Advertisement

ಕಬ್ಬು ಬಾಕಿ ಪಾವತಿಗೆ ಆಗ್ರಹಿಸಿ ಅಹೋರಾತ್ರಿ ಧರಣಿ

03:42 PM May 08, 2019 | Suhan S |

ಭಾರತೀನಗರ: ರೈತರು ಸರಬರಾಜು ಮಾಡಿದ ಕಬ್ಬು ಬಾಕಿ ಪಾವತಿಸಲು ಆಗ್ರಹಿಸಿ ಚಾಂಷುಗರ್‌ ಕಾರ್ಖಾನೆ ವಿರುದ್ಧ ರೊಚ್ಚಿಗೆದ್ದ ರೈತರು ಕಾರ್ಮಿ ಕರನ್ನು ಕೆಲಸಕ್ಕೆ ತೆರಳದಂತೆ ಅಡ್ಡಗಟ್ಟಿ ಮುಖ್ಯದ್ವಾರದ ಬಳಿ ಅಹೋರಾತ್ರಿ ಧರಣಿ ನಡೆಸಿದರು.

Advertisement

ರೈತರು ಬಾಕಿ ಹಣಕ್ಕಾಗಿ ಹಲವಾರು ಪ್ರತಿಭಟನೆ ನಡೆಸಿದರೂ ಕ್ರಮ ಕೈಗೊಳ್ಳದೆ ರೈತರನ್ನು ಸತಾಯಿಸುತ್ತಿದ್ದ ಹಿನ್ನೆಲೆಯಲ್ಲಿ ಆಡಳಿತ ಮಂಡಳಿ ವಿರುದ್ಧ ರೊಚ್ಚಿಗೆದ್ದ ರೈತರು ಕಾರ್ಮಿಕರು ಕೆಲಸಕ್ಕೆ ತೆರಳುವ ವೇಳೆ ಮುಖ್ಯದ್ವಾರದ ಬಳಿ ಅಡ್ಡಗಟ್ಟಿ ಆಡಳಿತ ಮಂಡಳಿ ಬಾಕಿ ಹಣ ನೀಡುವವರೆಗೂ ಒಳಪ್ರವೇಶಿಸದಂತೆ ತಡೆದು ಕಬ್ಬು ಬೆಳೆಗಾರರು ಅಹೋರಾತ್ರಿ ಧರಣಿ ಕುಳಿತರು.

ರೈತರ ಅಲೆದಾಟ: ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿ ಆರೇಳು ತಿಂಗಳು ಕಳೆದಿದೆ. 35 ಕೋಟಿ ರೂ. ಬಾಕಿ ಹಣ ಪಾವತಿಸಬೇಕಿದೆ. ಬಾಕಿ ಪಾವತಿಸದ ಕಾರಣ ರೈತರು ಆರ್ಥಿಕ ಮುಗ್ಗಟ್ಟಿಗೆ ಸಿಲುಕಿದ್ದಾರೆ.

ರೈತರು ಪ್ರತಿಭಟಿಸಿದಾಗಲೆಲ್ಲಾ ನಾಲ್ಕೈದು ಬಾರಿ ಕಾಲಾವಕಾಶ ಕೇಳಿಕೊಂಡಿದ್ದರು. ಆದರೂ ತಿಂಗಳುಗಳು ಉರುಳಿದರೂ ಬಾಕಿ ಮಾತ್ರ ಪಾವತಿಯಾಗಿಲ್ಲ. ಸಾಲ ಮಾಡಿ ಕಬ್ಬು ಬೆಳೆದು ಕಾರ್ಖಾನೆಗೆ ಸರಬರಾಜು ಮಾಡಿ ಹಣಕ್ಕಾಗಿ ಅಲೆಯುವಂತಾಗಿದೆ. ಆಡಳಿತ ಮಂಡಳಿ ರೈತರನ್ನು ಗೋಳಾಡಿಸುತ್ತಿದೆ.

ರೈತರ ಸಹನೆ, ತಾಳ್ಮೆ ಮೀರಿ ಹೋಗಿದೆ. ಹಣ ಕೊಡುವವರೆಗೂ ಕಾರ್ಖಾನೆ ಬಿಟ್ಟು ಕದಲುವುದಿಲ್ಲ ಎಂದು ಪ್ರತಿಭಟನಾಕಾರರು ಪಟ್ಟು ಹಿಡಿದು ಕುಳಿತರು.

Advertisement

ಹೊರಗುಳಿದ ನೌಕರರು: ರೈತರು ಕಾರ್ಖಾನೆಗೆ ಬೀಗ ಜಡಿದು ಪ್ರತಿಭಟನೆ ನಡೆಸುತ್ತಿದ್ದುದರಿಂದ 500ಕ್ಕೂ ಹೆಚ್ಚು ಕಾರ್ಮಿಕರು (ನೌಕರರು) ಒಳಗೆ ಹೋಗಲಾಗದೆ ಹೊರಗೆ ಉಳಿಯುವಂತಾಯಿತು. ಇದರಿಂದ ಕಾರ್ಮಿಕರು ಕಾರ್ಖಾನೆಯ ರಸ್ತೆ ಬದಿಯಲ್ಲೇ ಸಂಜೆಯವರೆಗೂ ನಿಲ್ಲುವಂತಾಯಿತು.

ಪ್ರತಿಭಟನೆಯಲ್ಲಿ ಶೆಟ್ಟಹಳ್ಳಿ ಹೊನ್ನೇಗೌಡ, ಬೋರಾಪುರ ಪ್ರಕಾಶ್‌, ಕರಡಕೆರೆ ಹನುಮಂತು, ಗೌಡಯ್ಯನದೊಡ್ಡಿ ಭರತ್‌, ಕಲ್ಲಳ್ಳಿ ಶಿವಣ್ಣ, ಕುಳ್ಳೇಗೌಡ ಪರಿಮಳ, ಸ್ವಾಮಿ, ಸಂಪತ್‌, ನಾರಾಯಣ್‌ ಸುತ್ತಮುತ್ತಲ ಗ್ರಾಮಗಳ ರೈತರು ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next