Advertisement

ಚುನಾವಣೆ ಬಳಿಕ ಬೆಂಬಲ ಬೆಲೆ ಸಮಿತಿ ರಚನೆ

12:30 AM Feb 05, 2022 | Team Udayavani |

ಹೊಸದಿಲ್ಲಿ: ದೇಶದಲ್ಲಿ ಸದ್ಯದಲ್ಲೇ ನಡೆಯಲಿರುವ ಪಂಚರಾಜ್ಯಗಳ ವಿಧಾನಸಭಾ ಚುನಾವಣೆಗಳ ಅನಂತರ ರೈತರ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿರ್ಧರಿಸುವ ಸಲುವಾಗಿ ಸಮಿತಿಯೊಂದನ್ನು ರಚಿಸುವುದಾಗಿ ಕೇಂದ್ರ ಕೃಷಿ ಸಚಿವ ನರೇಂದ್ರ ಸಿಂಗ್‌ ತೋಮರ್‌ ತಿಳಿಸಿದ್ದಾರೆ.

Advertisement

ರಾಜ್ಯಸಭೆಯಲ್ಲಿ ಮಾತನಾಡಿದ ಅವರು, “ದೇಶದ ನಾನಾ ಭಾಗಗಳಲ್ಲಿ ಫ‌ಸಲು ರೈತರ ಕೈಗೆ ಬರುವ ಅವಧಿ ಹಾಗೂ ಕಾಲಘಟ್ಟ ಮುಂತಾದ ವಿಚಾರಗಳಲ್ಲಿ ವ್ಯತ್ಯಾಸಗಳಿವೆ. ಅವೆಲ್ಲವನ್ನೂ ಅಧ್ಯಯನ ಮಾಡಿ ಬೆಳೆಗಳಿಗೆ ಕನಿಷ್ಠ ಬೆಂಬಲ ಬೆಲೆ ನಿಗದಿಪಡಿಸಬೇಕಾಗುತ್ತದೆ. ಅದಕ್ಕಾಗಿ ಸಮಿತಿ ರಚಿಸಲು ಸಿದ್ಧರಿದ್ದೆವು. ಆದರೆ ಪಂಚರಾಜ್ಯಗಳ ಚುನಾವಣೆ ಹತ್ತಿರ ಇದ್ದಿದ್ದರಿಂದ ಸಮಿತಿ ರಚನೆಯ ಔಚಿತ್ಯದ ಬಗ್ಗೆ ಕೇಂದ್ರ ಚುನಾವಣ ಆಯೋಗಕ್ಕೆ ಪತ್ರದ ಮುಖೇನ ಕೇಳಲಾಗಿತ್ತು. ಇದಕ್ಕೆ ಉತ್ತರಿಸಿದ ಆಯೋಗ, ಚುನಾವಣೆಗಳ ಅನಂತರ ಸಮಿತಿ ರಚಿಸಬೇಕೆಂದು ಸೂಚಿಸಿತ್ತು. ಹಾಗಾಗಿ ಚುನಾವಣೆ ಮುಗಿಯುವುದನ್ನು ಕೇಂದ್ರ ಕಾಯುತ್ತಿದೆ’ ಎಂದು ತೋಮರ್‌ ತಿಳಿಸಿದ್ದಾರೆ.

ಇದೇ ವೇಳೆ, 2018-19ರಲ್ಲಿ ತಜ್ಞರ ಸಮಿತಿಯು ಈಗ ಚಾಲ್ತಿಯಲ್ಲಿರುವ ಕನಿಷ್ಠ ಬೆಂಬಲ ಬೆಲೆಗಳನ್ನು ಹೆಚ್ಚಿಸುವಂತೆ ನೀಡಿದ್ದ ಸಲಹೆಯನ್ನು ಅನುಷ್ಠಾನಗೊಳಿಸಲು ಪ್ರಧಾನಿ ಮೋದಿ ಒಪ್ಪಿದ್ದಾರೆ ಎಂದೂ ತಿಳಿಸಿದರು.

ಇದನ್ನೂ ಓದಿ:ಪರಿಸರ ರಕ್ಷಣೆ ತುರ್ತು ಆದ್ಯತೆಯಾಗಲಿ: ಸಿಎಂ ಬಸವರಾಜ ಬೊಮ್ಮಾಯಿ

ಜನಸಂಖ್ಯಾ ನಿಯಂತ್ರಣ ಮಸೂದೆ: ರಾಜ್ಯಸಭೆಯಲ್ಲಿ ಬಿಜೆಪಿ ಸಂಸದ ರಾಕೇಶ್‌ ಸಿನ್ಹಾ ಮಂಡಿಸಿರುವ 2019ರ ಜನಸಂಖ್ಯಾ ನಿಯಂತ್ರಣ ಖಾಸಗಿ ಮಸೂದೆಯ ಬಗ್ಗೆ ಚರ್ಚೆಗಳು ಶುರುವಾದವು.ಈ ಸಂದರ್ಭದಲ್ಲಿ ಮಾತನಾಡಿದ ಬಿಜೆಪಿ ನಾಯಕ ವಿಕಾಸ್‌ , ಎರಡು ಮಕ್ಕಳಾದ ಮೇಲೆ ಮೂರನೇ ಮಗು ಮಾಡಿಕೊಂಡ ವರಿಗೆ ಶಿಕ್ಷೆ ವಿಧಿಸುವ ಬಗ್ಗೆ ಮಸೂದೆಯಲ್ಲಿ ಇರುವ ಪ್ರಸ್ತಾವನೆಯನ್ನು ಕೈಬಿಡಬೇಕು ಎಂದು ಆಗ್ರಹಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕರ್ನಾಟಕದ ರಾಜ್ಯಸಭಾ ಸದಸ್ಯ ಡಾ| ಎಲ್‌. ಹನುಮಂತಯ್ಯ, ನಿರ್ದಿಷ್ಟ ಸಮು ದಾಯದಿಂದಲೇ ದೇಶದಲ್ಲಿ ಜನಸಂಖ್ಯೆ ಅಗಾಧವಾಗಿ ಬೆಳೆದಿದೆ ಎಂದು ಹುಯಿಲೆಬ್ಬಿಸಲಾಗಿದೆ. ಇಂಥ ಅಪಪ್ರಚಾರಗಳನ್ನು ಬಿಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next