Advertisement

ಟಿಎಂಸಿ ಶಾಸಕ ರಜೀಬ್‌ ಬ್ಯಾನರ್ಜಿ ರಾಜೀನಾಮೆ :  ಬಿಜೆಪಿಗೆ ಸೇರ್ಪಡೆ ಸಾಧ್ಯತೆ

09:27 PM Jan 29, 2021 | Team Udayavani |

ಕೋಲ್ಕತ್ತಾ: ಇತ್ತೀಚೆಗಷ್ಟೇ ಪಶ್ಚಿಮ ಬಂಗಾಳದ ಮಮತಾ ಬ್ಯಾನರ್ಜಿ ಸಂಪುಟ ತೊರೆದಿದ್ದ ಟಿಎಂಸಿ ನಾಯಕ ರಜೀಬ್‌ ಬ್ಯಾನರ್ಜಿ ಶುಕ್ರವಾರ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.

Advertisement

ದೋಮೂjರ್‌ ವಿಧಾನಸಭಾ ಕ್ಷೇತ್ರವನ್ನು ಪ್ರತಿನಿಧಿಸುತ್ತಿದ್ದ ರಜೀಬ್‌ ಬಿಜೆಪಿಗೆ ಸೇರ್ಪಡೆಯಾಗುವ ಸಾಧ್ಯತೆ ಅಧಿಕವಾಗಿದೆ ಎಂದು ಮೂಲಗಳು ತಿಳಿಸಿವೆ.

ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರ ಬಂಗಾಳ ಭೇಟಿ ಸಮಯದಲ್ಲೇ ಈ ಬೆಳವಣಿಗೆ ನಡೆದಿದೆ. ಶನಿವಾರದಿಂದ 2 ದಿನಗಳ ಕಾಲ ಶಾ ಅವರು ಬಂಗಾಳದಲ್ಲಿರಲಿದ್ದು, ಎರಡು ಸಾರ್ವಜನಿಕ ರ್ಯಾಲಿಗಳನ್ನು ಉದ್ದೇಶಿಸಿ ಭಾಷಣ ಮಾಡಲಿದ್ದಾರೆ. ಜತೆಗೆ, ಬಿಜೆಪಿಯ ಚುನಾವಣಾ ಸಿದ್ಧತೆಯನ್ನೂ ಪರಿಶೀಲಿಸಲಿದ್ದಾರೆ.

ಇದನ್ನೂ ಓದಿ:GI ಟ್ಯಾಗ್‌ ಹೊಂದಿದ ಉತ್ಪನ್ನಗಳ ಮಾರುಕಟ್ಟೆಗೆ ವಿಮಾನ, ಬಸ್‌, ರೈಲ್ವೆ ನಿಲ್ದಾಣಗಳಲ್ಲಿ ಮಳಿಗೆ

Advertisement

Udayavani is now on Telegram. Click here to join our channel and stay updated with the latest news.

Next