ಬೆಂಗಳೂರು: ಮಲೇಷ್ಯಾ ಮೂಲದ ಮಹಿಳೆ , ನಟಿ ಮೇಲೆ ಅತ್ಯಾಚಾರ ಎಸಗಿ, ಬಲವಂತದಿಂದ ಗರ್ಭಪಾತ ಮಾಡಿಸಿರುವ ಆರೋಪದ ಮೇಲೆ ತಮಿಳುನಾಡಿನ ಮಾಜಿ ಸಚಿವ, ಎಐಎಡಿಎಂಕೆ ಮುಖಂಡ ಎಂ.ಮಣಿಕಂಠನ್ ಅವರನ್ನು ಚೆನ್ನೈ ಪೊಲೀಸರ ತಂಡ ಬೆಂಗಳೂರಿನಲ್ಲಿ ಬಂಧಿಸಿದೆ.
ಇದನ್ನೂ ಓದಿ:ತೆಲಂಗಾಣ:ಕಳ್ಳತನ ಆರೋಪದಲ್ಲಿ ಬಂಧಿಸಲ್ಪಟ್ಟ ಮಹಿಳೆ ಜೈಲಿನಲ್ಲೇ ಸಾವು; ಕೊಲೆ ಎಂದ ಕುಟುಂಬಸ್ಥರು
ಕಳೆದ ತಿಂಗಳು ಮಹಿಳೆ ಮಾಜಿ ಸಚಿವ ಮಣಿಕಂಠನ್ ವಿರುದ್ಧ ಮದುವೆಯಾಗುವುದಾಗಿ ನಂಬಿಸಿ ಮೋಸ ಮಾಡಿರುವುದಾಗಿ ಆರೋಪಿಸಿ ದೂರು ದಾಖಲಿಸಿದ್ದರು. ಈ ನಿಟ್ಟಿನಲ್ಲಿ ಅಡ್ಯಾರ್ ಆಲ್ ವುಮೆನ್ ಪೊಲೀಸ್ ಮಣಿಕಂಠನ್ ವಿರುದ್ಧ ಐಪಿಸಿ ಸೆಕ್ಷನ್ 376(ಅತ್ಯಾಚಾರ), 313 (ಮಹಿಳೆಯ ಒಪ್ಪಿಗೆ ಇಲ್ಲದೆ ಗರ್ಭಪಾತ), 323 (ಉದ್ದೇಶಪೂರ್ವಕ ಅವಮಾನ), 417(ವಂಚನೆ) ಹಾಗೂ 506(ಕ್ರಿಮಿನಲ್ ಆರೋಪ)ರ ಪ್ರಕಾರ ಪ್ರಕರಣ ದಾಖಸಿಕೊಂಡಿದ್ದರು.
ಅತ್ಯಾಚಾರ ಪ್ರಕರಣದಲ್ಲಿ ಮಣಿಕಂಠನ್ ಗೆ ಮದ್ರಾಸ್ ಹೈಕೋರ್ಟ್ ನಿರೀಕ್ಷಣಾ ಜಾಮೀನು ನಿರಾಕರಿಸಿತ್ತು. ಆದರೆ ಜೂನ್ 9ರವರೆಗೆ ಬಂಧಿಸದಂತೆ ಕೋರ್ಟ್ ಪೊಲೀಸರಿಗೆ ನಿರ್ದೇಶನ ನೀಡಿತ್ತು. ನಾಪತ್ತೆಯಾಗಿದ್ದ ಮಣಿಕಂಠನ್ ಬಂಧನಕ್ಕಾಗಿ ಎರಡು ವಿಶೇಷ ತಂಡಗಳನ್ನು ರಚಿಸಲಾಗಿತ್ತು.
ಮಲೇಷ್ಯಾ ಮೂಲದ ಭಾರತೀಯ ಮಹಿಳೆ, ನಟಿ ಮಾಜಿ ಸಚಿವರ ವಿರುದ್ಧ ದೂರು ನೀಡಿ, ಕಳೆದ ಕೆಲವು ವರ್ಷಗಳಿಂದ ಲಿವ್ ಇನ್ ರಿಲೇಶನ್ ಶಿಪ್ ನಲ್ಲಿ ಇದ್ದು, ತನ್ನನ್ನು ಮದುವೆಯಾಗುವುದಾಗಿ ಭರವಸೆ ನೀಡಿದ್ದರು. ಮೂರು ಬಾರಿ ಗರ್ಭಿಣಿಯಾದಾಗಲೂ ಬಲವಂತದಿಂದ ಗರ್ಭಪಾತ ಮಾಡಿಸಿರುವುದಾಗಿ ಆರೋಪಿಸಿದ್ದರು.