Advertisement

ನೆಲೋಗಿ; ಮಾಜಿ ಸಿಎಂ ಧರಂಸಿಂಗ್ ಪಂಚಭೂತಗಳಲ್ಲಿ ಲೀನ

05:32 PM Jul 28, 2017 | Team Udayavani |

ಜೇವರ್ಗಿ: ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಗುರುವಾರ ಹೃದಯಾಘಾತದಿಂದ ವಿಧಿವಶರಾಗಿದ್ದ ಮಾಜಿ ಮುಖ್ಯಮಂತ್ರಿ, ಸೋಲಿಲ್ಲದ ಸರದಾರ, ಅಜಾತಶತ್ರು ಎನ್. ಧರಂಸಿಂಗ್ ಅವರ ಅಂತ್ಯಕ್ರಿಯೆ ಹುಟ್ಟೂರಾದ ಜೇವರ್ಗಿಯ ನೆಲೋಗಿಯ ತೋಟದಲ್ಲಿ ಸಕಲ ಸರ್ಕಾರಿ ಗೌರವದೊಂದಿಗೆ ಶುಕ್ರವಾರ ರಜಪೂತ ಸಂಪ್ರದಾಯದಂತೆ ನಡೆಯಿತು.

Advertisement

ರಜಪೂತ ಆರ್ಯ ಸಂಪ್ರದಾಯದಂತೆ ಹಿರಿಯ ಮಗ ವಿಜಯ್ ಸಿಂಗ್ ಅವರು ಅಂತಿಮ ಕಾರ್ಯ ನೆರವೇರಿಸಿದರು. ಪುತ್ರ ವಿಜಯ್ ಸಿಂಗ್ ಅವರು ಗಂಧದ ಕಟ್ಟಿಗೆಯ ಚಿತೆಗೆ ಅಗ್ನಿಸ್ಪರ್ಶ ಮಾಡಿದರು.  ನರಸಿಂಹ ಶಾಸ್ತ್ರಿ, ವಿಶ್ವಶರ್ಮ ನೇತೃತ್ವದಲ್ಲಿ ಅಂತಿಮ ವಿಧಿ ನೆರವೇರಿಸಲಾಯಿತು.

ಅಗ್ನಿಸ್ಪರ್ಶಕ್ಕೂ ಮೊದಲು ಮುಕ್ತಿ ಹವನ ನೆರವೇರಿಸಲಾಯಿತು. ಗಂಧದ ಕಟ್ಟಿಗೆಯ ಚಿತೆಗೆ ವಿಜಯ್ ಅವರು ಗಡಿಗೆ ನೀರು ತುಂಬಿಕೊಂಡು ಮೂರು ಸುತ್ತು ಸುತ್ತಿ, ಬಳಿಕ ಚಿತೆಗೆ ಅಗ್ನಿಸ್ಪರ್ಶ ಮಾಡಿದರು. 

ಇಡೀ ನೆಲೋಗಿ ಗ್ರಾಮಸ್ಥರು ಶೋಕಸಾಗರದಲ್ಲಿ ಮುಳುಗಿದ್ದರು. ತಮ್ಮ ನೆಚ್ಚಿನ ನಾಯಕನನ್ನು ನೆನೆದು ಕಣ್ಣೀರು ಹಾಕಿದರು. ಅಜಾತಶತ್ರುವಿನ ಪಾರ್ಥಿವ ಶರೀರ ನೋಡಲು ಸುಡು ಬಿಸಿಲಿನಲ್ಲೂ ಜನಸಾಗರವೇ ಹರಿದು ಬಂದಿತ್ತು. ಅಂತ್ಯ ಸಂಸ್ಕಾರದ ವೇಳೆ ಮುಖ್ಯಮಂತ್ರಿ ಸಿದ್ದರಾಮಯ್ಯ, ಜಲಸಂಪನ್ಮೂಲ ಸಚಿವ ಎಂಬಿ ಪಾಟೀಲ್, ಮಲ್ಲಿಕಾರ್ಜುನ ಖರ್ಗೆ, ವೀರಪ್ಪ ಮೊಯ್ಲಿ, ದಿಗ್ವಿಜಯ್ ಸಿಂಗ್, ರಾಜ್ಯ ಕಾಂಗ್ರೆಸ್ ಉಸ್ತುವಾರಿ ವೇಣುಗೋಪಾಲ್ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next