Advertisement

ದಸರಾ ಆಚರಣೆಗಾಗಿ ಆ್ಯಕ್ಷನ್ ಕಮಿಟಿ ರಚನೆ; 24ಗಂಟೆ ಒಳಗೆ ವರದಿ ಸಲ್ಲಿಸಲು ಸೂಚನೆ: ಶ್ರೀರಾಮುಲು

04:41 PM Oct 07, 2020 | Mithun PG |

ಮೈಸೂರು: ಸರಳ ದಸರಾ ಆಚರಣೆಗಾಗಿ ಆರೋಗ್ಯ ಇಲಾಖೆಯಿಂದ ಆಕ್ಷನ್ ಪ್ಲಾನ್ ಆಗಬೇಕು. ಅದಕ್ಕಾಗಿ ಟೆಕ್ನಿಕಲ್ ಕಮಿಟಿ ಬರಲಿದೆ. ಅದರ ಜೊತೆಗೆ ಜಿಲ್ಲಾಡಳಿತ ಸಭೆ ನಡೆಸಿ 24 ಗಂಟೆಯೊಳಗೆ ವರದಿ ಸಲ್ಲಿಸಲಿದೆ. ಈ ಬಗ್ಗೆ ನಾನು ಸಹ ಮುಖ್ಯಮಂತ್ರಿ ಜೊತೆ ಸಮಾಲೋಚನೆ ಮಾಡುತ್ತೇನೆ ಎಂದು ಮೈಸೂರಿನಲ್ಲಿ ಆರೋಗ್ಯ ಸಚಿವ ಬಿ. ಶ್ರೀರಾಮುಲು ಹೇಳಿಕೆ ನೀಡಿದ್ದಾರೆ.

Advertisement

ದಸರಾದಲ್ಲಿ ಸಾಂಸ್ಕೃತಿಕ ಕಾರ್ಯಕ್ರಮ, ದೀಪಾಲಂಕಾರ ಬೇಕೋ ? ಬೇಡವೋ ಅಥವಾ ಅರಮನೆ ಕಾರ್ಯಕ್ರಮಗಳು ಮಾತ್ರ ನಡೆಯಬೇಕಾ ? ಇವೆಲ್ಲದರ ಕುರಿತಾಗಿ  ಚರ್ಚೆ ಆಗಿದೆ. ಜನರು, ಸರ್ಕಾರದ ಮೇಲೇ ಎಲ್ಲ ಜವಾಬ್ದಾರಿ ಹಾಕಿ‌ ಸುಮ್ಮನಿರಬೇಡಿ ಬದಲಾಗಿ ಸರ್ಕಾರಕ್ಕೆ ಸಹಕಾರ ಕೊಡಿ. ಸುರಕ್ಷತೆಯಿಂದ ಸರಳ ದಸರಾ ಮಾಡಲು ಅವಕಾಶ ಕೊಡಿ ಎಂದರು.

ಅರಮನೆ ಆವರಣಕ್ಕೆ ಬರಲು 2,000 ಮಂದಿಗೆ ಮಾತ್ರ ಅವಕಾಶವೇ ? ಎನ್ನುವುದು ಟೆಕ್ನಿಕಲ್ ಕಮಿಟಿ ವರದಿ ನೀಡಿದ ನಂತರ ನಿರ್ಧಾರ ಮಾಡಲಾಗುವುದು. ಇದರಲ್ಲಿ ನಮ್ಮ ಆರೋಗ್ಯ ಇಲಾಖೆ ನಿರ್ದೇಶಕರು, ಸ್ಥಳೀಯ ಅಧಿಕಾರಿಗಳನ್ನೊಳಗೊಂಡ ಕಮಿಟಿ ಇರಲಿದೆ. ನಾಳೆಯೇ ಬಂದು 24 ಗಂಟೆಯೊಳಗೆ ಕಮಿಟಿ ವರದಿ ನೀಡಲಿದೆ. ಆ ನಂತರ ಸರಳ ದಸರಾ ಆಚರಣೆ ಬಗ್ಗೆ ಎಸ್‌ಓಪಿ ಸಿದ್ದಪಡಿಸಿ ನಿರ್ಧಾರ ಕೈಗೊಳ್ಳಲಾಗುವುದು ಎಂದು ತಿಳಿಸಿದರು.

ಮಾಸ್ಕ್‌ ಧರಿಸದಿದ್ದರೇ ವಿಐಪಿ ಗಳಿಗೂ ದಂಡ ಹಾಕುತ್ತೇವೆ. ಯಾರು ಮಾಸ್ಕ್ ಧರಿಸುವುದಿಲ್ಲವೋ ಅವರೆಲ್ಲರಿಗೂ ದಂಡ ಹಾಕುತ್ತೇವೆ. ಮಾಸ್ಕ್ ಧರಿಸದೇ ಇರುವವರಿಗೆ ದಂಡ ಹಾಕಲು ನಮಗೂ ಇಷ್ಟ ಇಲ್ಲ. ಆದರೆ ಜನರಿಗೆ ಜಾಗೃತಿ ಮೂಡಿಸಲು ಈ ಕ್ರಮ ಕೈಗೊಂಡಿದ್ದೇವೆ. ಎಲ್ಲರಿಗೂ ಈ ಕಾನೂನು ಅನ್ವಯವಾಗಲಿದೆ ಎಂದು ಶ್ರೀರಾಮುಲು ತಿಳಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next