Advertisement

ಜನಸ್ನೇಹಿ ನೆರೆ ಹೊರೆ ಕಾವಲು ಸಮಿತಿ ರಚನೆ

10:16 AM Oct 02, 2019 | Suhan S |

ಬೆಂಗಳೂರು: ಜನಸ್ನೇಹಿ ಪೊಲೀಸ್‌ ವ್ಯವಸ್ಥೆಯನ್ನು ಮತ್ತಷ್ಟು ಬಲಗೊಳಿಸುವ ಕಾರ್ಯಕ್ಕೆ ಮುಂದಾಗಿರುವ ಬೆಂಗಳೂರು ದಕ್ಷಿಣ ವಿಭಾಗ ಸಾರ್ವಜನಿಕರಿಗೆ ಮತ್ತಷ್ಟು ಹತ್ತಿರವಾಗುವ ನಿಟ್ಟಿನಲ್ಲಿ “ನೆರೆ ಹೊರೆ ಕಾವಲು ಸಮಿತಿ’ ಎಂಬ ವಿಭಿನ್ನ ಯೋಜನೆ ಯನ್ನು ಕಾರ್ಯರೂಪ ಗೊಂಡಿದೆ. ಅಪರಾಧ ತಡೆಗಟ್ಟಲು ಪೊಲೀಸರಿಗೆ ಸಹಕರಿಸುವ, ಪೊಲೀಸರ ಕಾರ್ಯಕ್ಕೆ ಸಾಥ್‌ ನೀಡುವ, ಸಮಾಜಘಾತುಕ ಶಕ್ತಿಗಳ ಮೇಲೆ ಪೊಲೀಸರಂತೆಯೇ “ನೆರೆ ಹೊರೆ ಕಾವಲು ಸಮಿತಿ’ ಸದಸ್ಯರು ಕೂಡ ಕಣ್ಣಿಡಲಿದ್ದಾರೆ.

Advertisement

ಆಯಾ ಠಾಣಾಧಿಕಾರಿಯ ಉಸ್ತುವಾರಿಯಲ್ಲಿ ಕಾವಲು ಸಮಿತಿ ಸದಸ್ಯರು ಕಾರ್ಯನಿರ್ವಹಿಸಲಿದ್ದಾರೆ. ಠಾಣಾಧಿಕಾರಿ ಪೊಲೀಸ್‌ ಇನ್ಸ್‌ಪೆಕ್ಟರ್‌ ಗಳು ವಾರಕ್ಕೊಮ್ಮೆ ಸಮಿತಿ ಸದಸ್ಯರ ಜತೆ ಸಭೆ ನಡೆಸಿ ಮಾಹಿತಿ ಪಡೆದು ಕೊಳ್ಳಲಿದ್ದಾರೆ. ಈಗಾಗಲೇ ದಕ್ಷಿಣ ವಿಭಾಗದಲ್ಲಿ 100 ಮಂದಿಯನ್ನು ಸಮಿತಿಯ ಸದಸ್ಯರನ್ನಾಗಿ ನೇಮಿಸಿಕೊಂಡಿದ್ದು, ಈ ಸದಸ್ಯರಿಗೆ ಇಲಾಖೆ ಯಿಂದಲೇ ಗುರುತಿನ ಚೀಟಿ, ಬ್ಯಾಡ್ಜ್ ಹಾಗೂ ಕ್ಯಾಪ್‌ ವಿತರಿಸಲಾಗಿದೆ.

ಮಹಿಳೆಯರ ಜತೆಗಿನ ಪುಂಡರ ಅಸಭ್ಯ ವರ್ತನೆ, ಕಿಡಿಗೇಡಿತನ, ಬೈಕ್‌ ವ್ಹೀಲಿಂಗ್‌, ರ್ಯಾಶ್‌ ಡ್ರೈವಿಂಗ್‌ ಮುಂತಾದ ಘಟನೆಗಳು ಕಂಡು ಬಂದರೆ ತಪ್ಪಿತಸ್ಥರನ್ನು ಪ್ರಶ್ನಿಸುವ ಜವಾಬ್ದಾರಿಯನ್ನು ಸಮಿತಿ ಸದಸ್ಯರಿಗೆ ನೀಡಲಾಗಿದೆ. ಕಾವಲು ಸಮಿತಿಯಲ್ಲಿ ಸಾಫ್ಟ್ವೇರ್‌ ಎಂಜಿನಿ ಯರ್, ಇತರೆ ಕ್ಷೇತ್ರಗಳಲ್ಲಿರುವ ಉದ್ಯೋಗಿಗಳು, ನಿವೃತ್ತ ಉದ್ಯೋಗಿ ಗಳು, ಆಯಾ ಠಾಣಾ ವ್ಯಾಪ್ತಿಯ ಯುವಕರನ್ನು ಸೇರಿಸಿಕೊಳ್ಳ ಲಾಗಿದೆ. ಪ್ರತಿ ಯೊಬ್ಬರ ಹಿನ್ನೆಲೆಯನ್ನು ಕೂಲಂಕುಶ ವಾಗಿ ಪರಿಶೀಲಿಸಿ, ಕೌನ್ಸೆಲಿಂಗ್‌ ನಡೆಸಿ ಆಯ್ಕೆ ಮಾಡಲಾಗಿದೆ. ಪೊಲೀಸರಿಗೆ ಮಾಹಿತಿ ನೀಡಲಿದ್ದಾರೆ. ಸಮುದಾಯ ಪೊಲೀಸಿಂಗ್‌ ಮಾದರಿ ಯಲ್ಲಿಯೇ ಸಮಿತಿಯೂ ಕಾರ್ಯ ನಿರ್ವಹಿಸಲಿದೆ ಎಂದು ದಕ್ಷಿಣ ವಿಭಾಗದಡಿಸಿಪಿ ಡಾ. ರೋಹಿಣಿ ಕಟೋಚ್‌ ಸೆಪಟ್‌ ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next