Advertisement

ಅಣುಶಕ್ತಿ ಆಯೋಗದ ಮಾಜಿ ಮುಖ್ಯಸ್ಥ ಶ್ರೀಕುಮಾರ್‌ ಬ್ಯಾನರ್ಜಿ ಹೃದಯಾಘಾತದಿಂದ ನಿಧನ

08:27 PM May 23, 2021 | Team Udayavani |

ಮುಂಬೈ: ಭಾರತ ಅಣುಶಕ್ತಿ ಆಯೋಗದ ಮಾಜಿ ಮುಖ್ಯಸ್ಥ ಶ್ರೀಕುಮಾರ್‌ ಬ್ಯಾನರ್ಜಿ (70) ಹೃದಯಾಘಾತದಿಂದ ಭಾನುವಾರ ನಿಧನರಾಗಿದ್ದಾರೆ. ಕೊರೊನಾ ದೃಢಪಟ್ಟಿದ್ದ ಅವರು ಚೇತರಿಸಿಕೊಳ್ಳುತ್ತಿದ್ದರು.

Advertisement

2012ರಲ್ಲಿ ಅಣುಶಕ್ತಿ ಇಲಾಖೆಯ ಕಾರ್ಯದರ್ಶಿಯಾಗಿದ್ದರು. ಮೆಟಲರ್ಜಿಯಲ್ಲಿ ಬಿಟೆಕ್‌ ಪದವೀಧರರಾಗಿದ್ದ ಅವರು, ಭಾಭಾ ಅಣು ಸಂಶೋಧನಾ ಕೇಂದ್ರದ (ಬಾರ್ಕ್‌) ನಿರ್ದೇಶಕರಾಗಿ 6 ವರ್ಷ ಕರ್ತವ್ಯ ನಿರ್ವಹಿಸಿದ್ದಾರೆ.

1989ರಲ್ಲಿ ಶಾಂತಿ ಸ್ವರೂಪ್‌ ಭಟ್ನಾಗರ್‌ ಪ್ರಶಸ್ತಿ, 2005ರಲ್ಲಿ ಪದ್ಮಶ್ರೀಗೆ ಪಾತ್ರರಾಗಿದ್ದರು. ಪ್ರಧಾನಿ ನರೇಂದ್ರ ಮೋದಿ ಸಂತಾಪ ಸೂಚಿಸಿದ್ದಾರೆ.

ಇದನ್ನೂ ಓದಿ :Airforce Test Pilot ಪದವೀಧರೆಯಾದ ಮೊದಲ ಭಾರತೀಯ ಮಹಿಳೆ: ಚಾ.ನಗರ ಜಿಲ್ಲೆಯ ಆಶ್ರಿತಾ ಒಲೇಟಿ

Advertisement

Udayavani is now on Telegram. Click here to join our channel and stay updated with the latest news.