Advertisement

ಮಠಾಧೀಶರ ಒಕ್ಕೂಟ ರಚನೆ

08:34 AM Aug 03, 2017 | |

ಯಾದಗಿರಿ: ತಾಲೂಕಿನ ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಅಬ್ಬೆತುಮಕೂರಿನ ಸಿದ್ಧ ಸಂಸ್ಥಾನ ಮಠದಲ್ಲಿ ಡಾ| ಗಂಗಾಧರ ಮಹಾಸ್ವಾಮೀಜಿ ನೇತೃತ್ವದಲ್ಲಿ ಜಿಲ್ಲೆಯ ವೀರಶೈವ ಲಿಂಗಾಯತ ಪ್ರಮುಖ ಮಠಾಧೀಶರು ಸಭೆ ಸೇರಿ ಸಗರನಾಡು ಮಠಾಧೀಶರ ಒಕ್ಕೂಟ ರಚಿಸಿ ಪದಾಧಿಕಾರಿಗಳ
ಆಯ್ಕೆ ಮಾಡಲಾಯಿತು.

Advertisement

ಒಕ್ಕೂಟದ ಗೌರವಾಧ್ಯಕ್ಷರಾಗಿ ಅಬ್ಬೆತುಮಕೂರು ಸಿದ್ಧ ಸಂಸ್ಥಾನ ಮಠದ ಪೀಠಾಧಿಪತಿ ಡಾ| ಗಂಗಾಧರ ಮಹಾಸ್ವಾಮೀಜಿ, ಬಾಡಿಯಾಲ ಹಿರೇಮಠದ ಚನ್ನವೀರ ಶಿವಾಚಾರ್ಯರನ್ನು ನೇಮಕ ಮಾಡಲಾಯಿತು. ಅಧ್ಯಕ್ಷರಾಗಿ ಜಡಿ ಶಾಂತಲಿಂಗೇಶ್ವರ ಹಿರೇಮಠ ದೇವಾಪೂರ-ಅಚಲೇರಾದ ಪೀಠಾಧಿಪತಿ ಶಿವ ಮೂರ್ತಿ ಶಿವಾಚಾರ್ಯರು, ಉಪಾಧ್ಯಕ್ಷರಾಗಿ ದೋರನಹಳ್ಳಿಯ ಮಹಾಂತೇಶ್ವರ ಹಿರೇಮಠದ ವೀರಮಹಾಂತೇಶ್ವರ ಶಿವಾಚಾರ್ಯರು, ಸುರಪುರದ ಕಡ್ಲಪ್ಪನವರ ಮಠದ ಪ್ರಭುಲಿಂಗ ಮಹಾಸ್ವಾಮೀಜಿ, ಕಾರ್ಯದರ್ಶಿಗಳಾಗಿ ಹೆಡಗಿಮದ್ರಾದ ಶಾಂತ ಮಲ್ಲಿಕಾರ್ಜುನ ಸ್ವಾಮೀಜಿ, ಕೆಂಭಾವಿ ಹಿರೇಮಠದ ಚನ್ನಬಸವ ಶಿವಾಚಾರ್ಯ ಸ್ವಾಮೀಜಿ, ಸಹಕಾರ್ಯದರ್ಶಿಗಳಾಗಿ ಗುಮಾಪೂರ ಮಠದ ಸಿದ್ದೇಶ್ವರ ಸ್ವಾಮೀಜಿ, ಸಗರದ ಮರಳು ಮಹಾಂತ ಶಿವಾಚಾರ್ಯರನ್ನು ಆಯ್ಕೆ ಮಾಡಲಾಯಿತು.

ಸಂಘಟನಾ ಕಾರ್ಯದರ್ಶಿಗಳಾಗಿ ದೋರನಹಳ್ಳಿ ಚಿಕ್ಕಮಠದ ಶಿವಲಿಂಗ ರಾಜೇಂದ್ರ ಶಿವಾಚಾರ್ಯರನ್ನು ಹಾಗೂ ರುಕಾಪುರದ ಗುರುಶಾಂತಮೂರ್ತಿ ಸ್ವಾಮೀಜಿ, ಖಜಾಂಚಿಯಾಗಿ ಚರಬಸವೇಶ್ವರ ಗದ್ದುಗೆ ಮಠದ ಬಸವಯ್ಯ ಶರಣರನ್ನು ಹಾಗೂ ಲಕ್ಷ್ಮೀಪುರದ ಶ್ರೀಗಿರಿ ಮಠದ ಬಸಲಿಂಗ
ದೇವರನ್ನು ಆಯ್ಕೆ ಮಾಡಲಾಗಿದೆ ಎಂದು ಮಠದ ಪ್ರಕಟಣೆ ತಿಳಿಸಿದೆ.

Advertisement

Udayavani is now on Telegram. Click here to join our channel and stay updated with the latest news.

Next