Advertisement

ಅಸ್ಸಾಂ ಮಾಜಿ ಮುಖ್ಯಮಂತ್ರಿ ಭೂಮಿಧರ್ ಬರ್ಮನ್ ನಿಧನ

09:46 PM Apr 18, 2021 | Team Udayavani |

ಗುವಾಹಟಿ: ಅಸ್ಸಾಂನ ಮಾಜಿ ಮುಖ್ಯಮಂತ್ರಿ ಡಾ. ಭೂಮಿಧರ್ ಬರ್ಮನ್ (90) ಭಾನುವಾರ ಸಂಜೆ ( ಏಪ್ರಿಲ್ 18) ನಿಧನರಾಗಿದ್ದಾರೆ.

Advertisement

ಅನಾರೋಗ್ಯದಿಂದ ಬಳಲುತ್ತಿದ್ದ ಅವರನ್ನು ಗುವಾಹಟಿಯ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಇಹಲೋಕ ತ್ಯಜಿಸಿದ್ದಾರೆ.

ಭೂಮಿಧರ್ ಅವರು 1996ರಲ್ಲಿ ಏಪ್ರಿಲ್ ನಿಂದ ಮೇ ವರೆಗೆ ( ಒಂದು ತಿಂಗಳಾವಧಿಗೆ) ಅಸ್ಸಾಂನ ಮುಖ್ಯಮಂತ್ರಿಯಾಗಿದ್ದರು. ಅಂದಿನ ಮುಖ್ಯಮಂತ್ರಿ ಹಿತೇಶ್ವರ್ ಸೈಕೈ ಅಕಾಲಿಕ ನಿಧನದಿಂದಾಗಿ ಭೂಮಿಂದರ್ ಅವರು ಮುಖ್ಯಮಂತ್ರಿಗಳಾಗಿ ಅಧಿಕಾರ ವಹಿಸಿಕೊಂಡಿದ್ದರು. ಇವರು ಬರೋಬ್ಬರಿ 7 ಬಾರಿ ಎಂಎಲ್‍ಎ ಆಗಿ ಆಯ್ಕೆಗೊಂಡಿದ್ದರು.

ಭೂಮಿಧರ್ ಅವರ ನಿಧನಕ್ಕೆ ಅಸ್ಸಾಂ ಕಾಂಗ್ರೆಸ್ ಸಂತಾಪ ಸೂಚಿಸಿದೆ. ಹಾಗೂ ಅಸ್ಸಾಂ ಸರ್ಕಾರ ರಾಜ್ಯಾದ್ಯಂತ ಮೂರು ದಿನಗಳ ವರೆಗೆ ಶೋಕಾಚರಣೆ ಘೋಷಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next