Advertisement
ಸಾತನೂರು ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವನ್ನಾಗಿ ಮಾಡಬೇಕು ಎಂಬ ಕೂಗು ಇಂದು ನಿನ್ನೆಯದಲ್ಲ. ಸುಮಾರು 5 ದಶಕಗಳ ಹಿಂದಿನಿಂದಲೂ ಸಾತನೂರು ತಾಲೂಕು ಕೇಂದ್ರವಾಗಬೇಕು ಎಂಬುದುಈ ಭಾಗದ ಜನರ ಕನಸಾಗಿತ್ತು. ಸ್ಥಳೀಯ ಕೆಲಹೋರಾಟಗಾರರು ಮುಖಂಡರು ಪಕ್ಷಾತೀತವಾಗಿ ತಾಲೂಕು ಹೋರಾಟ ಸಮಿತಿ ರಚಿಸಿ ಸರ್ಕಾರಗಳಿಗೆಮನವಿ ಸಲ್ಲಿಸಿ ಗಮನಸೆಳೆದಿದ್ದರು ಅಲ್ಲದೆ ಸಾತನೂರು ತಾಲೂಕು ಕೇಂದ್ರವಾಗುವ ಎಲ್ಲ ಸೌಲಭ್ಯಗಳನ್ನುಒಳಗೊಂಡಿದ್ದರು. ರಾಜಕೀಯ ಮೇಲಾಟದಿಂದಾಗಿಸಾತನೂರು ಹೋಬಳಿ ಕೇಂದ್ರ ತಾಲೂಕು ಕೇಂದ್ರವಾಗದೆ ನೇಪಥ್ಯಕ್ಕೆ ಸರಿಯಲು ಕಾರಣವಾಯಿತು ಎಂಬುದು ಈ ಭಾಗದ ಜನರ ಅಭಿಪ್ರಾಯ.
Related Articles
Advertisement
ನೇಪಥ್ಯಕ್ಕೆ ಸರಿದ ಸಮಿತಿ: ಮೂರು ದಶಕಗಳನಿರಂತರ ಹೋರಾಟದ ನಂತರ 2006ರಲ್ಲಿ ಎಚ್.ಡಿ.ಕುಮಾರಸ್ವಾಮಿ ಅವರು ಮುಖ್ಯಮಂತ್ರಿಯಾಗಿದ್ದಸಂದರ್ಭದಲ್ಲಿ ಸಾತನೂರು ಹೋಬಳಿ ಕೇಂದ್ರವನ್ನು ಟೌನ್‌ಶಿಪ್ ಮಾಡಲು ಘೋಷಣೆ ಮಾಡಿದ್ದರು. ಅದರಂತೆ 16322 ಎಕರೆ ಭೂಮಿಯನ್ನು ಸರ್ವೆ ನಡೆಸಲಾಗಿತ್ತು. ಅಂದುಕೊಂಡಂತೆ ನಡೆದಿದ್ದರೆಸಾತನೂರು ಎರಡು ದಶಕಗಳ ಹಿಂದೆ ಕೈಗಾರಿಕೆಹಾಗೂ ನಗರವಾಗಿ ಬೆಳೆದು ಸಾತನೂರು ಅಭಿವೃದ್ಧಿಆಗಬೇಕಿತ್ತು. ಆದರೆ, ಸಾತನೂರು ಟೌನ್‌ಶಿಪ್‌ಮಾಡಿದರೆ ನಮ್ಮ ಭೂಮಿ ಕೈತಪ್ಪಲಿದೆ ಎಂದು ರೈತರುನಡೆಸಿ ಪ್ರತಿಭಟನೆಯಿಂದ ಸಾತನೂರು ಅಭಿವೃದ್ಧಿಗೆ ಅಡ್ಡಗಾಲು ಆಯಿತು ಎಂಬ ಆರೋಪ ಕೂಡ ಇದೆ.
ಬಳಿಕ 2008ರಲ್ಲಿ ಸಾತನೂರು ವಿಧಾನಸಭಾ ಕ್ಷೇತ್ರಮರು ವಿಂಗಡನೆಯಾಗಿ ಕನಕಪುರ ವಿಧಾನಸಭಾ ಕ್ಷೇತ್ರಕ್ಕೆ ವಿಲೀನಗೊಂಡು ಸಾತನೂರು ತಾಲೂಕುಸಮಿತಿ ಹೋರಾಟ ನೇಪಥ್ಯಕ್ಕೆ ಸರಿದಿತ್ತು. ಈ ಭಾಗದ ಜನರ ಕನಸು ಕನಸಾಗಿಯೇ ಉಳಿಯಿತು.
ರಾಜಕೀಯ ಮೇಲಾಟದಿಂದ ವಂಚಿತ: 2004ರಲ್ಲಿ ಹಾರೋಹಳ್ಳಿಯನ್ನು ತಾಲೂಕು ಕೇಂದ್ರವಾಗಿ ಮಾಡಿಎಂದು ಶಾಸಕ ಡಿ.ಕೆ.ಶಿವಕುಮಾರ್ ಸರ್ಕಾರಕ್ಕೆ ಪತ್ರಬರೆದಿದ್ದರಂತೆ. ಅಲ್ಲದೆ ಕಾಂಗ್ರೆಸ್ ಮತ್ತು ಜೆಡಿಎಸ್‌ಸಮಿಶ್ರ ಸರ್ಕಾರದ ಅವಧಿಯಲ್ಲಿ ಹಾರೋಹಳ್ಳಿಯನ್ನುಘೋಷಣೆ ಮಾಡಿ ಹಾರೋಹಳ್ಳಿ ಈಗಾಗಲೆ ತಾಲೂಕುಕೇಂದ್ರವಾಗಿ ರಚನೆಯಾಗಿದೆ. ರಾಜಕೀಯ ಮೇಲಾಟಮತ್ತು ಇಚ್ಛಾಶಕ್ತಿ ಕೊರತೆಯಿಂದ ಸಾತನೂರು ನೇಪಥ್ಯಕ್ಕೆ ಸರಿದಂತಾಗಿದೆ.
ಪಕ್ಷಾತೀತ ಬೆಂಬಲ ಅಗತ್ಯ: ಮತ್ತೂಮ್ಮೆ ಸಾತನೂರನ್ನು ತಾಲೂಕು ಕೇಂದ್ರವಾಗಿ ಮಾಡಬೇಕು ಎಂಬ ಕೂಗು ಮುನ್ನೆಲೆಗೆ ಬಂದಿದೆ. ಪಕ್ಷಾತೀತವಾಗಿಪ್ರಾಧಿಕಾರದ ಅಧ್ಯಕ್ಷ ಹೊನ್ನಿಗನಹಳ್ಳಿ ಜಗನ್ನಾಥ್‌ಹಾಗೂ ಜೆಡಿಎಸ್ ಮುಖಂಡ ಅನು ಕುಮಾರ್‌ಸೇರಿದಂತೆ ಇತರೆ ಮುಂಖಡರು ಮತ್ತೆ ಧ್ವನಿ ಎತ್ತಿದ್ದಾರೆ.ಸಾತನೂರು ಹೋಬಳಿ ಕೇಂದ್ರದಲ್ಲೇ ರಾಷ್ಟ್ರೀಯಹೆದ್ದಾರಿಯೂ ಹಾದುಹೋಗಿದೆ. ಸುಸಜ್ಜಿತವಾದಆಸ್ಪತ್ರೆ, ಆರಕ್ಷಕ ಠಾಣೆ, ನಾಡ ಕಚೇರಿ, ಅರಣ್ಯಇಲಾಖೆ ಸೇರಿದಂತೆ ಕೆಲ ಇಲಾಖೆಗಳಿದ್ದು, ತಾಲೂಕುಕೇಂದ್ರಕ್ಕೆ ಬೇಕಾದ ಎಲ್ಲ ಮೂಲ ಸೌಲಭ್ಯ ಹೊಂದಿದೆ.ಕ್ಷೇತ್ರದ ಶಾಸಕರು, ಸಂಸದರು ಎಲ್ಲ ರಾಜಕೀಯಮುಖಂಡರು ಪಕ್ಷಾತೀತವಾಗಿ ಕೈಜೋಡಿಸಿದರೆ ಸಾಧ್ಯ ಎಂಬುದು ಜನಾಭಿಪ್ರಾಯ. ರಾಜಕೀಯ ಇಚ್ಛಾಶಕ್ತಿ ಮತ್ತು ಪಕ್ಷಾತೀತ ಹೋರಾಟ ನಡೆಯುವುದೇ ಈಭಾಗದ ಜನರ ಕನಸು ನನಸಾಗುವುದೇ ಅಥವಾ ಮತ್ತೆ ನೇಪಥ್ಯಕ್ಕೆ ಸರಿಯುವುದೇ ಕಾದು ನೋಡಬೇಕು.
ಸಾತನೂರಿಗಿತ್ತು ವಿಶಿಷ್ಟ ಸ್ಥಾನಮಾನ : 1985 ಮಾಜಿ ಪ್ರಧಾನಿ ಎಚ್.ಡಿ. ದೇವೇಗೌಡರು ಡಿ.ಕೆ.ಶಿವಕುಮಾರ್ ವಿರುದ್ಧಗೆಲುವು ಸಾಧಿಸಿದರು. ಆ ನಂತರ 1989ರಲ್ಲಿ ಜೆಡಿಎಸ್ ಕೈತಪ್ಪಿ ಸಾತನೂರು ವಿಧಾನಸಭಾ ಕ್ಷೇತ್ರ ಕಾಂಗ್ರೆಸ್ ತೆಕ್ಕೆಗೆ ಜಾರಿತು. ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್, ವಿ.ಕೆ.ಸ್ವಾಮಿ ವಿರುದ್ಧಗೆದಿದ್ದರು. ಅಲ್ಲಿಂದ ಡಿಕೆಶಿ ರಾಜಕೀಯ ಉಜ್ವಲ ಭವಿಷ್ಯ ಆರಂಭವಾಯಿತು. ಇಂತಹ ಘಟಾನುಘಟಿ ನಾಯಕರು ಸ್ಪರ್ಧೆ ಮಾಡಿದ ಸಾತನೂರು ವಿಧಾನಸಭಾ ಕ್ಷೇತ್ರರಾಜ್ಯಮಟ್ಟದಲ್ಲಿ ಗುರುತಿಸಿಕೊಂಡು ಅಭಿವೃದ್ಧಿಯತ್ತ ದಾಪುಗಾಲು ಹಾಕುವ ಎಲ್ಲ ಅವಕಾಶಗಳಿತ್ತು.
ಹೋಬಳಿ ಕೇಂದ್ರವನ್ನು ತಾಲೂಕು ಕೇಂದ್ರವಾಗಿ ರಚನೆ ಮಾಡಲು ಎಲ್ಲ ಸೌಲಭ್ಯಗಳು ಇವೆ. ಆನೇಕ ಹೋರಾಟಗಳು ನಡೆದಿವೆ. ಸಾತನೂರು ತಾಲೂಕು ಕೇಂದ್ರ ವಾದರೆ ಅಭಿವೃದ್ಧಿಯ ಜೊತೆಗೆ ಈ ಭಾಗದ ಜನರುಅಲೆದಾಡುವುದು ತಪ್ಪಲಿದೆ. ಇದಕ್ಕೆ ಪಕ್ಷಾತೀತ ಬೆಂಬಲ ಮತ್ತು ರಾಜಕೀಯಇಚ್ಛಾಶಕ್ತಿಬೇಕು -ಹೊನ್ನಿಗನಹಳ್ಳಿ ಜಗನ್ನಾಥ್, ಅಧ್ಯಕ್ಷರು ಯೋಜನಾ ಪ್ರಾಧಿಕಾರ ಕನಕಪುರ
-ಬಾಣಗಹಳ್ಳಿ ಬಿ.ಟಿ.ಉಮೇಶ್