Advertisement

Team India; ನೆಚ್ಚಿನ ಆಟಗಾರನನ್ನು ಹೆಸರಿಸಿದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ

07:43 PM Aug 01, 2024 | Team Udayavani |

ಮುಂಬೈ: ಟೀಂ ಇಂಡಿಯಾದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ (Mahendra Singh Dhoni) ಅವರು ಸದ್ಯದ ತನ್ನ ನೆಚ್ಚಿನ ಆಟಗಾರನ ಬಗ್ಗೆ ಮಾತನಾಡಿದ್ದಾರೆ. ಖಾಸಗಿ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಮಹೇಂದ್ರ ಸಿಂಗ್ ಧೋನಿ ಅವರು ಟೀಂ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ (Jasprit Bumrah) ಅವರು ಸದ್ಯದ ತನ್ನ ನೆಚ್ಚಿನ ಆಟಗಾರ ಎಂದು ಹೇಳಿದ್ದಾರೆ.

Advertisement

ಪ್ರಚಾರ ಕಾರ್ಯಕ್ರಮದಲ್ಲಿ ಧೋನಿ ಅವರಿಗೆ ನಿಮ್ಮೆ ಫೇವರೇಟ್ ಆಟಗಾರ ಯಾರು ಎಂದು ಕೇಳಿದರು. ಅದಕ್ಕುತ್ತರಿಸಿದ ಧೋನಿ, “ಸದ್ಯ ಫೇವರೇಟ್, ಜಸ್ಪ್ರೀತ್ ಬುಮ್ರಾ ಇರುವುದರಿಂದ ಬೌಲರ್ ಗಳಲ್ಲಿ ಆಯ್ಕೆ ಮಾಡುವುದು ಸುಲಭ. ಆದರೆ ತುಂಬಾ ಜನ ಒಳ್ಳೆಯ ಬ್ಯಾಟರ್ ಗಳು ಇರುವುದರಿಂದ ಬ್ಯಾಟರ್ ಆಯ್ಕೆ ಕಷ್ಟ” ಎಂದರು.

“ಭಾರತ ತಂಡವು ಉತ್ತಮ ಪ್ರದರ್ಶನ ನೀಡುತ್ತಿರುವಾಗ ನಾನು ಬ್ಯಾಟರ್ ನನ್ನು ಆಯ್ಕೆ ಮಾಡುವುದಿಲ್ಲ. ಅವರು ರನ್ ಗಳಿಸುತ್ತಲೇ ಇರುತ್ತಾರೆ. ಹೀಗಾಗಿ ನಾನು ಫೇವರೇಟ್ ಬೌಲರ್ ನನ್ನು ಆಯ್ಕೆ ಮಾಡಿದೆ” ಎಂದು ಧೋನಿ ಹೇಳಿದರು.

ಇತ್ತೀಚೆಗೆ ನಡೆದ ಟಿ20 ವಿಶ್ವಕಪ್ ನಲ್ಲಿ ಜಸ್ಪ್ರೀತ್ ಬುಮ್ರಾ ಅವರು ಭಾರತದ ಪರ ಅದ್ಭುತ ಪ್ರದರ್ಶನ ನೀಡಿದ್ದರು. 8.26 ರ ಸರಾಸರಿಯಲ್ಲಿ 15 ವಿಕೆಟ್ ಸೇರಿದಂತೆ ಅವರ ಅಸಾಧಾರಣ ಪ್ರದರ್ಶನವು ಭಾರತವು ಎರಡನೇ ಟಿ20 ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿತು. 2007 ರಲ್ಲಿ ಧೋನಿಯ ನಾಯಕತ್ವದಲ್ಲಿ ಮೊದಲನೆಯ ಬಾರಿಗೆ ಭಾರತ ಟಿ20 ವಿಶ್ವಕಪ್ ಗೆದ್ದಿತ್ತು.

Advertisement

Udayavani is now on Telegram. Click here to join our channel and stay updated with the latest news.

Next