ಡು ಹಾಗೂ ವಿರೋಧ ಪಕ್ಷದವರನ್ನು ಹಣೆಯಲು ಆಡಳಿತಕ್ಕೆ ಬಂದ ಜಗನ್‌ಮೋಹನ್ ರೆಡ್ಡಿ ಸರ್ಕಾರ ಪ್ರಯತ್ನ ಮಾಡಿದೆ ಹಾಗೂ ಇದುವರೆಗೂ ಹಲವಾರು ಕೇಸುಗಳನ್ನು ಹಾಕಿದ್ದು ಖಂಡನೀಯವಾಗಿದೆ. ಕಮ್ಮ ಸಮುದಾಯದ ಜನರು ಆಂಧ್ರಪ್ರದೇಶ ಕರ್ನಾಟಕ ಸೇರಿದಂತೆ ದೇಶದ ಕೃಷಿ ಕ್ಷೇತ್ರದಲ್ಲಿ ಆಧುನಿಕ ಪದ್ಧತಿಯನ್ನು ತರುವ ಮೂಲಕ ದೇಶದ ಆಹಾರ ಸಾವಿರ ಅಂಬನೆ ಹೆಚ್ಚು ಮಾಡಿದ್ದಾರೆ ಜೊತೆಗೆ ಇವರೆಲ್ಲರಿಗೂ ಆಂಧ್ರಪ್ರದೇಶದ ಎನ್ ಟಿ ರಾಮರಾವ್ ಹಾಗೂ ಚಂದ್ರ ಬಾಬು ನಾಯ್ಡು ಪ್ರೇರಣೆಯಾಗಿದ್ದಾರೆ. ಆಂಧ್ರ ಪ್ರದೇಶ್ ಸರ್ಕಾರ ಮಾಜಿ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ವಿರುದ್ಧ ಹಾಕಿರುವ ಸುಳ್ಳು ಕೇಸು ವಾಪಸ್ ಪಡೆಯಬೇಕು ಜೊತೆಗೆ ಕ್ಷಮಾಪಣೆಯನ್ನು ಕೋರಬೇಕು ಇಂತಹ ಕ್ರೌರ್ಯ ಮೆರೆದ ಸರ್ಕಾರ ಮತ್ತು ಪಕ್ಷವನ್ನು ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಅಲ್ಲಿಯ ಮತದಾರರು ಕಿತ್ತೊಗಿಯಬೇಕು ಕರ್ನಾಟಕದಲ್ಲಿರುವ ಕಮನುಟಿಯವರು ಸ್ಥಳೀಯರೊಂದಿಗೆ ಸೌಹಾರ್ದದ ಬಾಳಿ ಬದುಕಿ ಇಲ್ಲಿಯ ಕೃಷಿ ಸೇರಿದಂತೆ ಹಲವು ಕ್ಷೇತ್ರಗಳಲ್ಲಿ ಅಭಿವೃದ್ಧಿ ಪಾಲ್ಗೊಂಡು ಸ್ಥಳೀಯವಾಗಿ ಮುನ್ನೆಲೆ ಇರುವುದು ಅತ್ಯಂತ ಸಂತೋಷವಾಗಿದೆ ಶಿಕ್ಷಣ ಸಾಮಾಜಿಕ ರಾಜಕೀಯವಾಗಿ ಸ್ಥಳೀಯರೊಂದಿಗೆ ಸೌಹಾರ್ದವಾಗಿ ಸಹೋದರ ತಿಂದ ಬಾಳಿ ಬದುಕುತ್ತಿರುವ ಅಮ್ಮ ಜನಾಂಗದ ಜೊತೆ ನಾವೆಲ್ಲರೂ ನಿಲ್ಲಬೇಕಿದೆ.
ರಾಷ್ಟ್ರಪತಿಗಳು ಮಧ್ಯೆ ಪ್ರವೇಶ ಮಾಡಿ ನಾಯ್ಡು ಅವರ ಮೇಲಿನ ಅಕ್ರಮ ಕೇಸ್ ಬಗ್ಗೆ ಪರಾಮರ್ಶೆ ಮಾಡಬೇಕು. ಕೂಡಲೇ ಜಗಮೋಹನ ಸರಕಾರ ಕಿತ್ತು ಹಾಕಿ ರಾಷ್ಟ್ರಪತಿ ಆಳ್ವಿಕೆ ಹೇರುವಂತೆ ಒತ್ತಾಯಿಸಲಾಯಿತು.
ಪ್ರತಿಭಟನೆಯಲ್ಲಿ ಮಾಜಿ ಸಂಸದ ಶಿವರಾಮಗೌಡ, ಜಿ.ಪಂ.ಮಾಜಿ ಅಧ್ಯಕ್ಷ ಕೆ.ರಾಜಶೇಖರ ಹಿಟ್ನಾಳ, ಬಿಜೆಪಿ ಮಾಜಿ ಶಾಸಕ ದಡೇಸೂಗೂರು ಬಸವರಾಜ, ಸರ್ವೇಶ ಮಾಂತಗೊಂಡ, ತಿಪ್ಪೇರುದ್ರಸ್ವಾಮಿ, ಕಾರ್ಮಿಕ ಮುಖಂಡ ಜೆ.ಭಾರದ್ವಾಜ್, ಮುಖಂಡರಾದ ಅಮರೇಶ ಕರಡಿ, ವಿಜಯಲಕ್ಷ್ಮಿ, ರಾಮಕೃಷ್ಣ, ನೆಕ್ಕಂಟಿ ಸೂರಿಬಾಬು, ಪೊಲೀನ ನಾನಿ, ಟಿ.ವಿ.ಸತ್ಯನಾರಾಯಣ, ಕಲ್ಗುಡಿ ಪ್ರಸಾದ, ಕಾಂತರಾವ್, ಯಡ್ಲಪಲ್ಲಿ ಆನಂದರಾವ್, ಜವ್ವಾದಿ ಶ್ರೀನಿವಾಸ, ಮೇಕಾ ಸುಬ್ರಮಣ್ಯ, ಜಾಬಕೀರಾಮ, ಧನಂಜಯ, ಬಾಬಾಣ್ಣ, ರೆಡ್ಡಿ ಶ್ರೀನಿವಾಸ, ಮಹಮದ್ ರಫಿ, ಜೋಗದ ಹನುಮಂತಪ್ಪ ನಾಯಕ, ದುರ್ಗಾರಾವ್, ನಾನಿ ಪ್ರಸಾದ, ಸತ್ಯನಾರಾಯಣ ಸೇರಿ ಸಾವಿರಾರು ಜನರಿದ್ದರು.