Advertisement

ನೂತನ ಅಧ್ಯಕ್ಷರಾಗಿ ಮಾಜಿ ನಗರ ಸೇವಕ ಸುರೇಶ್‌ ಶೆಟ್ಟಿ ಆಯ್ಕೆ

06:11 PM Feb 06, 2021 | Team Udayavani |

ಮುಂಬಯಿ: ಶ್ರೀಕ್ಷೇತ್ರ ನೆರೂಲ್‌ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಮಂದಿರದ ಶ್ರೀ ಮಣಿಕಂಠ ಸೇವಾ ಸಂಘಮ್‌ ಇದರ 26ನೇ ವಾರ್ಷಿಕ ಮಹಾಸಭೆಯು ಜ. 24 ರಂದು ಬೆಳಗ್ಗೆ ನೆರೂಲ್‌ ಪೂರ್ವದ ಶ್ರೀ ಗಣಪತಿ ಅಯ್ಯಪ್ಪ ದುರ್ಗಾದೇವಿ ಕ್ಷೇತ್ರದಲ್ಲಿರುವ ಶ್ರೀಮತಿ ಭವಾನಿ ದೇರಣ್ಣ ಶೆಟ್ಟಿ ಧ್ಯಾನ ಮಂದಿರದ ಶ್ರೀ ಗುರುದೇವಾನಂದ ಸ್ವಾಮಿ ಸಭಾಗೃಹದಲ್ಲಿ ನಡೆಯಿತು.

Advertisement

ಶೋಭಾ ಕರುಣಾಕರ ಶೆಟ್ಟಿ ಅವರ ಪ್ರಾರ್ಥನೆಯೊಂದಿಗೆ ವಾರ್ಷಿಕ ಸಭಾ ಕಾರ್ಯಕ್ರಮ ಆರಂಭಗೊಂಡಿತು. ಅಧ್ಯಕ್ಷ ಸಂಜೀವ ಎನ್‌. ಶೆಟ್ಟಿ ಅವರು ಸದಸ್ಯರನ್ನು ಸ್ವಾಗತಿಸಿದರು. ಕಾರ್ಯಸೂಚಿಯಂತೆ ಕಾರ್ಯದರ್ಶಿ ಹರಿ ಎಲ್‌. ಶೆಟ್ಟಿ ಅವರು ಗತವರ್ಷದ ವಾರ್ಷಿಕ ಮಹಾಸಭೆಯ ಕಾರ್ಯಕಲಾಪದ ವಿವರವನ್ನು ನೀಡಿದರು. ಕೋಶಾಧಿಕಾರಿ ಭಾಸ್ಕರ್‌ ವೈ. ಶೆಟ್ಟಿ ಅವರು ಗತವರ್ಷದ ಲೆಕ್ಕಪತ್ರದ ವಿವರವನ್ನು ಮಂಡಿಸಿದರು. ನೂತನ ಲೆಕ್ಕಪರಿಶೋಧಕ
ರಾಗಿ ವಿಶ್ವನಾಥ್‌ ಶೆಟ್ಟಿ ಹಾಗೂ ಕಂಪೆನಿಯನ್ನು ಆಯ್ಕೆ ಮಾಡಲಾಯಿತು.

ನೂತನ ಸಮಿತಿ ಮಾಜಿ ನಗರ ಸೇವಕರು, ಸಂಸ್ಥೆಯ ಉಪಾ ಧ್ಯಕ್ಷರಾಗಿರುವ ಸುರೇಶ್‌ ಜಿ. ಶೆಟ್ಟಿ ಅವರು ನೂತನ ಅಧ್ಯಕ್ಷರಾಗಿ ಆಯ್ಕೆಯಾದರು. ಕಾರ್ಯಾಧ್ಯಕ್ಷರಾಗಿ ರವಿ ಆರ್‌. ಶೆಟ್ಟಿ, ಉಪಾಧ್ಯಕ್ಷರಾಗಿ ದಾಮೋದರ ಎಸ್‌. ಶೆಟ್ಟಿ ಹಾಗೂ ಹರಿ ಎಲ್‌. ಶೆಟ್ಟಿ ಅವರನ್ನು ನೇಮಿಸಲಾಯಿತು. ಗೌರವ ಪ್ರಧಾನ ಕಾರ್ಯದರ್ಶಿಯಾಗಿ ಮೋಹನದಾಸ್‌ ಕೆ. ರೈ, ಕೋಶಾಧಿಕಾರಿಯಾಗಿ ಸುರೇಶ್‌ ಆರ್‌. ಶೆಟ್ಟಿ ಸೀತಾನದಿ, ಜತೆ ಕಾರ್ಯದರ್ಶಿಯಾಗಿ ಸದಾಶಿವ ಎನ್‌. ಶೆಟ್ಟಿ, ಜತೆ ಕೋಶಾಧಿಕಾರಿಯಾಗಿ ಅಣ್ಣಪ್ಪ ರಾಜು ಕೋಟೆಕಾರ್‌ ಮತ್ತು ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆಯಾಗಿ ಪ್ರಭಾವತಿ ವಿ. ಶೆಟ್ಟಿ ಅವರು ಆಯ್ಕೆಯಾದರು.

ಉದ್ಯಮಿ ಕೆ. ಡಿ. ಶೆಟ್ಟಿ, ರಮೇಶ್‌ ಎಂ. ಪೂಜಾರಿ, ಕರುಣಾಕರ್‌ ಎಸ್‌. ಆಳ್ವ ಹಾಗೂ ಹಿರಿಯರಾದ ಕೆ. ಕೆ. ಶೆಟ್ಟಿಯವರು ಸೂಕ್ತ ಸಲಹೆಗಳನ್ನು ನೀಡಿದರು. ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ, ಸಂಸ್ಥೆಯ ಮಾಜಿ ಅಧ್ಯಕ್ಷ ಕುಸುಮೋದರ ಡಿ. ಶೆಟ್ಟಿ ಹಾಗೂ ಅವರ ಪತ್ನಿ ಸರಿತಾ ಕೆ. ಶೆಟ್ಟಿಯವರನ್ನು ಸಮ್ಮಾನಿಸಲಾಯಿತು.

ಅಧ್ಯಕ್ಷರಾದ ಸಂಜೀವ ಎನ್‌. ಶೆಟ್ಟಿ ಅವರು ನೂತನ ಕಾರ್ಯಕಾರಿ ಸಮಿತಿಯ ಸದಸ್ಯರನ್ನು ಪುಷ್ಪಗುತ್ಛವನ್ನಿತ್ತು ಗೌರವಿಸಿದರು.
ಕೋಶಾಧಿಕಾರಿ ಭಾಸ್ಕರ ವೈ. ಶೆಟ್ಟಿ, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಇಂದಿರಾ ಎಸ್‌. ಶೆಟ್ಟಿ, ಉಪಾಧ್ಯಕ್ಷರಾದ ಸುರೇಶ್‌ ಜಿ. ಶೆಟ್ಟಿಯವರು ಸಂದಭೋìಚಿತವಾಗಿ ಮಾತನಾಡಿದರು.

Advertisement

ಇದನ್ನೂ ಓದಿ:ಹುಣಸೋಡು ಕಲ್ಲುಕ್ವಾರಿ ಸ್ಫೋಟ ಪ್ರಕರಣ: ಮತ್ತೆ ನಾಲ್ವರ ಬಂಧನ

ಸಂಜೀವ ಎನ್‌. ಶೆಟ್ಟಿ ಅವರು ತನ್ನ ಅಧ್ಯಕ್ಷೀಯ ಭಾಷಣದಲ್ಲಿ ನೂತನ ಸಮಿತಿಗೆ ಶುಭವನ್ನು ಕೋರಿ ತನ್ನ ಕಾರ್ಯಾವಧಿ
ಯಲ್ಲಿ ಸಹಕಾರವಿತ್ತ ಸರ್ವರನ್ನು ಸ್ಮರಿಸಿ ಕೊಂಡು ಕೃತಜ್ಞತೆಯನ್ನು ಸಲ್ಲಿಸಿದರು. ಸದಸ್ಯ ಭಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next